ಗವ್ವೆನ್ನುವ ಕತ್ತಲು; ಎತ್ತ ನೋಡಿದರೂ ಕುರುಡು ಆವರಿಸಿಕೊಂಡು ತಬ್ಬಿಬ್ಬು ಮಾಡುವ ವಾತಾವರಣ. ಆದರೂ ಹೆದರದ ಭೂಮಿ; ಕದಡದ ಕತ್ತಲು; ಮಿಂಚು ಸೀಳಿದರೂ ಮತ್ತೆ ಒಂದಾಗುವ ಜರಾಸಂಧ ಕತ್ತಲು; ಮಿಂಚು ಗುಡುಗುಗಳ ಕಣ್ಣು ಮುಚ್ಚಾಲೆಯಲ್ಲಿ ಮೈಮರೆಯದೆ ಭಯ ಬಿತ್...

ಈ ನನ್ನ ದೇಹದ ಎಲ್ಲ ಅವಯವಗಳು ಒಂದೇ ಆದರೂ ನಾ ದುಡಿಯುವುದು ಹೊಟ್ಟೆ-ನಿನ್ನ ತುಂಬಿಸಲು ಈ ನನ್ನ ಕಾರ್ಯದಲ್ಲಿ ಮರೆತೆ ಬುದ್ಧಿ ಬೆಳೆಸಲು. ಬೆನ್ನಿಗಂಟಿದ ಹೊಟ್ಟೆ ನಿನ್ನ ಮುಂದೆ ತರಲು ನಾ ಪಟ್ಟ ಪಾಡೇನು? ಅದಕ್ಕಾಗಿ ನಾನೇನು ಬೇಕಾದರೂ ಮಾಡೇನು. ನಿನ್ನ...

“ಚಕ್ಖುಪಾಲ ಮಹಾತೇರ” ಮತ್ತು “ಪಾಪಿ”ಯ ಮೂಲ ಬುದ್ಧಘೋಷನ ಜಾತಕ ಕತೆಗಳು (ಬರ್‍ಮಿ ಭಾಷೆಯಿಂದ ಇಂಗ್ಲೀಷಿಗೆ ಕ್ಯಾಪ್ಟನ್ ಟಿ. ರೋಜರ್ಸ್), “ಜುಲೇಖ”, “ರುದಾಕಿ” ಮತ್ತು “ಫಿರ್ದೌಸಿ&#8...

ಮುಡಿಗೆ ಮಲ್ಲಿಗೆ ಮುಡಿದು ಹಣೆಗೆ ಕುಂಕುಮವಿಟ್ಟು ಹಸಿರು ಬಳೆಯ ಕೈಗೆ ಬೆಳ್ಳಿಯ ಕಾಲುಂಗುರವ ತೊಟ್ಟು ಮಾಂಗಲ್ಯದಿ ಮತ್ತೈದೆಯಾಗಿ ಮನೆ ಬೆಳಗುವ ಸತಿ ಮನೆಯ ಮನಸುಗಳ ಬೆಸೆಯುವೆ ನೀ ಸುಮತಿ ಗರತಿ ನಿನಗೇತಕೆ ಈ ದುಸ್ಥಿತಿ? ಮೂಡಣದಿ ಸೂರ್ಯ ಮೂಡುವ ಮುನ್ನ ...

(ಮಕ್ಕಳ ಗೀತೆ) ತಾಯಿ- ಇಡ್ಲೀಯ ಗುಂಡಣ್ಣಾ ಚಟ್ನೀಯ ಚಲುವಣ್ಣಾ ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ|| ಮಗ- ಇಡ್ಲೀಯ ನಾನೊಲ್ಲೆ ಚಟ್ನೀಯ ಒಲ್ಲೊಲೆ ಮಾಸ್ತರು ಬೈಬೈ ಬೈಯ್ತಾನಾ ಆ ಸಾಲಿ ಯಾ ಸಾಲಿ ಹಳಸೀದ ಮಸಾಲಿ ಮಾಸ್ತರು ಬಡಿಬಡಿ ಬಡಿತಾನಾ ||೧|| ತಾ...

ಗುಂಡಣ್ಣ: “ಸಾರ್ ನೀವು ಕೊಟ್ಟ ಔಷಧಿಯಿಂದ ನನ್ನ ಹೆಂಡತಿ ಮಾತಾಡುತ್ತಿಲ್ಲ…” ಡಾ|| ರಂಗನಾಥ್: “ಹೌದಾ.. ನಾನು ನಿನಗೆ ಯಾವ ಔಷಧಿ ಕೊಟ್ಟೆ? ಗುಂಡಣ್ಣ: “ಯಾಕೆ ಸಾರ್” ಡಾ|| ರಂಗನಾಥ್: “ನನ್ನ ಹೆಂಡ...

ಸುಲಿಗೆ ಸಾಮ್ರಾಜ್ಯದಲ್ಲಿ ಅಟ್ಟಹಾಸ ಗೈಯುತ್ತಿರುವ ದಟ್ಟ ಹೊಗೆಯಾಗುತ್ತಿರುವ ಉದ್ದಿಮೆಪತಿಗಳ ಕಾರ್ಖನೆಗಳು ಮಾಲೀನ್ಯದ ಪ್ರತೀಕಗಳು. ರೋಗದ ಆಗರವಾಗಿ ಔಷಧಿಗೂ ಕಾಸಿಲ್ಲದೇ ಒದ್ದಾಡುವ ನನ್ನವರು ಬದುಕೆಲ್ಲ ನೋವುಂಡು ಪ್ರಾಣಿಗಳಂತೆ ಬೆಳೆದವರು. ಗೋಳಿನ ಗ...

ಬೆಳೆದೊಂದು ಹಣಕೆಂದು, ಮನೆಗೆಂದು ನೂರೊಂದು ಬಳಿಯಂಗಡಿಯೊಳೆ ತಂದು, ನಾ ಸಾವಯವವೆಂದು ಪೇಳಿದೊಡದು ಕುಂದು, ಹಿಂದು ಮುಂದಾಗಬೇಕಿಂದು ಕಳೆ ಬೆಳೆಗಳೊಂದಾಗಿ ಮನೆಯಡುಗೆ ಸರಕಾಗಿ ತಳುಕಿನಂಗಡಿ ದಾರಿ ತಪ್ಪಿದರದುವೆ ಸಾವಯವ – ವಿಜ್ಞಾನೇಶ್ವರಾ *****...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...