ಮೇಷ್ಟ್ರು : “ಭಾರತದ ರಾಜಧಾನಿ ಯಾವುದು?” ಶೀಲಾ : “ಬೆಂಗಳೂರು” ಮೇಷ್ಟ್ರು : “ತಪ್ಪು ಉತ್ತರ ಕೊಡ್ತಿದ್ದಿ.” ಶೀಲಾ : “ಇಲ್ಲ ಸಾರ್ ನೀವು ತಪ್ಪು ಪ್ರಶ್ನೆ ಕೇಳಿದ್ರಿ… ಕರ್ನಾಟಕದ ರಾಜಧಾನ...

ರಾಮ ಅತ್ತ ಸೀತೆ ಇತ್ತ ನಡುವೆ ರಾತ್ರಿ ಕೂಗಿತೆ ನಿನ್ನ ಬಿಲ್ಲು ಜಂಗು ತಿಂದು ಹುಲ್ಲು ಹುಡಿಯ ಮಲ್ಲಿತೆ ||೧|| ರಾಮ ರಾಮ ರಾಮ ಎನುತೆ ಕಾಮ ಕಾಮ ಎಂದೆನೆ ಸೀತೆ ಪ್ರೀತೆ ಪೂತೆ ಎನುತೆ ಕೋತಿ ದೂತೆ ಯಾದೆನೆ ||೨|| ಕಲಿಯ ಕೈಯ ಬಲಿಯು ಆದೆ ಸೀತೆ ಕೆಟ್ಟು ...

ಹಲಸಿನ ಕಾಯಿಗಳು ಮೈತುಂಬಾ ಜೋತಾಡುತ್ತಿದ್ದ ಹಲಸಿನ ಮರದ ಮುಂದೆ ಅವನು ನಿಂತಿದ್ದ, “ಇಷ್ಟು ಕಾಯಿ, ಹಣ್ಣುಗಳನ್ನು ಹೇಗೆ ಈ ಮರ ಹೊತ್ತು ನಿಂತಿದೆ ಗಾಳಿ, ಮಳೆ ಬಿಸಿಲಿನಲ್ಲಿ?” ಎಂದುಕೊಂಡ. ಒಡನೆ ಅವನಿಗೆ ನೆನಪಾದದ್ದು ಭಾರವೆಂದು ತಾನು ...

ಜಂಗಮ ಹಸಿವೆಗೆ ಆಲಯ ಕಟ್ಟುವುದು ಬೇಕಿಲ್ಲ. ಆಜ್ಞೆಗೆ ರೊಟ್ಟಿ ಕಿವಿಗೊಟ್ಟಿದೆ ಮನಸು ಕೊಟ್ಟಿಲ್ಲ. ಜಂಗಮದ ಬಯಲಲಿ ಸ್ಥಿರ ಆಲಯ ಕಟ್ಟುತ್ತದೆ. ರೊಟ್ಟಿ ಅಳಿಯುತ್ತದೆ ಸೃಷ್ಟಿಯಂತಿಮ ಸತ್ಯದ ಸ್ಥಾವರ ಉಳಿಯುತ್ತದೆ. *****...

ಅವ್ವ ಹತ್ತು ತಿಂಗಳು ಹೊತ್ತು ಹೆತ್ತಾಕೆ | ಅವ್ವ ಅನೇಕ ಕಷ್ಟಗಳ ನುಂಗಿ ನಡೆದಾಕೆ | ಅವ್ವ ಅಪ್ಪನ ಎಲ್ಲವನೂ ಸಹಿಸಿಕೊಂಡಾಕೆ|| ಅವ್ವ ಈ ಸಮಾಜಕ್ಕೆ ಅಂಜಿ ನಡೆದಾಕೆ| ಅವ್ವ ಈ ನೆರೆಹೊರೆಯವರ ನೆಚ್ಚಿನಾಕೆ| ಅವ್ವ ಹರಿದ ಸೀರೆಯ ಗಂಟಿಕ್ಕಿ ಉಟ್ಟು ಕೂಲಿಮ...

“ಕನಸು” ನಮ್ಮ ನಿದ್ರೆಯ ಅವಿಭಾಜ್ಯ ಅಂಗ. ಮಿದುಳಿನ ಹೈಪೋಥಲಮಸ್ ನಿದ್ರೆಯನ್ನು ನಿಯಂತ್ರಿಸುವ ಭಾಗ. ಹೀಗಾಗಿ ಕನಸು ಮೆದುಳಿನ ಚಟುವಟಿಕೆಯಾಗಿದೆ. ನಾವು ಒಂದು ಗಂಟೆ ನಿದ್ರೆ ಮಾಡಿದರೆ ಹತ್ತು ನಿಮಿಷ ಕನಸು ಕಾಣುತ್ತೇವೆ! ಅಂದರೆ ಪ್ರತಿರ...

ಏನಿದೆನ್ನಯ ಕಾವ್ಯ ? ವ್ಯಾಕುಲತೆಯೊತ್ತಡವೋ ? ಆನಂದದುಮ್ಮಳವೋ ? ಆಳ್ತನದ ವೈಭವವೋ ? ಎನ್ನುಸಿರ ಬಿಸಿಗೆಷ್ಟು ಹಸುರಡಗುವುದೋ ? ಮನದೊಳೆಷ್ಟೊಂದು ಪರಿ ಪ್ರಶ್ನೆಯುದಿಸಿದರು ಎನ್ನ ಬದುಕಿನನಿವಾರ್‍ಯವೀ ನಿಟ್ಟುಸಿರು – ವಿಜ್ಞಾನೇಶ್ವರಾ *****...

ಕೊಡಬೇಡವೋ ಶಿವನೆ! ಕೂಸು ಮುದ್ದ ಲೋಕವೆಲ್ಲಾ ಬಂಜೆ ಅಂದ್ರೂ ಪರವಾಗಿಲ್ಲ ತೀರಿ ಹೋಗಲಿ ನಮ್ಮ ತಲೆಗೆ ಎಲ್ಲಾ! ಅವರು ಇವರು ಯಾರ ಮಾತು ಏಕೆ ? ಅಪ್ಪ ಯಾರೋ ಗೊತ್ತಿಲ್ಲ ಸಾಯೋತನಕ ಅಮ್ಮನನ್ನಾದರು ನೋಡಿಕೊಂಡಿರುವ ಭಾಗ್ಯವೂ ನಮಗಿಲ್ಲ; ಕಾರಣ ನಾವು ದನಗಳು....

ಸಣ್ಣ ಕತೆ

ಭೀಮನಾಯಕನ ಮನೆಯಲ್ಲಿ ಗದ್ದಲವೋ ಗದ್ದಲ. ಹೆಣ್ಣುಮಕ್ಕಳ ಕೂಗಾಟ, ಅಳುವುದು, ಮಕ್ಕಳ ಚೀರಾಟದಿಂದ ಮನೆಯು ತುಂಬಿತ್ತು. ಅತ್ತು ಅತ್ತು ಎಲ್ಲರ ಮುಖವೂ ಊದಿ ಹೋಗಿತ್ತು. ಊರಿನ ದೊಡ್ಡ ಸಾಹುಕಾರನ ಕಾಲು ಹಿಡಿದುಕೊಂಡು “ನಮ್ಮಪ್ಪನ ಹೆಣ ಬಿಟ್ಟುಬಿಡ್ರ...

1...456789

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....