ಯಾರೋ ಬೇಡುವ ಯಾರೋ ಹಾಡುವ ಬೆರೆಯದ ವಾಣಿಗಳು, ಯಾರೋ ಮುಗಿಲಲಿ ಯಾರೊ ಕಣಿವೆಯಲಿ ಹೊಂದದ ಚಿತ್ರಗಳು! ತಿನ್ನಲಾರದೆ ಅನ್ನವ ಮೋರಿಗೆ ತೂರುವ ಹಸ್ತಗಳು, ಮಣ್ಣಿನ ಜೊತೆ ಬೆರತನ್ನವೆ ಎಷ್ಟೋ ಒಡಲಿಗೆ ವಸ್ತುಗಳು, ಚಿನ್ನದ ಭಾರಕೆ ತಾರಾಡುವ ಮೈ ಸರಿಯುವ ಠೀವಿ...

ಕಣ್ಣು ಸುತ್ತಲಿನ ಕಪ್ಪುಛಾಯೆಗೆ ಅದೆಷ್ಟು ಮೇಕಪ್ ಗಲ್ಲಕೆ ಅತಿಯಾದ ಬ್ಲಶ್ ಅದವಳಿಗೆ ಹೊಂದುವದೇ ಇಲ್ಲ ನಗು ಎಲ್ಲಿಯೋ ಕಾಲು ಕಿತ್ತಂತೆ ಮಾತುಗಳಿಲ್ಲ ಗುಮ್ಮಿ ಅಂತರಾಷ್ಟ್ರೀಯ ಗಗನಸಖಿ ಇವಳೆ?– ಯಾಕೋ ಅವಳನ್ನು ಮತ್ತೆ ಮತ್ತೆ ನೋಡಬೇಕೆನಿಸಿ ಏನೇ...

ನಿನ್ನದೀ ಲೋಕದಲಿ ನಿನ್ನಣತಿಯಂತೆ ಎನ್ನ ಬದುಕಿರುತಿರಲು ನನಗಿಲ್ಲ ಚಿಂತೆ ||ಪ|| ನಿನ್ನ ಕರುಣ ಬೆಳಕಿನ ಲೀಲೆ, ಮನದಿ ತಾ ತುಂಬಿರಲು ಎನ್ನ ಕಾಡುವುದೆಂತು ತಮಸ ತಾಪದಾಽಚಿತೆ, ||ಅ.ಪ.|| ಕರಿ ಕಾರಿರುಳುಗಳು ಬಣ್ಣದೊಳಥಳಕುಗಳು ಇಡಿಕಿರಿದರೇನಂತೆ ನನ್ನ ...

ಪ್ರಭೂ ಈ ಬಾಳಿನಲ್ಲಿ ನನ್ನದೇನಿದೆ? ಎಲ್ಲ ನೀನೆ ನೀಡಿದ ಕೃಪೆಗಳಾಗಿವೆ. ಬಾಳಿಗೊಂದು ಪಾಯವಾಗಿ ಸಿಕ್ಕ ಮನೆತನ ಸುತ್ತ ಎದ್ದ ಬೇಲಿ ಬಳ್ಳಿ ಮಣ್ಣ ಕಣ ಕಣ, ಆಗ ಈಗ ಭೇಟಿಕೊಟ್ಟ ನಾಲ್ಕು ಮಳೆ ಹನಿ ಬಿಸಿಲ ತಾಪದಲ್ಲಿ ಉಳಿದು ಬಂದ ಬೆಳೆ ಹನಿ. ಪಡೆದ ಪತ್ನಿ ...

ಜಗದ ಪರಿಗೆ ಬೇಸತ್ತ ಬುದ್ಧ ನಡುರಾತ್ರಿ ಚಕ್ಕನೆ ಹೊರಬಿದ್ದು ಭೋದಿವೃಕ್ಷದ ಕೆಳಗೆ ಕುಳಿತು ಮಹಾನ್ ಭಗವಾನ್ ಬುದ್ಧನಾದ ಯಶೋಧೆ ಹಗಲಿನಲ್ಲಿಯೇ ಹೊರಬಿದ್ದಿದ್ದರೂ ಅಗ್ನಿ ಪರೀಕ್ಷೆಯ ರಾಮಾಣವಾಗಿ ಅಡವಿ ಸೇರಿಬಿಡುತ್ತಿದ್ದ ರಾಮನ ತಮ್ಮ ಬುದ್ಧ. *****...

ಊರುಗೋಲಿನ ಅಜ್ಜ ಆಸ್ಪತ್ರೆಯ ಆವರಣದಲಿ ಒಬ್ಬನೇ ಮೆಲ್ಲನೆ ತಿರುಗಿದಾಗ ಮೂಲೆಯ ಹೂಕುಂಡದಲಿ ತುಂಬ ಬಾಡಿದ ಹೂಗಳು. ಅಲ್ಲಿ ಬಿದ್ದಿರುವ ಅಳಲು ಯಾವುದೋ ಪಾಪಕಂಡ ಬದುಕು ಹೊತ್ತೊಯ್ಯುವ ನರಕ, ಯಾತನೆಗಳಿಗೆ ಮುದಿ ಮನುಷ್ಯ ಕಣ್ಣುಗಳು ಭಾರಭಾರ. ತೊಟ್ಟುಕ್ಕುವ...

ಅಷ್ಟಗಲ ಬಾಯಿ ತೆರೆದು ಗುಂಡಿಯಿಲ್ಲದ ನನ್ನ ಪ್ಯಾಂಟ್ಸಿನ ಹಾಗೇ ನಗಬೇಡ ನನೆದುರು ಕುಳಿತು ಮರೆತು ಹೋದ್ದಲ್ಲ ಜನಕ್ಕೆ ಅಗೌರವ ತೋರಿಸುತೇನೆ ಎಂದಲ್ಲ ಮುಖ್ಯ ಇದಕ್ಕೆ ಬಟನ್ಸೆ ಇಲ್ಲ. ನೀ ನಗುತೀಯ! ಹುಟ್ಟಿಬಂದಾಗ ಮಾತು ಕೊಟ್ಟದ್ದುಂಟೆ ಪ್ಯಾಂಟ್ಸು ಹಾಕು...

ಉದ್ದದಾಡಿಯ ಕೆಂಗಣ್ಣಿನ ಮಂತ್ರವಾದಿ ಇದ್ದಾನೆ ಹಾಗೆಯೇ, ಅದೆಷ್ಟೊ ವರ್ಷಗಳಿಂದ ಮುಪ್ಪಿಲ್ಲ ಸಾವಿಲ್ಲ ಕುಡಿದು ಬಿಟ್ಟಿದ್ದಾನೆ ದೇವಲೋಕದ ಅಮೃತ ಏಳು ಸಾಗರದಾಚೆ ಅದೆಲ್ಲಿಯೋ ಉಸಿರಾಡುತ್ತಿದೆಯಂತೆ ಪ್ರಾಣಪದಕ ಹುಡುಕಿ ಕೊಲ್ಲಲಾರದೆ, ನರಳಿವೆ ನರಳುತ್ತಲೇ...

12345...7

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....