ವಾಗ್ದೇವಿ – ೩೧

ವಾಗ್ದೇವಿ – ೩೧

ವಾಗ್ದೇವಿಯು ಮಠಕ್ಕೆ ಬಂದು ತನಗೂ ಸುಶೀಲೆಗೂ ನಡೆದ ಝಟಾ ಪಟಯ ಚರಿತ್ರೆಯನ್ನು ಚಂಚಲನೇತ್ರರಿಗೆ ಅರುಹಿದಳು. ಅವರು ಅವಳ ಮುಖದಾಕ್ಷಿಣ್ಯಕ್ಕಾಗಿ ಸಿಟ್ಟು ಬಂದವರಂತೆ ಮುಖಛಾಯೆ ಬದಲಾಯಿಸಿಕೊಂಡಾಗ್ಯೂ ಸುಶೀಲಾಬಾಯಿಯ ತಪ್ಪೇನೂ ಅವರಿಗೆ ಕಂಡು ಬಾರದೆ ವಾಗ್ದೇವಿಗೆ ದುರಹಂಕಾರ ಬಂತೆಂದು ಪಶ್ಚಾತ್ತಾಪ ಪಟ್ಟರು. ಈ ಜಗಳದ ವಾರ್ತೆಯೂ ಊರಲ್ಲಿ ಸರ್ವತ್ರ ತುಂಬಿತು. ಅದರ ಪೂರ್ವಾಪರವನ್ನು ಕೇಳಿದರೆಲ್ಲರೂ ವಾಗ್ದೇವಿಯೇ ತಪ್ಪುಗಾರಳೆಂದು ನಿಶ್ಚ ಯಿಸಿದರು. ಮಗನ ಉಪನಯನವಾದಂದಿಥಿಂದ ವಾಗ್ದೇವಿಯ ಚರ್ಯಗ ಳೆಲ್ಲಾ ವಿಪರೀತವಾಗಿ ವೆಂಕಟಪತಿ ಆಚಾರ್ಯನ ಮನಸ್ಸಿಗೂ ತೋರಿದವು. ಆದರೆ ಅವಳ ಕೂಡೆ ಆ ಕುರಿತು ಪ್ರಸ್ತಾಪಮಾಡಿದರೆ ಏನೂ ಪ್ರಯೋಜನವಿಲ್ಲನೆಂದು ಮೌನವಾದನು. ಮಠದಲ್ಲಿರುವ ಸರ್ವರಿಗೂ ವಾಗ್ದೇವಿಯ ಈಗಿನ ಗುಣಗಳು ನಿಷ್ಟುರವಾಗಿ ತೋರಿದವು. ಅಸ್ವಸ್ಥದಲ್ಲಿದ್ದು ಚಾಪೆ ಯಿಂದ ಏಳಕೂಡದೆ ತಮ್ಮಣ್ಣ ಭಟ್ಟನು ತನ್ನ ಮಗಳ ದುರ್ಗುಣಗಳು ಹೆಚ್ಚುವದು ನೋಡಿ ವ್ಯಾಕುಲಪಟ್ಟನು. ಈ ಕಾಲದಲ್ಲಿ ತಾನು ಬುದ್ಧಿ ಹೇಳಿದಕೆ ಅವಳಿಗೆ ಅದು ನಾಟದೆಂಬ ಸಂದೇಹದಿಂದ ಏನೂ ತಿಳಿಯದವನಂತೆ ಇದ್ದುಕೊಳ್ಳುವದೇ ಅವನಿಗೆ ಲೇಸಾಗಿ ತೋಚಿತು.

ಆಬಾಚಾರ್ಯನು ಹೊಟ್ಟ ಬಾಕನಾದ ದೆಸೆಯಿಂದ ಅನ್ನದ ಒಂದು ಗೊಡವೆಯಲ್ಲದೆ. ಬೇರೆ ಯಾವ ಚಿಂತೆಯಾಗಲೀ ವಿಚಾರವಾಗಲೀ ಅವನ ಮನಸ್ಸಿಗೆ ಹೋಗುತ್ತಿದ್ದಿಲ್ಲ. ಭಾಗೀರಥಿಯು ತೀರಿಹೋದ ತರುವಾಯ ಇವನು ಗ್ರಹಕೃತ್ಯದಲ್ಲಿ ನಡಿಯಸಬೇಕಾದ ಅದಾಯವೆಚ್ಚಗಳಿಗೆ ಕೊಂಚ ತಾತ್ಪರ್ಯ ಕೊಡುವ ಉದ್ಯೋಗವನ್ನು ಪತ್ನಿಯಿಂದ ಪಡೆದಿದ್ದನು. ಮನೆಯ ವೈವಾಟು ಸಣ್ಣದೆನ್ನ ಕೂಡದು. ಇತ್ತಲಾಗೆ ತಮ್ಮಣ್ಣ ಭಟ್ಟಗೂ ಜರೆಯೂ ರುಜೆಯೂ ಕೂಡಿಬಂದುದರಿಂದೆ. ಮನೆಯ ಯಜಮಾನಿಕೆ ಪೂರ್ಣವಾಗಿ ಆಬಾಚಾರ್ಯಗೆ ಸಿಕ್ಕಿದಂತಾಯಿತು. ವಾಗ್ದೇವಿಯು ಅವನನ್ನು ಮುಂಚಿನಷ್ಟು ಲಕ್ಷಮಾಡುತ್ತಿದ್ದಿಲ್ಲವಾದರೂ ತನ್ನ ಅಭಿಮಾನಕ್ಕೆ ತಂತು ಮಾತ್ರ ಕುಂದು ಇರುವದಾಗಿ ಅವನು ತಿಳಿಯಲೇ ಇಲ್ಲ. ಒಳ್ಳೆ ಒಳ್ಳೆ ವೈದ್ಯ ರನ್ನು ಕರೆಸಿ, ಚಂಚಲನೇತ್ರರು ತಮ್ಮಣ್ಣಭಟ್ಟಗೆ ಚಿಕಿತ್ಸೆ ಮಾಡಿಸುವುದರಲ್ಲಿ ತಾತ್ಸಾರ ಮಾಡಲಿಲ್ಲ. ಆದರೆ ವೈದ್ಯರ ಔಷಧ ಪ್ರಯೋಗ ಸಫಲವಾಗಲಿಲ್ಲ. ಭಾಗೀರಥಿಯು ಕಾಲವಾದ ಒಂದೇ ವರ್ಷದಲ್ಲಿ ಒಂದು ದಿನ ಫಕ್ಕನೆ ಅವನಿಗೆ ಕಫವೇರಿ ಪ್ರಾಣಹೋಯಿತು. ವೇದವ್ಯಾಸಉಪಾಧ್ಯನ ಕೃತಿಮದ ದೆಸೆ ಯಿಂದ ಹೀಗಾಯಿತೆಂದು ತಿಪ್ಪಾಶಾಸ್ತ್ರಿಯು ಹೆಣದ ಪರೀಕ್ಷೆಯ ಮೇಲೆ ಹೇಳಿ ಬಿಟ್ಟನು. ವಾಗ್ದೇವಿಯು ಆ ಮಾತು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ತಕ್ಕ ಕಾಲದಲ್ಲಿ ಕೃತ್ರಿಮ ನಿವಾರಣೆಯ ಉಪಾಯ ಮಾಡದೆಹೋದರೆ ಮುಂದೆ ಇತರರಿಗೂ ಪೇಚಾಟವಿರಲಿಕ್ಕೆ ಸಾಕೆಂದು ಜೋಯಿಸನು ಮೊದಲು ಒಂದೆ ರಡು ಸರ್ತಿ ಹೇಳಿದಾಗ್ಗೆ –“ನಿನ್ನ ಜೋತಿಷ್ಯಕ್ಕೆ ತುದಿಬುಡವಿಲ್ಲ” ಎಂದು ವಾಗ್ದೇವಿಯು ಅವನಿಗೆ ಹೇಳಿರುತಿದ್ದಳು. ಪರಂತು ಅವನು ಸಿಟ್ಟುಮಾಡಿ ಕೊಳ್ಳದೆ ಯಾವಾಗಲೂ ಆ ಪ್ರಸ್ತಾಸ ಕೊಂಚ ಕೊಂಚ ಮಾಡುವದಿತ್ತು. ಏನು ಮಾಡೋಣ! ಅವನ ಮಾತು ಎಡೆಯಲ್ಲಿ ಹೋಯಿತು. ತಮ್ಮಣ್ಣ ಭಟ್ಟನ ಉತ್ತರಕ್ರಿಯಾದಿಗಳು ಸರಿಯಾಗಿ ನಡೆದುವು. ಹೆತ್ತವರು ಒಂದು ವರ್ಷದೊಳಗಾಗಿ ಸತ್ತುಹೋದರೆಂಬ ವ್ಯಥೆಯಿಂದ ವಾಗ್ದೇವಿಯು ಬಚ್ಚಿ ಬಂದಳು. ಕ್ರಮೇಣ ಆ ದುಃಖವನ್ನು ಮರೆತು ದೇಹದಲ್ಲಿ ಮತ್ತಷ್ಟು ತೋರನಾಗಿ ಒಬ್ಬನ ಲಕ್ಷವಿಲ್ಲದೆ ಚಂಚಲನೇತ್ರರ ಖಜಾನೆಯ ಬೀಗದ ಕೈ ಗಳನ್ನು ಕೈವಶಮಾಡಿಕೊಂಡು ಅಹಂಕಾರ ಭರಿತಳಾದಳು.

ವೆಂಕಟಪತಿಅಚಾರ್ಯನು ವಾಗ್ದೇವಿಯ ಪ್ರತಾಪವನ್ನು ನೋಡಿ ಇನ್ನು ಮುಂದೆ ತಾನು ಕೊಂಚ ದೂರವಿರುವುದು ಒಳ್ಳೇದೆಂದು ಮಠಕ್ಕೆ ಅಪರೂಪ ವಾಗಿ ಬರಲಾರಂಭಿಸಿದನು. ಚಂಚಲನೇತ್ರರಿಗೆ ಅದು ಹಿತವಾಗದಿದ್ದರೂ ವಾಗ್ದೇವಿಯ ದೆಸೆಯಿಂದ ಹಾಗಾಗುವದು ಸೋಜಿಗವಾಗಿ ತೋರಲಿಲ್ಲ. ತಾನು ಮಾಡಿದ ಹುಚ್ಚುತನದ ಫಲವನ್ನು ಎರಡು ಕ್ಸೆಗಳಿಂದಲೂ ತಿನ್ನುವ ದಾಯಿತೆಂದು ಅವರು ಒಂದು ದಿನ ಅಂತರಂಗದಲ್ಲಿ ವೆಂಕಟಪತಿ ಆಚಾರ್ಯನ ಕೂಡೆ ಹೇಳಿ ಕಣ್ಣೀರಿಟ್ಟರು. ಬುದ್ದಿ ಶೂನ್ಯತೆಯಿಂದ ತಪೋಬಲವನ್ನೂ ಆಶ್ರಮದ ಘನತೆಯನ್ನೂ ಹಾಳುಮಾಡಿಕೊಂಡ ತನ್ನ ಧನಿಯ ದುಸ್ಥಿತಿ ಯನ್ನು ನೋಡಿ ವೆಂಕಟಪತಿಗೆ ಬಹಳ ದುಃಖವಾಯಿತು. ತಾನು ಬಹುತರ ಮೊದಲು ಹೇಳಿದ ಬುದ್ಧಿ ಮಾತುಗಳನ್ನು ತಿರಸ್ಕರಿಸಿ ಈಗ ವ್ಯಾಕುಲಪಡುವ ದಾಯಿತು. ಸಾಂಪ್ರತ ಅದಕ್ಕೆ ಏನೂ ನಿವೃತ್ತಿ ಇಲ್ಲವಷ್ಟೇ. ವಾಗ್ದೇವಿಯನ್ನು ಬಿಡಲಿಕ್ಕೆ ಸರ್ವಧಾ ಸಂದರ್ಭವಾಗಲಾರದು. ಅವಳಿಗೆ ಕೊಟ್ಟ ಭಾಷೆಯನ್ನು ಸಲ್ಲಿಸಲೇಬೇಕೆಂದು ವೆಂಕಟಪತಿಯು ಕೊಟ್ಟ ಉತ್ತರವು ಯತಿಯ ಶೋಕ ವನ್ನು ಮತ್ತಷ್ಟು ಹೆಚ್ಚಿಸಿಬಿಟ್ಟಿತು. ಚಂಚಲನೇತ್ರರ ಆರೋಗ್ಯಸ್ಥಿತಿಯು ದಿನವಹಿ ಕೆಡುತ್ತಾ ಬಂದು ಮೈಯಲ್ಲಿ ಶಕ್ತಿಯು ಕುಂದಿತು. ಒಮ್ಮಿಂದೊಮ್ಮೆ ಅವರ ಖಜಾನೆಯಿಂದ ಸಣ್ಣ ಸಣ್ಣ ಕಳವುಗಳು ಆಗುವುದಕ್ಕೆ ತೊಡಗಿದವು. ತಸ್ಕರನ್ಯಾರೆಂದು ತಿಳಿಯದೆಹೋಯಿತು. ಒಳಗಿನ ಕಳ್ಳ ನಲ್ಲದೆ ಹೊರಗಿ ನವನಲ್ಲವೆಂದು ಅವರ ಮನಸ್ಸಿಗೆ ತೋಚಿತು. ಮಠದ ಸೇವಕರನೇಕರ ಮೇಲೆ ಅನುಮಾನ ಉಂಟಾದರೂ ಬೇರೆ ಬೇರೆ ಕಾರಣಗಳಿಂದ ಅದು ನಿವೃತ್ತಿಯಾಯಿತು. ಕೊನೆಗೆ ಕೆಪ್ಪಮಾಣಿಯ ಮೇಲೆ ಸಂಶಯಬಿತ್ತು. ಕ್ರಮೇಣ ಕಳ್ಳ ಸಿಕ್ಕಿಬೀಳದೆ ಇರಲಾರನೆಂದು ಯತಿಗಳಿಗೆ ಗೊತ್ತಿತ್ತು.

ಕೆಪ್ಪಮಾಣಿಯು ವಾಗ್ದೇವಿಯ ವಿಶ್ವಾಸಿಯಾಗಿರುವುದರಿಂದ ಅವಳಿಗೆ ಮಾತ್ರ ಅವನ ಮೇಲೆ ಸಂದೇಹವಿರಲಿಲ್ಲ. ಶ್ರೀಪಾದಂಗಳು ಅವನ ಮೇಲೆ ಸಂಶಯಪಟ್ಟು ಅವನನ್ನು ದೂರಪಡಿಸುವ ಆಲೋಚನೆಯಲ್ಲಿದ್ದರು. ಆದರೆ ನಿಷ್ಕಾರಣವಾಗಿ ಬಡವನೊಬ್ಬನ ಅನ್ನವನ್ನು ತೆಗೆಯುವುದು ಅನ್ಯಾಯ. ಚೆನ್ನಾಗಿ ಪರೀಕ್ಷೆಮಾಡಿ ನೋಡುವ ಮುಂಚೆ ಗಡಿಬಿಡಿ ಮಾಡಬಾರದೆಂದು ವಾಗ್ದೇವಿಯು ಪಟ್ಟ ಅಭಿಪ್ರಾಯವನ್ನು ಅವರು ಸಹಾ ಒಪ್ಪಬೇಕಾಯಿತು. ಕಳವುಗಳು ನಿಲ್ಲಲಿಲ್ಲ. ಒಂದಾದರೂ ತುಬ್ಬು ಆಗಲಿಲ್ಲ. ತಿಪ್ಪಾಶಾಸ್ತ್ರಿಯ ಕೂಡೆ ಪ್ರಶ್ನೆ ಕೇಳಿದಾಗ ಅವನು ಕವಡೆಗಳನ್ನು ಅತ್ತಿತ್ತ ಹೊರಳಿಸಿ ವೇದ ವ್ಯಾಸ ಉಪಾಧ್ಯನು ಒಂದು ಮಂತ್ರದೇವತೆಯನ್ನು ಮಠಕ್ಕೆ ಕಳುಹಿಸಿರು ವುದರಿಂದ ದಿಗ್ಬಂಧನೆಯಾದಂತಾಗಿ ಕಳವುಗಳು ನಡಿಯುವ ಹಾಗಿನ ದೊಂದು ಭ್ರಮೆಯು ತಲೆದೋರಿಯದಲ್ಲದೆ, ನಿಜವಾಗಿ ಸ್ವತ್ತುಗಳ್ಳಾವದೂ ಚೋರರ ಕೈವಶವಾಗಲಲ್ಲವೆಂದು ಹೇಳಿದನು. ಚಂಚಲನೇತ್ರರು ಅರನಗೆ ನಕ್ಕು ಮಾತಾಡದೆಹೋದರು. ವಾಗ್ದೇವಿಯು ಅವನ ಪ್ರಶ್ನೆ ಹಾಳಾಗಲೆಂದು ಬೆನ್ನುಹಾಕಿ ನಡೆದಳು. ತಾಯಿಯ ಪ್ರಾಣೂತ್ಕ್ರಮಣ ಕಾಲದಲ್ಲಿ ಅವನು ಯೆಂಗಿ ಹಾಕಿ ತನಗೆ ನಷ್ಟ ಮಾಡಿದನೆಂಬ ಸಿಟ್ಟನ್ನು ವಾಗ್ದೇವಿಯು ಬಿಟ್ಟರ ಲಿಲ್ಲ. ಹಳೆಗೆಳೆಯನಾದ ಅವನನ್ಸು ಅಟ್ಟುವದಾಗಲೀ ಜರಿಯುವದಾಗಲೀ ಸಲ್ಲನೆಂದು ಬಾಯಿ ಮುಚ್ಚಿಕೊಂಡಿರಬೇಕಾಯಿತು. ವಾಗ್ದೇವಿಯ ಬಿಡಾರ ದಲ್ಲಿಯೂ ಅಪರೂಪವಾಗಿ ಕಳವುಗಳು ನಡೆದವು. ಆವಾಗ ಅವಳಿಗೂ ಕೊಂಚ ಆಶ್ಚರ್ಯವೂ ರವಷ್ಟು ಹೆದರಿಕೆಯೂ ಆಗಿ ಏನೂ ನಿವೃತ್ತಿಮಾರ್ಗ ಕಾಣದೆ ತರಹರಿಸಿದಳು. ಒಂದು ದಿನ ಬೆಳಿಗ್ಗೆ ನೋಡುವಾಗ್ಗೆ ವಾಗ್ದೇವಿಯ ಕೋಣೆಯಲ್ಲಿದ್ದ ಪೆಟ್ಟಿಗೆಯ ಬೀಗವನ್ನು ಮುರಿದು ಅದರ ಒಳಗಿರುವ ಚಿನ್ನದ ಆಭರಣಗಳನ್ನು ಎತ್ತಿಹಾಕಿದುದು ಕಂಡುಬಂತು. ಅವಳು ಆಗ ಪಟ್ಟ ವ್ಯಥೆಯು ಹೇಳತುದಿಯಿಲ್ಲ. ಅದರ ಮೂರನೆ ಏನ ಚಂಚಲನೇತ್ರರ ಖಜಾನೆಯಿಂದ ಹೆಚ್ಚು ಮೌಲ್ಯದ ನಾಣ್ಯಗಳ ಸರಗಳೆರಡು ಮೂರು ಕಾಣದೆ ಹೋದುವು. ಹಣದ ಚೀಲಗಳು ಕೆಲವು ಇಟ್ಟಲ್ಲಿ ಇರಲಿಲ್ಲ. ಇನ್ನು ಮೌನ ತಾಳಿದರೆ ಸರ್ವಸ್ಪವೂ ಅತಂತ್ರವಾಗುವುದೆಂಬ ಭಯದಿಂದ ಚಂಚಲನೇತ್ರರು ಕೊತ್ವಾಲ ಚಾವಡಿಗೆ ವರ್ತಮಾನ ಕೊಟ್ಟರು.

ಕೊತ್ವಾಲ ಭೀಮಾಜಿಯು ದಫೆದಾರ ಯಾಗಪ್ಪನ ಒಟ್ಬಿ ನಲ್ಲಿ ತಡ ಮಾಡದೆ ಮಠಕ್ಕೆ ಬಂದು ಸನ್ಯಾಸಿಗಳ ದರ್ಶನವನ್ನು ಮಾಡಿ ಅವರ ಮತ್ತು ವಾಗ್ದೇವಿಯ ಹೇಳಿಕೆಗಳನ್ನು ಬರಕೊಂಡನು,. ಮಠದ ಸೇವಕರನೈಲ್ಲಾ ಕರೆಸಿ ಕೆಲವರಿಗೆ ಹೊಡೆದು ಕೆಲವರಿಗೆ ಬಡೆದು ವಿಶಿಷ್ಟ ಜನರಿಗೆ ಕಂಡಾ -ಪಟ್ಟೆ ಬಯ್ಯುತ್ತಾ ಕೋಳಗಳನ್ನು ತರಿಸಿ ಹಲವು ಬಡ ಚಾಕರರಿಗೆ ಹಾಕಿಸಿ ಅಬ್ಬರಿಸಿದರೂ ಪತ್ತೆದೊರೆಯದೆ ಹೋಯಿತು. ವಾಗ್ದೇವಿಯ ವ್ಯಸನ ನೋಡ ಲಾರದೆ ಭೀಮಾಜಿಯು–“ಅವ್ವಾ! ನನ್ನ ಜೀವವೊಂದಿದ್ದರೆ ನಿಮ್ಮ ಮ್ಹಾಲು ವಿಶಿಷ್ಟ ತರಿಸಿಕೊಡುವೆನು. ಹೆದರಬೇಡಿರಿ” ಎಂದು ಅವನು ಧೈರ್ಯ ಹೇಳಿ ದಾಗ ಲಾವಣ್ಯ ಪುರುಷನಾದ ಆ ನಡುಪ್ರಾಯದ ಕೊತ್ವಾಲನ ಮೇಲೆ ಅವಳಿಗೆ ಬಹು ಪ್ರೀತಿಯಾಯಿತು. ಅವನನ್ನು ಗಪ್ಪನೆ ಹೋಗಬಿಡದೆ ಪರಿ ಷ್ಕಾರವಾದ ಫಲಾಹಾರವನ್ನೂ ಬಿಸಿ ಬಿಸಿ ಬೂನಿನ ನೀರನ್ನೂ ಕೊಟ್ಟು ಸಂತೃಪ್ತಿ ಪಡಿಸಿದ ಬಳಿಕ ಕೊಂಚ ಸಮಯ ತನ್ನ ಸುಖ ದುಃಖಗಳನ್ನೂ ವೇದವ್ಯಾಸನು ತನಗೆ ಕೊಡುವ ಉಪಟಳೆಯ ಬಗೆಯನ್ನೂ ವಿವರಿಸಿ ಅವನ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿಕೊಂಡಳು. “ಇಗೋ! ಮಠದಲ್ಲಿ ಏನೂ ಕಡಿಮೆ ಇಲ್ಲಾ. ಸಹಾಯಹೀನರಾದ ನಮ್ಮನ್ನು ಬಿಟ್ಟುಹಾಕದೆ ನಡಿಸಿದರೆ ನಿಮ್ಮ ಮನಸ್ಸಿಗೆ ಸರಿಯಾಗಿ ನಾವು ನಡೆದುಕೊಳ್ಳುವುದೇ ಸರಿ” ಎಂದು ಮಧುರೋಕ್ತಿಗಳಿಂದ ಕೊತ್ವಾಲನನ್ನು ಪೂರ್ಣವಾಗಿ ಕೈವಶ ಮಾಡಿ ಕೊಂಡಳು. ವಾಗ್ದೇವಿಯ ಪ್ರಸನ್ನತೆಯನ್ನು ಹೊಂದದೆ ಬದುಕಿ ಪುರುಷಾರ್ಥ ವಿಲ್ಲವೆಂದೆಣಿಸಿದ ಭೀಮಾಜಿಯು ದಫೆದಾರನನ್ನು ಕರೆದು ತನ್ನ ಜವಾನರೊ ಳಗೆ ಕಳ್ಳನನ್ನು ಹಿಡಿಯುವ ಸಮರ್ಧನ್ಯಾರೆಂದು ಕೇಳಿದನು.

ಯಾಗಪ್ಪಾ–“ ಬುದ್ಧಿ! ಬುದ್ಧಿ! ಬುದ್ಧಿ! ಯಾಕುಬಖಾನ ಒಬ್ಬನೇ ಸೈ; ಬಾಕಿ ಎಲ್ಲಾ ನನ್ನ ಮಕ್ಕಳು ಉಂಬೋಕೆ ಆದಾವು. ನಾನು ದಿನಾಲು ತಲೆ ಬಡಕೊಂಡಿ ಮಾಡಿಕೊಂಡಿ ಆ ತುರ್ಕರ ಪೋರನಿಗೆ ಹುಸಾರಮಾಡಿಯೇನೆ? ಅವಾಂ ಹಡ್ಕೆಬುದ್ಧಿಗಿನ್ನೂ ಇಳೀಲಿಲ್ಲ. ಲುಚ್ಚಾಗಿರಿ ಮಾಡಿದರೆ ಕೊಂದು ಬಿಟ್ಟೆನಂದಿ. ಅವನಿಗೆ ಚಂದಾಗಿ ಬುದ್ಧಿ ಹೇಳಿಯೇನಪ್ಸಾ. ಇನ್ನುಮೇಗೆ ಅವನ ಕಾರ್ಬಾರು ಎರ್ತೆತೊ ಏನೋ ಸದಾಸಿವ ಬಲ್ಲಾ.”

ಭೀಮಾಜಿ–“ನಿನ್ನ ಅಧಿಕಪ್ರಸಂಗ ಹಾಗಿರಲಿ; ಹರತರದೂದಮಾಡಿ ಮಾಲು ತಲಾಸ ಮಾಡಿದರೆ ಅವನಿಗೆ ದಫೇದಾರಿ ಕೊಡಿಸಿಬಿಡುತ್ತೇನೆ. ಅವ ನಿಗೆ ಇತ್ತ ಬೇಗ ಕಳುಹಿಸು.”

ಯಾಗಪ್ಪಾ–“ಸಮ ಆಯಿತು, ಅವನ ಶಿಫಾರತಿಗೆ ಹೋಗಿ ನನ್ನ ಅನ್ನದ ಮಡೆ ಅಟ್ಟಕ್ಕೆ ಹತ್ತೆಕೆ ಆಯಿತು. ಬುದ್ಧಿ! ಅವನಿಗೆ ಜಪೆದಾರಿ ಕೊಟ್ಟರೆ ನಾನು ಯಾರ ಕಾಲು ಗುದ್ದೆಕೆ ಹೋಗಲೀ! ನನ್ನ ದೊರೆ ಆ ಪೋರನ ಹೆಸರು ನಾನ್ಯಾಕೆ ಹೇಳಬೇಕಾಯಿತು? ನಂಗೆ ಹಿಡಿದ ಗಿರಬದಾರಿ ಅಂತೇನೆ.”

ಭೀಮಾಜಿ—“ಎಷ್ಟು ಉದ್ದ ಮಾತಾಡ್ತಿ. ನಿನ್ನ ಕೆಲಸ ಯಾರು ತೆಗೆ ಯುತ್ತಾರೆ? ನಿನಗೆ ನಾರ್ನಪರ್ವರ್ಶಿಆದ ಮೇಲೆ ನಿನ್ನ ಕೆಲಸ ಅವನಿಗೆ ಕೊಡುವಾ. ಈಗಲೇ ಕೊಡಲಿಕ್ಕೆ ಯಾರಿಗಾದರೂ ಹುಚ್ಚದೆಯೇ? ಹೆದರ ಬೇಡ.”

ಯಾಗವ್ಪಾ–“ಬುದ್ಧಿ, ತಮ್ಮ ವಾದವೇ ಗತಿ. ಖಾವಂದರು ಈವರೇಗೆ ನನ್ನ ಮೇಗೆ ದಯ ಇಟ್ಟು ಕಾಟ ನಡೆಸಿಕೊಂಡಿರಿ. ಇನ್ನುವಾ ಏನು ಬಾಳಾ ವರ್ಸ ಬದಕೆಕಿಲ್ಲ. ಮುಕ್ಷ ಮಕ್ಕಳುಮರಿಯಿದ್ದವ ಬಿಟ್ಟು ಹಾಕೆಕಾಗದು ಅಂದಿ. ಪಾದಕ್ಗೆ ಬಿದ್ದುಕೊಂಬ್ತೇನೆ ನನ್ನ ಧನಿ ರಾಮಧನಿ.?

ಕಚೇರಿಗೆ ಹೋಗಿ ಯಾಕುಬಖಾನನಿಗೆ ಅನುಜ್ಞೆಗಳನ್ನು ಕೊಡುವದು ವಾಡಿಕೆಯಾದ ನಡವಳ್ತೆಯ ಕ್ರಮವಾಗಿದ್ದರೂ ವಾಗ್ದೇವಿಯ ಸಾಮಾಪ್ಯವು ಬಿಟ್ಟು ಹೋಗುವುದೆಂಬ ಹೆದರಿಕೆಯಿಂದ ಅವನನ್ನು ಮಠಕ್ಕೆ ಕಳುಹಿಸಿ ಕೊಡೆಂದು ಕೊತ್ವಾಲನು ದಫೇದಾರಗೆ ಅಪ್ಪಣೆಕೊಟ್ಟನು. ಯಾಗಪ್ಪನು ಬೇಗ ಯಾಕುಬಖಾನನನ್ನು ಕರಕೊಂಡು ಮಠಕ್ಕೆ ಬಂದನು. ಕೊತ್ವಾಲನು ಆ ಯಾಕುಬಖಾನನನ್ನು ಸಮಾಪಕ್ಕೆ ಕರೆದು, ಅವನು ಮಾಡತಕ್ಕ ಕೆಲಸದ ಸ್ಥಿತಿಯನ್ನು ಅಂತರಂಗದಲ್ಲಿ ತಿಳಿಸಿದನು. –“ಕೋನಸಿ ಬಡಿಬಾತಹೈ. ಖಾವಿಂದಕಿ ಹುಕುಂ ಹುವೇತೊ ಇಸಘಡಿ ಜಾಕೆ ಕಾಮಸಬ್‌ ಫತಾಕರ್ಕೆ ಆಕೆ ಸಾಹೇಬಕಿ ಖದ್ಮಾಕು ಅರಜಕರ್‌ಲೇವುಂಗಾ.” ಯಾವ ದೊಡ್ಡ ಮಾತು. ಖಾವಂದರಲ್ಲಪ್ಪಣೆಯಾದರೆ ಈ ಕ್ಷಣ ಹೋಗಿ ಕೆಲಸವೆಲ್ಲಾ ಜಯಿಸಿಕೊಂಡು ಬಂದು ಸಾಹೇಬರ ಪಾದಗಳಿಗೆ ಅರಿಕೆ ಮಾಡಿಕೊಳ್ಳುವೆನು ಎಂದು ಅವನು ಅದಬ್ಬಿನಿಂದ ಸಲಾಂಮಾಡಿ, ನಿಂತುಕೊಂಡನು. ಸಾವಕಾಶ ಮಾಡದೆ ನಡಿ ಎಂದು ಭೀಮಾಜಿಯು ಯಾಕುಬಖಾನನನ್ನು ಕಳುಹಿಸಿ ಒಣಹರಟಿ ಮಾತಾಡುವ ಯಾಗಪ್ಪಗೆ ಏನೋ ಬಿಟ್ಟಿಹೇಳಿ ಅಟ್ಟಿದನು. ಒಂದೆರಡು ಘಳಿಗೆ ವಾಗ್ದೇವಿಯ ಕೂಡ ಸಂಭಾಷಣೆ ಮಾಡುತ್ತಾ ಊಟದ ಸಮಯವಾಯಿತೆಂದು ಮನೆಗೆ ಹೋಗ ಹೊರಟಾಗ ಅವಳು–“ತಮ್ಮ ಮರುಭೇಟಿ ನನಗೆ ಇನ್ಫಾವಾಗ ಸಿಕ್ಕುವದೆಂದು ಅಪ್ಪಣೆಯಾಗಲಿ?” ಎಂದಳು.

‘ರೋಗಿ ಬಯಸಿದ್ದು ಹಾಲೋಗರ ವೈದ್ಯ ಹೇಳಿದ್ದು ಹಾಲೋಗರ’ ಎಂಬಂತಾಯಿತು. ವಾಗ್ದೇವಿಯು ನಿರಾಯಾಸವಾಗಿ ಭೀಮಾಜಿಗೆ ಸುಪ್ರ ಸನ್ನಳಾಗುವ ಶುಭ ಸೂಚಕಮಾತು ಅವಳ ಬಾಯಿಯಿಂದಲೇ ಹೊರಟ ಮೇಲೆ ಅವನು ಪುಣ್ಯವಂತನೆನ್ಸಬೇಕು. ಅವನೂ ಹಾಗೆಯೇ ತಿಳಕೊಂಡನು. ಕಳವಿನ ಪ್ರಕರಣ ಮುಗಿಯುವ ತನಕ ಆಗಾಗ್ಗೆ ಬರುವೆನೆಂನು ಅವನು ಮಾತು ಕೊಟ್ಟನು, ಆ ವಿಚಾರ ಹಾಗಿರಲಿ — “ನಾನು ಕಾರ್ಯಜಾಣೆ ಯಲ್ಲ. ತಮ್ಮಂಥಾ ಪ್ರಭುಗಳ ಸಂದರ್ಶನವು ಇಷ್ಟು ಸುಲಭವಾಗಿ ಇಂದು ದೊರಕಿದ್ದು ನನ್ನ ಪೂರ್ವ ಪುಣ್ಯ; ಇನ್ನು ಮುಂದೆಯೂ ಅನಾಥೆಯಾದ ನಾನು ತಮ್ಮ ಆಶ್ರಿತಳೆಂಬ ಅಭಿಮಾನವಿಟ್ಟು ನನನ್ನು ನಡೆಸಿಕೊಂಡು ಹೋಗ ಬೇಕಾಗಿ ನನ್ನ ವಿನಂತಿ. ಸಮಯೋಚಿತ ನೋಡಿ ನನ್ನನ್ನು ವಿಚಾರಿಸಿ ಕೊಂಡರೆ ಕೃತಕೃತ್ಯಳಾಗುವೆನು” ಎಂದು ಸವಿಯಾದ ಮಾತುಗಳಿಂದ ಕೊತ್ವಾಲನನ್ನು ವಾಗ್ದೇವಿಯು ಮಂಕುಗೊಳಿಸಿ ಬೆಳ್ಳಿಯದೊಂದು ಹರಿ ವಾಣ ಉಚಿತಕೊಟ್ಟು ಕಳುಹಿಸಿದಳು. ಭೀಮಾಜಿಯ ಆನಂದಕ್ಕೆ ಹದ ಮೀರಿತು. ತಾನು ನಡೆಯುವುದು ಕಾಲಿನಿಂದಲೋ ತಲೆಯಿಂದಲೋ ಎಂಬದು ತಿಳಿಯದೆ ವಾಗ್ದೇವಿಯ ಸುಂದರ ಪ್ರತಿಮೆಯನ್ನು ತನ್ನ ಹೃದಯ ದಲ್ಲಿ ನೆಲೆಗೊಳಿಸಿ ನಷ್ಟದ್ರವ್ಯವನ್ನು ಅವಳಿಗೆ ಸಿಕ್ಕುವಂತೆ ಪ್ರಯತ್ನಮಾಡಿ ಅವಳ ಕೃತಜ್ಞತೆಯನ್ನು ಪಡೆಯಬೇಕೆಂಬ ಆತುರದಿಂದ ಹಲವು ಮನೋ ಜಯ ಯೋಚನೆಗಳನ್ನು ಮಾಡುತ್ತಾ ಮನೆಗೆ ಬಂದನು.

ಯಾಕೂಬಖಾನನು ಕೊತ್ವಾಲನ ಅಪ್ಪಣೆಗನುಗುಣವಾಗಿ ಮಠದಿಂದ ಹೊರಟ ಮೇಲೆ ಯಾಗಪ್ಪನು ಅವನನ್ನು ದಾರಿಯಲ್ಲಿ ತಡದು–ದೊಡ್ಡ ಹಲಸಿನಕಾಯಿ ಸಿಕ್ಕಿಯದೆ, ತನಗೂ ನಾಲ್ಕು ಸೋಳೆ ಕೊಡೆಂದು ಕೇಳಿದನು. ಯಾಕುಬಖಾನನು ನಕ್ಕು ಆಗಬಹುದೆಂದು ನಡೆದನು. ಯಾಕುಬಖಾನನು ಕೊತ್ವಾಲನ ಜವಾನರಲ್ಲಿ ಒಳ್ಳೇ ಮತಿಮಂತನು. ಮತ್ತು ಹೆಚ್ಚು ಮಾತುಗ ಳಿಂದ ಸಮಯ ಕಳಿಯುವ ಯೌವನಸ್ಥನಲ್ಲ. ಅವನು ಮಠದಲ್ಲಿರುವ ನೌಕ ಕರರನ್ನೆಲ್ಲಾ ಪ್ರತ್ಯೇಕವಾಗಿ ಕಂಡು ತನಗೆ ಸಿಕ್ಕಬಹುದಾದ ಅನುಭವವನ್ನು ಅವರಿಂದ ಪಡಕೊಂಡು ಅದನ್ನೆಲ್ಲಾ ಮಥಿಸಿ ನೋಡಿದನು. ಕೆಪ್ಪಮಾಣಿಯ ಮೇಲೆ ಅವನಿಗೂ ಅನುಮಾನವಾಯಿತು. ಆದರೆ ಏಕಾಯೇಕಿ ಮುಂದರಿಸಿ ದರೆ ಕೆಲಸ ಕೈಗೂಡದೆಂದು ಅನುಮಾನದಿಂದ ನಿಧಾನವಾಗಿ ಆಲೋಚನೆ ಮಾಡಿದನು. ಅ ದಿನ ಇಡೀ ಅವನು ಸಿಕ್ಕುವಷ್ಟು ವರ್ತಮಾನವನ್ನು ಸಂಗ್ರ ಹಿಸಿ ರಾತ್ರೆ ಕಾಲದಲ್ಲಿ ಬಾನಾಬುಡಾನಗಿರಿಯಿಂದ ಪದಗಳನ್ನು ಹೇಳುತ್ತಾ ಬೇಡಲಿಕ್ಕೆ ಬರುವ ಫಕೀರನಂತೆ ವೇಷಹಾಕಿ ಚಂಚಲನೇತ್ರರ ಮಠದ ಎದುರು ಭಾಗದಲ್ಲಿರುವ ಅಂಗಡಿಯ ಕೆಳಗೆ ಮಲಗಿಕೊಂಡಿದ್ದನು. ಆದರೆ ನಿದ್ರೆ ಮಾಡಿರಲಿಲ್ಲ.

ಬೀದಿಯಲ್ಲಿ ಜನರ ಸಂಚಾರ ಕಡಿಮೆಯಾಗುತ್ತಲೇ ಕೆಪ್ಪಮಾಣಿಯು ಮಠದಿಂದ ಬೀದಿಗಿಳಿದು ತಲೆಯನ್ನು ಬಗ್ಗಿಸಿಕೊಂಡು ತ್ವರೆಯಾಗಿ ಹೋಗು ವದು ಯಾಕುಬಖಾನನ ಕಣ್ಣಿಗೆಬಿತ್ತು. ಹೆಚ್ಚುಕಡಿಮೆ ಹತ್ತುಮಾರು ದೂರದಿಂದ ಅವನು ಕೆಪ್ಪಮಾಣಿಯನ್ನು ಹಿಂಬಾಲಿಸಿದನು. ಮಾಣಿಯು ಹಿಂದೆಮುಂದೆ ನೋಡದೆ ಉಕ್ಕಡದ ಸಮಿತಾಪವಿರುವ ಜಾನಕಿ ಎಂಬ ವೇಶ್ಯಾ ಸ್ತ್ರೀಯ ಮನೆಯ ಉಪ್ಪರಿಗೆಯನ್ನೇರಿದನು. ಯಾಕುಬಖಾನನು ಅದೇ ಮನೆಯ ಕೆಳಗೆ ಇರುವ ಒಂದು ಸಣ್ಣ ಗುಡಿಸಲಿನಲ್ಲಿ ಅವಿತುಕೊಂಡನು. ಮಧ್ಯರಾತ್ರಿಸರಿಯಂತರ ಜಾನಕಿಯೂ ಕೆಪ್ಪಮಾಣಿಯೂ ಮಾತನಾಡುತ್ತ ನೆಗಾಡುತ್ತಾ ಹಾಡುತ್ತಾ ಇರುವ ಗೌಜಿಯು ಯಾಕುಬಖಾನನ ಕಿವಿಗೆ ಬೀಳು ತ್ತಿತ್ತು. ಇವನು ಕೆಪ್ಪನೆಂಬ ಮಾತು ಬರೇಸುಳ್ಳು. ಪಕ್ಕಾಕಳ್ಳ ನೇಸರಿಎಂದು ಯಾಕುಬಖಾನನು ಚೆನ್ನಾಗಿ ಕಿವಿಗೊಟ್ಟು ಅವರ ಸಂಭಾಷಣೆಯನ್ನು ಕೇಳು ವದರಲ್ಲಿ ಬಿದ್ದನು. ಅವರು ಒಮ್ಮೆ ಘಟ್ಟಿಯಾಗಿಯೂ ಇನ್ನೊಮ್ಮೆ ಮೆಲ್ಲಗೂ ಮಾತನಾಡುತ್ತಿದ್ದರು. ಬೆಳಗಿನ ಜಾವದಲ್ಲಿ ಉಭಯತ್ರರೂ ಕೆಳಗಿಳಿದು ಬೀದಿಗೆ ಇಳಿಯುವ ಮೆಟ್ಟಿಲುಗಳ ಬಳಿಯೆ ನಿಂತುಕೊಂಡು ಸ್ವಲ್ಪಹೊತ್ತು ಪುನಃ ಮಾತಾಡಿದರು. ನಾಡದು ಬರುವೆನೆಂದು ಕೆಪ್ಪಮಾಣಿಯು ಬೀದಿಗಿಳಿ ಯುತ್ತಲೇ—“ನಾಳೆಸವಾರಿ ಹಾಗಾದರೆ ಯಾವಲ್ಲಿಗೆ?” ಎಂದು ಅವಳು ಕೇಳಿ ದಳು. ಅವಳಿಗೆ ಪ್ರತ್ಯುತ್ತರ ನೊಡದೆ ಮುಂದರಿಸಿ ಹೋದನು. ಯಾಕುಬ ಖಾನನು ಮೆಲ್ಲಗೆ ಹೊರಟು ಅವನನ್ನು ದೂರದಿಂದ ಹಿಂಬಾಲಿಸಿದನು. ಕೆಪ್ಪ ಮಾಣಿಯು ಮಠಕ್ಕೆ ಹೊಕ್ಕನಂತರ ಯಾಕುಬಖಾನನು ತನ್ನ ಮನೆಗೆ ಮರಳಿದನು.

ಮರುದಿನ ರಾತ್ರಿ ಯಾಕುಬಖಾನನು ಅದೇ ವೇಷಮಾಡಿ ಅದೇ ಅಂಗ ಡಿಯಲ್ಲಿ ಬಿದ್ದುಕೊಂಡಿರುವಾಗ ಮುಂಚಿನ ರಾತ್ರೆಯಂತೆ ಮಠದಿಂದ ಬೀದಿ ಗಿಳಿದು ಜೋರಾಗಿ ನಡಿಯುವ ಕೆಪ್ಪಮಾಣಿಯನ್ನು ಕಂಡು ಯಾಕುಬನು ಜಾಗ್ರತೆಯಿಂದ ಅವನ ಹಿಂದೆಯೇ ಹೋದನು. ಕೆಪ್ಪಮಾಣಿಯು ಅ ರಾತ್ರೆ ಪೇಟಿಯ ತುದಿಯಲ್ಲಿ ಸುಂದರಿಯೆಂಬ ವೇಶ್ಯೆಯ ಮನೆಯ ಒಳಹೊಕ್ಕನು. ಯಾಕುಬನು ಹೊರಗೆ ಬೀದಿಯಲ್ಲಿ ನಿಂತುಕೊಳ್ಳದೆ ಆ ಮನೆಯ ಬದಿಯ ಲ್ಲಿರುವ ತಿಟ್ಟೆಯಲ್ಲಿ ಕೂತುಕೊಂಡನು. ಆ ಸ್ಥಳದಿಂದ ಮನೆಯ ಒಳಗೆ ಕೆಪ್ಪ ಮಾಣಿಯೂ ಸುಂದರಿಯೂ ಆಡುವ ಮಾತುಗಳು ಖಾನನ ಕವಿಗೆ ಸರಿಯಾಗಿ ಕೇಳುತ್ತಿದ್ದುವು. ಉಸುರು ಅತ್ತಿತ್ತ ಹಂದಿಸದೆ ಯಾಕುಬನು ಕೂತನು. “ಊಚು ಆಭರಣಗಳೆಲ್ಲಾ ಜಾನಕಿಗೆ; ನಖಾರೆ ನಗಗಳೆಲ್ಲಾ ನನಗೆ ತಂದು ಕೊಟ್ಟಿದ್ದೀರಿ. ನಾನೇನು ಅಷ್ಟು ಕುರೂಪಿ? ಅವಳು ಬಹುರೂಪವಂತೆಯೋ? ಅವಳಿಗೆ ಒಳ್ಳೆ ಒಳ್ಳೆ ಸರಗಳು ಕೊಟ್ಟಿದ್ದೀರಂತೆ. ನಾನು ಮಾಡಿದ ತಪ್ಪೇನು? ನನ್ನ ಮೇಲೆ ಅಷ್ಟು ಬೇಸರವೇಕೆ?” ಎಂದು ಅವಳು ಜರಿಯುವದು ಯಾಕು ಬಖಾನನ ಕಿವಿಗೆ ಬಿತ್ತು. ಗುಟ್ಟು ಈಗ ಸಿಕ್ಕಿತು. ಇನ್ನು ಕಾಲಹರಣಮಾಡಿ ದರೆ ಕಾರ್ಯಹಾನಿಯಾಗುನದೇ ಸರಿ ಎಂದು ಯಾಕುಬಖಾನನು ಕೂಡಲೇ ಅಲ್ಲಿಂದ ಹೊರಟು ನೆಟ್ಟಗೆ ತನ್ನ ಮನೆಗೆ ಬಂದನು. ಮರುದಿವಸ ಪ್ರಾತಃ ಕಾಲದಲ್ಲಿ ಕೊತ್ವಾಲನನ್ನು ಕಂಡು ಸಲಾಂ ಹೊಡೆದು ಕೈತಟ್ಟಿ ನಿಂತು ಕೊಂಡನು. ಕೊತ್ವಾಲನು ಅವನನ್ನು ಏಕಾಂತ ಸ್ಥಳಕ್ಕೆ ಕರದು ಅವನು ಕೊಟ್ಟ ವರ್ತಮಾನವನೈೆಲ್ಲಾ ಕೇಳಿ–“ವ್ಹಾವ್ಚಾ, ಬರಾಬರ್‌, ಶಾಣಾ ಹೆ ಠೇಕೊ, ಅಬೀಚ್‌ ಆತಾಹುಂ? (ವ್ಟಾವ್ಟಾ, ಬರಾಬರಿ ನೀನು ಬದ್ಧಿ ವಂತ ನಾಗಿದ್ದಿ. ತಡಿ ಈಗಲೇ ಬರುವೆನು) ಎಂದು ಒಳಗೆ ಹೋಗಿ ವಸ್ತ್ರ ಧರಿಸಿ ಕೊಂಡು ಬೇರೆ ಕೆಲವು ಜವಾನರನ್ನು ಸಂಗಡ ಕರಕೊಂಡು ಕೆಲವರನ್ನು ಸುಂದರಿಯ ಮನೆಗೆ ಸುತ್ತುಹಾಕಲಿಕ್ಕೆ ಹೇಳಿ ಪ್ರಥಮತಃ ಜಾನಕಿಯ ಮನೆಯನ್ನು ಶೋಧನೆ ಮಾಡಿಸಿ ನೋಡಿದ್ದಲ್ಲಿ ಮಠದಿಂದ ಕಳವಾದ ಹಲವು ಆಭರಣಗಳು ಸಿಕ್ಕಿದವು. ಬಳಿಕ ಸುಂದರಿಯ ಮನೆಯ ಶೋಧವಾಯಿತು. ಅಲ್ಲಿಯೂ ಮಠದ ಒಡವೆಗಳೂ ವಾಗ್ದೇವಿಯ ಆಭರಣಗಳೂ ಸಿಕ್ಕಿದವು. ಅವುಗಳನ್ನೆಲ್ಲಾ ಸ್ವಾಧೀನಮಾಡಿಕೊಂಡು ಕೊತ್ವಾಲನು ಪಟ್ಟಿಬರಕೊಂಡನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಧವಿಮೋಚನೆ
Next post ಆತ್ಮ ದರ್ಪಣ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys