ಕನಸು ಕಾಣುತ್ತಿದ್ದೇವೆ ಮುಂಬರುವ ದಿನಗಳಿಗಾಗಿ ಆಸೆ ಭರವಸೆಯ ಹೊರೆ ಹೊತ್ತು ತುಡಿಯುತಿದೆ ಜೀವ ಮಿಡಿಯುತಿದೆ ಜೀವ ಕಾತರಿಸುತಲಿವೆ ಕಂಗಳು ಬರುವ ನಾಳೆಗಳಿಗಾಗಿ ಎಂದು ಬರುವುದೋ ರಾಮರಾಜ್ಯ ಅಳಿಸಿ ರಾವಣರ ಸಾಮ್ರಾಜ್ಯ ಹಿಂದೆ ಇತ್ತಂತೆ ಸುಂದರ ಸುಭಿಕ್ಷಕ...

ಅಯ್ಯಾ ನಿನ್ನ ಮುಟ್ಟಿ ಮುಟ್ಟದೆನ್ನ ಮನ ನೋಡಾ ಬಿಚ್ಚಿ ಬೀಸರವಾಯಿತ್ತೆನ್ನ ಮನ ಹೊಳಲ ಸುಂಗಿಕಗನಂತೆ ಹೊದಕುಳಿಗೊಂಡಿತ್ತೆನ್ನ ಮನ ಎರಡೆಂಬುದ ಮರೆದು ಬರಡಾಗದೆನ್ನ ಮನ ನೀನು ಆನಪ್ಪ ಪರಿಯೆಂತು ಹೇಳಾ ಚೆನ್ನಮಲ್ಲಿಕಾರ್ಜುನಾ [ಬೀಸರ-ವ್ಯರ್ಥ, ಹೊಳಲ ಸುಂಕ...

ಏನುಬೇಡಲಿ ಬಂದು ಭಾರತಿಯೆ ನಿನ್ನ | ಮಾನವಂತಿಯೆ ಜನನಿ ಸಲಹು ನೀನೆನ್ನ ||ಪಲ್ಲ|| ಬಂಗಾರ ಬೇಡುವೆನೆ ಬಳಿದೆಲ್ಲ ಪೋಗಿಹುದು | ಶೃಂಗಾರ ಬೇಡುವೆನೆ ಶಿವನ ಮನೆಯು || ಮಂಗನಂತಿಹ ಮನವು ಇಂಗಿತವನರಿಯದಲೆ | ಅಂಗಹೀನನ ತೆರದಿ ತಿರುಗುವದಕಂಡು || ೧ || ಅನ್...

ಚಲನೆಯ ಗತಿಯಲ್ಲಿ ನಿನ್ನ ನಾದ ಹೂವುಗಳ ಅರಳಿಸಿ ಗಂಧ ತೀಡಿ, ತೊಟ್ಟಿಲ ಜೀಕಿ ನಡೆದ ದಾರಿ ತುಂಬ, ಎಚ್ಚರದ ಹೆಜ್ಜೆಗಳು. ನದಿಯಲ್ಲಿ ನಾವಿಕನ ಹುಟ್ಟಿ ದೀರ್‍ಘ ಅಲೆಗಳು. ಕಾಲಬೆರಳ ಸಂದಿಯಲಿ ಹುಲ್ಲುಗರಿ ಚಿತ್ತಾರವ ಅರಳಿಸಿ, ಹಿಮ ಮಣಿಯ ತಂಪು ಹರಡಿ ತಿಳಿ...

ನೇಸರದಾ ತಂಪಲ್ಲಿ ಈಶನಿಹನೋ ಬೇಸರವೇತಕೋ ಮನವೇ ಈಶ ಮಹೇಶ ಪ್ರಭು ಮಲ್ಲೇಶ ಈಶ ಲಿಂಗೇಶ ಸರ್ವೇಶನವನು ಬೇಸರವೇತಕೋ ಮನವೇ ಸತಿ ಶಕ್ತಿಯು ಸಸ್ಯ ಶ್ಯಾಮಲೆ ಜೀವ ಕೋಟಿಗೆ ಉಸಿರಾಗಿಹಳು ಬೇಸರವೇತಕೋ ಮನವೇ ರೆಂಬೆಕೊಂಬೆಗಳಲ್ಲಿ ಹಸಿರು ಎಲೆ ಬಣ್ಣ ಚಿತ್ತಾರ ನಾದ...

ಜೀವನವೊಂದು ದರ್ಪಣದಂತಿರಬೇಕು ದರ್ಪಣಕ್ಕೆ ಎಂದು ಭೇದ ಭಾವವುಂಟೆ ಪಾರದರ್ಶಕದಂತೆ ಅದು ಹೊಳೆಯುತ್ತಿರಬೇಕು ಅದಕ್ಕೆ ತನ್ನ ತನವೆಂಬ ಸ್ವಾರ್ಥವುಂಟೆ ಆತ್ಮವೆಂಬುದು ದರ್ಪಣದ ಪರಿಛಾಯೆ ನಿತ್ಯವೂ ನಿರ್ಮಲ ಚೇತೋ ಹಾರಿ ಮಲಿನ ಮನಸ್ಸು ಆತ್ಮಕ್ಕೆ ಅಂಟಿದರಾಯ್...

ವಾಗ್ದೇವಿಯು ಮಠಕ್ಕೆ ಬಂದು ತನಗೂ ಸುಶೀಲೆಗೂ ನಡೆದ ಝಟಾ ಪಟಯ ಚರಿತ್ರೆಯನ್ನು ಚಂಚಲನೇತ್ರರಿಗೆ ಅರುಹಿದಳು. ಅವರು ಅವಳ ಮುಖದಾಕ್ಷಿಣ್ಯಕ್ಕಾಗಿ ಸಿಟ್ಟು ಬಂದವರಂತೆ ಮುಖಛಾಯೆ ಬದಲಾಯಿಸಿಕೊಂಡಾಗ್ಯೂ ಸುಶೀಲಾಬಾಯಿಯ ತಪ್ಪೇನೂ ಅವರಿಗೆ ಕಂಡು ಬಾರದೆ ವಾಗ್ದ...

ಮನದ ರಿಂಗಣದ ರಂಗಭೂಮಿಯನು ಅಗೆದು ಬಗೆದು ನಾನು ಆತ್ಮಮೌನಿ ಮುನಿಯಾದೆ ಬಾನಿನಲಿ ನಿಂತ ಹಾಗೆ ಭಾನು. ಪ್ರಾಣ ಅಲ್ಲ; ಹೊತ್ತರಿಯೆ ನಾನು; ಕ್ಷಯರಹಿತ ಚಂದ್ರನಾಗಿ ಸನಾತನದ ಆ ಬ್ರಹ್ಮಗೋಲದಲಿ ನಾನೆ ಕೇಂದ್ರವಾಗಿ. ಮುಕ್ತನಾದೆ ನಾ, ತೀರಿ ಹೋಯ್ತು, ಆ ಅಲ್ಪ...

ತೋಡಿ ಚೆಲುವು ಹಿರಿಯದೊ !-ಹೃದಯ- ದೋಲವು ಹಿರಿಯದೊ….! ಚೆಲುವಿನಲಿಯೆ ಒಲವು ಇಹುದೊ! ಒಲವಿನಲಿಯೆ ಚೆಲುವು ಇಹುದೊ! ಚೆಲುವು ಹಿರಿಯದೋ!-ಹೃದಯ- ದೊಲವು ಹಿರಿಯ….! ೧ ಇನಿಯನಗಲ ನೆನಸಿ ನೆನಸಿ ಮನೆಯಲಿರಲು ಬೇಸರೆನಿಸಿ ದಣಿದ ಮನವ ತಣಿಸಲೆಣ...

ಸಮಯ ಸಾಕಾಗುವುದಿಲ್ಲ ಎನ್ನುವುದೊಂದು ನೆಪ ಅಷ್ಟೇನೇ| ತನ್ನೆಲ್ಲಾ ಇಷ್ಟಾರ್ಥಳಿಗಾಗಿ ಸಮಯ ಸರಿಹೊಂದಿಸಿಕೊಳ್ಳುವ ನಾವು| ಬೇರೆಲ್ಲಾದರಲ್ಲಿ ಮುಂದು ಬೇಡವೆನಿಸಿರುವುದಕೆ ಈ ಸೋಗು|| ದೇವಸ್ಥಾನದ ಮಹಾಮಂಗಳಾರತಿ ಸಮಯಕ್ಕೆ ಸರಿಯಾಗಿ ಹೋಗಲು ಸಮಯ ಸಾಕಾಗದು|...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...