ಕಣ್ಣೀರ ಹನಿಗಳು ಹೃದಯದಾಳಕ್ಕಿಳಿದು ಘನವಾಗುತ್ತಾ ಹೋದಂತೆ ಮಾತುಗಳು ಮೌನವಾಗುತ್ತಾ ಹೋದವು. ಈಗ ಜನ ಕೇಳುತ್ತಿದ್ದಾರೆ ನಿನ್ನ ಕಥೆ ಏನೆ೦ದು ? *****...

ಹಾಲಿಂದ ಮಾಡಿದರೊ ನಿನ್ನ ಮಲ್ಲಿಗೆ ಹೂವಿಂದ ಮಾಡಿದರೊ ಈ ಇಂಥ ಅಂದವ ಹೇಗೆ ಮಾಡಿದರೋ ಕಸ್ತೂರಿಯಿಂದ ಮಾಡಿದರೊ ಚಂದನದಿಂದ ಮಾಡಿದರೊ ಪಾರಿಜಾತದ ಗಂಧದಿಂದ ಮಾಡಿದರೊ ಈ ಮೈಯ ಸೌಗಂಧವ ಹೇಗೆ ಮಾಡಿದರೋ ಬಿದಿರೆಲೆಯಿಂದ ಮಾಡಿದರೊ ಕಬ್ಬಿನ ಕದಿರಿಂದ ಮಾಡಿದರೊ ...

ಬೆಂಗಳೂರೆಂಬ ಪಟ್ಟಣದಲ್ಲಿದ್ದ ರಾಜಕುಮಾರ ಬಡಿಗೇರ, ಜಯಪ್ಪ, ಶಂಕರ್‌ ಗುಡಿಮನಿ- ಮೂವರು ಸೇರಿ ತಮ್ಮಳ್ಳಿಗೆ ಮಕರ ಸಂಕ್ರಾಂತಿ ಹಬ್ಬಕ್ಕೆ ಕಾರಿನಲ್ಲಿ ತೆರಳಿದರು. ಹಳ್ಳಿಯಲ್ಲಿ ಬಾಲ್ಯದ ಗೆಳೆಯ ಲಕ್ಷ್ಮಣ ಪಾತ್ರೋಟನೊಂದಿಗೆ ಹೊಲ, ಗದ್ದೆ, ತೋಟ, ಹಳ್ಳ, ...

ನಮ್ಮ ಶತ್ರುವು ನಮಗೆ ಕಾಣುತ್ತಿಲ್ಲ ವಿಜಯವು ಹೇಗೆ…. ಇನ್ನು ವಿಜಯವು ಹೇಗೆ? ಕಾಣುವ ದಾರಿ ಕಂಡರೂ ತುಳಿಯುತ್ತಿಲ್ಲ ಮಾತುಗಳೇಕೆ…. ಇನ್ನು ಭವಿಷ್ಯ ಹೇಗೆ? //ಪ// ಭೂಮಿಗೆ ಇಲ್ಲ ಬರ; ಆದರೂ ಕೊಳೆಗೇರಿಗಳು ನದಿಗಳಿಗಿಲ್ಲ ಬರ; ಆದರೂ ಹೋರ...

ನನ್ನಮ್ಮ ಬಂದಳು ನನ್ನಪ್ಪ ಬಂದರು ನನ್ನಣ್ಣ ತಮ್ಮದಿರು ನನ್ನಕ್ಕ ತಂಗೇರು, ನನ್ನವರು ಬಂದರೆಂದು ಸಂಭ್ರಮ ಪಡುವಂಗಿಲ್ಲ ಸ್ವತಂತ್ರವಾಗಿ ಒಂದು ಕರ್ರಂದು ಬೆಳ್ಳಂದು ಮಾಡಿಡುವಂಗಿಲ್ಲ ಕಷ್ಟ, ನಷ್ಟ ಅಂದರೆ ಕೈಲಾದ್ದ ಮಾಡುವಂಗಿಲ್ಲ ಆದರೂ… ಈ ಮನೆ,...

ಆಶೆ ಬಿಡು ಎಂದ ಬುದ್ಧ ಏನು ಮಾಡಲಿ ನಾನಿಲ್ಲ ಸಿದ್ಧ. ಬಯಸದೆ ಹುಟ್ಟಿ ಬಂದೆ ಬಯಕೆಯ ಬುಟ್ಟಿಯಾದೆ ಬುಟ್ಟಿಯನ್ನೇ ನೆಚ್ಚಿಕೊಂಡೆ ಗಂಡ ಮಕ್ಕಳ ಹಚ್ಚಿಕೊಂಡೆ ಬದುಕನ್ನ ಒಪ್ಪಿಕೊಂಡೆ ಬೆಂಕಿಯನ್ನ ಅಪ್ಪಿಕೊಂಡೆ ಆಶೆ ಬಿಡು ಎಂದ ಬುದ್ಧ ಏನು ಮಾಡಲಿ ನಾ ಬದ್ಧ...

“ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?” ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. “ಥೂ ಗುಬ್ಬಿ, ಮಲ್ಲಾಡದಾಗ ನಿನಗಿನ್ನೂ ಮಳೀನ ಆಗಿಲ್ಲ! ಸುಳ್ಳಽ ಇಲ...

ಗುಡ್ಡ-ಬೆಟ್ಟ ಸಾಲು-ಸಾಲೇ-ಸಾಲು ಗಗನಚುಂಬಿ ಕೊಡಚಾದ್ರಿಯಲಿ ಮನತಣಿಯೇ ಕೈಬೀಸಿ ಕರೆತಿಹವು ಎತ್ತರೆತ್ತರ ಮರ-ಗಿಡ ಕಣ್ಮನಕೆ ಕಾನು-ಕಂಪು ಕರಿ ಕಲ್ಲು ಗರ್ಭದಲಿ ಚಿಮ್ಮುವ ಜಲಧಾರೆಯಲಿ ಬೀಸುವ ತಂಗಾಳಿ ಮನಕೊಂದು ಉನ್ಮತ್ತಹಿತವು ನೇಸರನುದಯದಿ ಪಳ-ಪಳನೆ ಹೊ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...