ಮಂಟಪಗಳ ಮುಂದೆ
ಮೆರಗಾಗಿ ನಿಲ್ಲುವ
ಸಿಂಗಾರದ ಬಾಳೆ
ನೆರವಾಗಿ ನಿಲ್ಲಲಿಲ್ಲ
ಯಾವ ಹಕ್ಕಿ ಪಿಕ್ಕಿ ಗೂಡಿಗು
ಯಾರ ಮನೆಯ ಮಾಡಿಗು
ಮೊನೆ ಮೊನೆ ಮುಳ್ಳಿನ
ಬುರ ಬುರ ಕಳ್ಳಿನ
ಈಚಲ ಮೈ
ಈಡಿಗನ ಮೆಟ್ಟಿಲಾಗಿ
ಗೀಜಗನ ತೊಟ್ಟಿಲಾಗಿ
ಎಲ್ಲದಕು ಸೈ
*****