“ಚಕ್ಖುಪಾಲ ಮಹಾತೇರ” ಮತ್ತು “ಪಾಪಿ”ಯ ಮೂಲ ಬುದ್ಧಘೋಷನ ಜಾತಕ ಕತೆಗಳು (ಬರ್‍ಮಿ ಭಾಷೆಯಿಂದ ಇಂಗ್ಲೀಷಿಗೆ ಕ್ಯಾಪ್ಟನ್ ಟಿ. ರೋಜರ್ಸ್), “ಜುಲೇಖ”, “ರುದಾಕಿ” ಮತ್ತು “ಫಿರ್ದೌಸಿ”ಯು ಹಿಂದೆ ಅರಬ್ಬಿ ಮತ್ತು ಪರ್ಶಿಯನ್ ಸಾಹಿತ್ಯದ ವಿವಿಧ ಕೃತಿಗಳಿವೆ. “ಸುಲೇಮಾನ”ದ ಹಲವು ವಿವರಗಳನ್ನು ಬೈಬಲಿನ ಹಳೆ ಒಡಂಬಡಿಕೆ, ಆಂದ್ರೆ ಮಾಲ್ರೋನ Anti-Memoirs ಮತ್ತು ಐಸಾಕ್ ರೋಸೆನ್ ಫೀಲ್ಡನ ಸಣ್ಣ ಕತೆಯೊಂದರಿಂದ ತೆಗೆದುಕೊಳ್ಳಲಾಗಿದೆ. ರಿಸರ್ಡ್ ಹ್ಯಾರಿಸ್‌ನ Death of a Revolutionary ಎಂಬ ಪುಸ್ತಕ “ಬೊಲೀವಿಯಾದಲ್ಲಿ ಚೆ”ಯ ರಚನೆಗೆ ಕಾರಣ. “ಇಮಾಂ ಬಾರಾ”ಕ್ಕೆ ವಿವರಗಳನ್ನೊದಗಿಸಿದ್ದು ಅಬ್ದುಲ್ ಹಲೀಮ್ ಶರಾರರ Lucknow : The Last phase of an Oriental Culture (ಇಂಗ್ಲೀಷಿಗೆ ಇ ಎಸ್. ಹಾರ್ಕೋರ್ಟ್ ಮತ್ತು ಫಕೀರ್ ಹುಸೇನ್) ಎಂಬ ಕೃತಿ. “ರುಗ್ಣ ಯಾಕುಬ”, “ದೇವರು ದೊಡ್ಡವ”, “ಅಲ್ಲಾ ನಿದ್ರಿಸುತಾನೆ ಇಲ್ಲಾ”, “ಖೂನಿ”, “ಬಾಲ್ತ ಸ್ಹಾರ್! ಬಾಲ್ತ ಸ್ಹಾರ್!” ಮತ್ತು “ಜೂಲಿಯಾನ” ಅರ್ಜೆಂಟೀನಾದ ಸಾಹಿತಿ ಜೋರ್ಜ್ ಲೂಯಿ ಬೋರ್‍ಹೆಸ್‌ನ ಕತೆಗಳನ್ನೋದಿ ಬರೆದುವು. ಈ ಕವಿತೆಗಳನ್ನು ಬರೆಯುವಾಗ ಆಗತ್ಯವೆನಿಸಿದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. “ರುದಾಕಿ” ಕವಿತೆಯಲ್ಲಿ ಬರುವ ನಾವಿಕನ ಕತೆಗೆ ಆಧಾರ ನನ್ನದೇ ಕಿರುಕಾದಂಬರಿ ಅನೇಕ. ಇಲ್ಲಿಯೂ ಕತೆ ವ್ಯತ್ಯಾಸಗೊಂಡಿದೆ.
*****
