ಇಸ್ತ್ರಿ ಬ್ಲೌಜು ಸ್ಟಾರ್‍ಚ್ ಸೀರೆ ಉಟ್ಟು ಗರಿ ಗರಿಯಾಗಿ ಕಂಡರೇನು, ಗಂಡನ ಬಿಸಿ ಅಪ್ಪುಗೆ ಇಲ್ಲದೆ ಎದೆಗೂಡಿನ ಭಾವನೆಗಳೆಲ್ಲ ಮುದುಡಿರುವಾಗ! *****...

ಮಂಟಪಗಳ ಮುಂದೆ ಮೆರಗಾಗಿ ನಿಲ್ಲುವ ಸಿಂಗಾರದ ಬಾಳೆ ನೆರವಾಗಿ ನಿಲ್ಲಲಿಲ್ಲ ಯಾವ ಹಕ್ಕಿ ಪಿಕ್ಕಿ ಗೂಡಿಗು ಯಾರ ಮನೆಯ ಮಾಡಿಗು ಮೊನೆ ಮೊನೆ ಮುಳ್ಳಿನ ಬುರ ಬುರ ಕಳ್ಳಿನ ಈಚಲ ಮೈ ಈಡಿಗನ ಮೆಟ್ಟಿಲಾಗಿ ಗೀಜಗನ ತೊಟ್ಟಿಲಾಗಿ ಎಲ್ಲದಕು ಸೈ *****...

‘ಮಾರುತಿ ಪುರ’ ಎನ್ನುವುದು ಮಲೆನಾಡಿನ ಒಂದು ಚಿಕ್ಕ ಹಳ್ಳಿ. ಯಾವುದೇ ಆಧುನಿಕ ಸೌಲಭ್ಯಗಳು ಇಲ್ಲದ ಅಭಿವೃದ್ದಿಯ ಮುಖವನ್ನೇ ನೋಡದ ಹತ್ತಾರು ಮನೆಗಳ ಕಾನನದ ಮದ್ಯದ ಊರು ಮಾರುತಿಪುರ. ಅಡಿಕೆ, ಕಾಫಿ, ಭತ್ತ ಇಲ್ಲಿ ಮುಖ್ಯ ಕೃಷಿ. ಭತ್ತದ ಗದ್ದೆ ಮತ್ತು ...

(ಝೆನ್ ಕಥೆಯ ಆಧಾರ- ಜಾಪಾನಿ ಭಾಷೆಯಲ್ಲಿ ಮಹಾಸಾಗರದಲ್ಲಿ ಏಳುವ ಭಾರಿ ಅಲೆಗಳಿಗೆ ಓನಮಿ ಎನ್ನುತ್ತಾರೆ) ಒಂದೂರಿನಲ್ಲಿ ಓನಮಿ ಎಂಬ ಮಲ್ಲನಿದ್ದ. ಕಣಕ್ಕಿಳಿಯಲು ಆತ ಸದಾ ಸಿದ್ಧ. ಒಬ್ಬಿಬ್ಬರೆದುರಲ್ಲಿ ಎಲ್ಲರ ಒದ್ದು ಕೆಡವುತ್ತಿದ್ದ. ಒಟ್ಟಿನಲ್ಲಿ, ಗು...

ಉಘೇ ಉಘೇ ಉಘೇ ಹಿಂದು ದೇಶ ಹಿಂದು ಹೃದಯ ಸಿಂಧು ಗೋದೆ ಗಂಗೆಯು ಅಂದಿಗಿಂದಿಗೆಲ್ಲ ಒಂದೆ ಹಿಂದು ಜನ ಸ್ವತಂತ್ರರು ಉಘೇ ಉಘೇ ಉಘೇ ಮುಳಿಗಿ ಸೂರ್ಯ ಬೆಳಗಿ ಸೂರ್ಯ ಮುಳುಗಿ ಪರರು ಮೇಗಡೆ ಕಳೆದು ನನ್ನ ನಿನ್ನ ಬಂಧ ತಿಳಿಯೊ ನಾವ್ ಸ್ವತಂತ್ರರು ಸಾಗಿ ವರ್ಷ ...

ಅರಿವಾಗಲೇ ಇಲ್ಲ ನನ್ನೊಳಗೆ ನೀನಿದ್ದೆ. ಕಂಡಕಂಡಲ್ಲಿ ಕಾಡು ಮೇಡಲ್ಲಿ ನಾಡಬೀಡಲ್ಲಿ ನಿನ್ನರಸಿ ಅಲೆದೆ. ಕಣ್ಣಿನಾಳದ ಬಿಂಬದೊಳು ಒಳಬಿಂಬವಾಗಿ ನೀನಿದ್ದೆ. ಬಿಂಬಕ್ಕೆ ಇಂಬು ನಾನಾಗಿದ್ದು ತಿಳಿದಿರಲಿಲ್ಲ ಮುಷ್ಟಿಯೊಳಗಣ ಸೃಷ್ಟಿ ನೀನಾಗಿದ್ದೆ ಕರದೊಳಗಣ ...

1...789

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...