
ಬೆಟ್ಟ ಬೆಂದಿತ್ತು. ಬಿದಿರುಗಣ್ಣು ಒಡೆದಿತ್ತು. ಸುತ್ತನೋಡಿದರೆ ನಿರಾಳವಾಯಿತ್ತು. ಕತ್ತಲೆ ಹರಿಯಿತ್ತು. ಮನ ಬತ್ತಲೆಯಾಯಿತ್ತು. ಚಿತ್ತ ಮನ ಬುದ್ಧಿ ಏಕವಾದವು. ಎಚ್ಚತ್ತು ನೋಡಿದರೆ, ಬಚ್ಚಬರಿಯ ಬೆಳಗಲ್ಲದೆ, ಕತ್ತಲೆಯ ಕಾಣಬಾರದು ಕಾಣಾ ಅಪ್ಪಣಪ್ರಿಯ...
ಹೇಗೆ ಹೇಳಲೇ ಗೆಳತಿ ದಿನವಿಡಿ ಹರಿಯದೇ ಧ್ಯಾನ, ಈ ಕಳ್ಳನ ಮಾಯೆಗೆ ಸಿಕ್ಕಿ ಕಳೆದುಕೊಂಡೆನೇ ಮಾನ ಇವನಿಗೆ ಕಾದೂ ಕಾದೂ ಮೈಯೆಲ್ಲಾ ಬಿಸಿ ಬಾಣಲೆ ಬತ್ತ ಸಿಡಿಸಿದರು ಸಾಕು ಅರಳಾಗುವುದೇ ಕೂಡಲೆ ಹೇಳದೆ ಬಂದೇ ಬಿಡುವ ಕರೆದರೂ ಬಾರದ ಹುಡುಗ, ಮರುಳು ಮಾಡಿಯೇ...
ಮಟ್ಮಾಟಾ ಮಧ್ಯಾನ್ದತ್ತು….ವುರ್ರೀರ್ರೀ….ಬಿಸ್ಲು. ನೆಲ್ದ್ಮೇಲೆ ಕೆಂಡಾರ್ವಿದಂಗೆ. ವುಗಾದಿಯ ಬಿಸ್ಲೆಂದ್ರೆ….ಅದ್ರಲ್ಲಿ…. ಬಳ್ಳಾರಿ ಬಿಸ್ಲೆಂದ್ರೆ…. ಯೇಳ್ದೇ ಬ್ಯಾಡಾ! ಸಿವ್ನ ಮೂರ್ನೇ ಕಣ್ಣು ಬಿಟ್ಟಂಗೇ…...















