ನೇಸರದಾ ತಂಪಲ್ಲಿ ಈಶನಿಹನೋ
ಬೇಸರವೇತಕೋ ಮನವೇ
ಈಶ ಮಹೇಶ ಪ್ರಭು ಮಲ್ಲೇಶ
ಈಶ ಲಿಂಗೇಶ ಸರ್ವೇಶನವನು
ಬೇಸರವೇತಕೋ ಮನವೇ
ಸತಿ ಶಕ್ತಿಯು ಸಸ್ಯ ಶ್ಯಾಮಲೆ
ಜೀವ ಕೋಟಿಗೆ ಉಸಿರಾಗಿಹಳು
ಬೇಸರವೇತಕೋ ಮನವೇ
ರೆಂಬೆಕೊಂಬೆಗಳಲ್ಲಿ ಹಸಿರು ಎಲೆ
ಬಣ್ಣ ಚಿತ್ತಾರ ನಾದ ಇಂಚರದಲಿ
ಈಶನು ಬೇಸರವೇತಕೋ ಮನವೇ
ಸುಯ್‌ಗುಟ್ಟುವ ತಂಗಾಳಿ ಧರೆ ಆಗಸ
ಕಲ್ಲು ಮಣ್ಣು ಬಂಡೆ ದಡದದಲ್ಲಿಹನು
ಬೇಸರವೇತಕೋ ಮನವೇ
ಧರ್ಮ ಕರ್ಮ ಮರ್ಮ ಭೇದಗಳಲ್ಲಿ
ಸುಳ್ಳು ಮೋಸ ಕಪಟ ವಂಚನೆ ಮೋಹದಲ್ಲಿಹನೊ
ಎಚ್ಚರ! ಬೇಸರವೇತಕೋ ಮನವೇ
ನ್ಯಾಯ ಅನ್ಯಾಯಗಳ ಬೆಲೆಯ ಕಟ್ಟಿ ಹಿಡಿದು
ನೋಡುವಾತನು ಜನ್ಮ ಚಕ್ರದಾತ ಮುಕ್ಕಣನೂ
ಬೇಸರವೇತಕೋ ಮನವೇ
ವೇಷಭೂಷಣ ಜಂಗಮ ಸಂಗಮ ಉಂಬಲಿಂಗ
ಮಹೇಂದ್ರನೂ ಮಸಣವಾಸಿ ರುದ್ರನಿವನು
ಬೇಸರವೇತಕೋ ಮನವೇ
ದಾನ ಮಾನಿಯೂ ಅನ್ನದಾತ ಯೋಗಿಯು
ಭಾಗಿಯಾಗಿ ಮೌನದಲ್ಲಿ ಅವನು
ಬೇಸರವೇತಕೋ ಮನವೇ
ಶಿಷ್ಟನಾಗಿ ವಿಶಿಷ್ಟ ಜ್ಞಾನಿಯಾಗೋ
ಬೇಸರವೆಂದರೆ ಅರ್ಥವಿಲ್ಲ ಕಾಯಕ
ಸಿದ್ದಿ ಮಾಯಕ ಭವಭಾವ ಸಿದ್ದ ನೀನು
ಸರ್ವಾಂತರ್ಯಾಮಿ ಅವನ ಕಾಣಬೇಕು ಮನುಜ
ಬೇಸರವಿಲ್ಲದ ನೇಸರ ತಂಪಲ್ಲಿ
ವಿಹರಿಸು ಚೈತನ್ಯ ತುಂಬಿ
ನೇಸರನ ಗೆಲುವಿನ ಹಾದಿಯಲಿ
ನಡೆಯಬೇಕು ಮನುಜ
*****