ಜೀವನವೊಂದು ದರ್ಪಣದಂತಿರಬೇಕು
ದರ್ಪಣಕ್ಕೆ ಎಂದು ಭೇದ ಭಾವವುಂಟೆ
ಪಾರದರ್ಶಕದಂತೆ ಅದು ಹೊಳೆಯುತ್ತಿರಬೇಕು
ಅದಕ್ಕೆ ತನ್ನ ತನವೆಂಬ ಸ್ವಾರ್ಥವುಂಟೆ
ಆತ್ಮವೆಂಬುದು ದರ್ಪಣದ ಪರಿಛಾಯೆ
ನಿತ್ಯವೂ ನಿರ್ಮಲ ಚೇತೋ ಹಾರಿ
ಮಲಿನ ಮನಸ್ಸು ಆತ್ಮಕ್ಕೆ ಅಂಟಿದರಾಯ್ತು
ಭಗವತ್ತ ನಾಮ ಮರೆಸಿ ಬಿಡುವ ವಿನಾಶಕಾರಿ
ದರ್ಪಣಕ್ಕೆ ಕಶ್ಮಲದಿ ಬೇರ್ಪಡಿಸುವಂತೆ
ಆತ್ಮವನು ಸದಾ ಪವಿತ್ರವಾಗಿಡಬೇಕು
ಆತ್ಮನಲಿ ಪರಮಾತ್ಮನ ಮೊಗ ಕಾಣುವಂತೆ
ಸದಾ ಹೃದಯದಲಿ ತಾ ಹೊಳೆಯುತಿರಬೇಕು
ಬಾಳಿನ ಗುರಿ ಏನೆಂಬುದು ಅರಿತಿರಬೇಕು
ಸದಾ ಪರಮಾತ್ಮನ ಧ್ಯಾನಿಸಿರಬೇಕು
ಯಾವ ಕ್ಷಣದಲ್ಲೂ ಭಗತ್ಕೃಪೆ ಆಗಲಿಹುದು
ಮಾಣಿಕ್ಯ ವಿಠಲನಿಗಾಗಿ ಚಡಪಡಿಸಬೇಕು
*****