ಸಾಯಿಸುವ ಹಾವು ಹುತ್ತವನೆಂತು ಪ್ರೀತಿಪುದು?

ಬಯಕೆ ಕಣ್ಣಿನಭ್ಯರ್ಥಿಗಳೆಷ್ಟೊಂದು ಎನ್ನ ಸುತ್ತ ಬಯ್ಕು ಬೇಕೆಂಬ ಮಗನ ಕಣ್ಣೆನ್ನತ್ತ ಬಾಯ್ಬಿಟ್ಟಂಬಾ ಎನುವ ತಾಯಿಗೇನಿಡಲಿ ತುತ್ತ ಹಾಯೆನಲು ಬಂದು ಪೋಪರೊಲೈಕೆಗಿಲ್ಲಾಗಿದೆ ಚಿತ್ತ ಮಾಯೆ ಬಯಕೆಗಳಬ್ಬರಕನ್ನ ಚಿತ್ತ ಹಾವಿನ ಹುತ್ತ - ವಿಜ್ಞಾನೇಶ್ವರಾ

ಸುತ್ತ ಪೇಟೆಯ ಸುಖ ಕಾಣಲೆಂತಿಲ್ಲಿ ಸುಖವನರಸುವುದು?

ಋತು ಮತಿಯನರಿಯುವ ಕಷ್ಟ ಮುತ್ತುವಾ ಕೀಟ ರೋಗಕರಿವ ಮದ್ದಿನ ಕಷ್ಟ ಅತ್ತಿತ್ತೋಡಾಡಲೆಮ್ಮ ಹಳ್ಳಿ ಮಾರ್ಗವು ಕಷ್ಟ ಹತ್ತಾಡುತಿರಲೂರವರೊಲಿಯೆ ಮಾಡುವ ಕಷ್ಟ ಮತ್ತೆಮ್ಮ ಮನೆಯಾಕೆಯೋಲೈಕೆ ಕಷ್ಟ ಕಷ್ಟ - ವಿಜ್ಞಾನೇಶ್ವರಾ *****

ಒಳ್ಳಿತೆಲ್ಲಿಹುದಿಲ್ಲ ಕೃಷಿಯಲ್ಲಿ?

ಎಲ್ಲಿ ನೋಡಿದರಲ್ಲಿ ರೈತ ಬವಣೆಗಳು ನೂರು ಬೆಳೆಯದಾವುದಾದರು ಈರುಳ್ಳಿ ಸುಲಿದ ನೀರು ಕೊಳತ ಟೊಮೇಟೋದೀಪರಿಗೆ ಬಂದೀತು ಕಾರು (ವಾಂತಿ) ಹೇಳಿ ಕೇಳಿ ಕಲ್ಪವೃಕ್ಷವೆಂದವರ ಆಸೆಗಳು ಚೂರು ಮೊಳೆತೆನ್ನಾರಂಭದಾಶಯಕೆಲ್ಲಿಹುದು ನೀರು - ವಿಜ್ಞಾನೇಶ್ವರಾ *****

ಕತ್ತೆತ್ತಿದರೆಲ್ಲವೂ ಕಷ್ಟ ಕಾಣುವುದಲ್ಲಾ?

ಬಿತ್ತನೆಯೊಳುತ್ತಮವು ಕಷ್ಟ ಸುತ್ತ ಕೊಳವೆ ಬಾವಿಯಾಳವು ಕಷ್ಟ ಎತ್ತಲಾ ನೀರನುತ್ತಮದ ವಿದ್ಯುತ್ ಕಷ್ಟ ಉತ್ತು ಬಿತ್ತುವಾಳುಗಳೊಲುಮೆ ಕಷ್ಟ ಎತ್ತ ಪೋದರು ಪೇಳ್ವರಲಾ ಕೃಷಿ ಕಷ್ಟ ಕಷ್ಟ -ವಿಜ್ಞಾನೇಶ್ವರಾ *****

ಕಾವ ಬೆಳೆಯೆಂದಾವ ಬೆಳೆಯನಾಯ್ದುಕೊಳ್ಳಲಿ?

ಆವ ಬೆಳೆಗಾವ ದರವಪ್ಪುದೋ ಆ ಕಾಲ ಅವಕಪ್ಪ ಮೂಲ ಧನವನೆಂತು ಹೊಂದಿಸಲಿ ಸಾವಯವವೆನಲೋ ಸಾಲದಾ ಬಲವೆನಲೋ ನೋವಿಲ್ಲದೆನ್ನ ಬದುಕಿನಾಶಯಕಾವ ಕೃಷಿ ಮೇಲೋ ತವ ಕಾಯದಾನೆಂತು ದೋಸೆರೆವುದಿಲ್ಲಿ - ವಿಜ್ಞಾನೇಶ್ವರಾ *****

ಕಾನನವಿಲ್ಲದೆ ಆನೆಯೆಂತು? ಕೃಷಿಯೆಂತು?

ಆನೆ ದಂತದವೊಲಾಯ್ತಲಾ ಕೃಷಿ ಭೂಮಿ ಯನು ನಿವೇಶನಕೆಂದು ಮಾರಿದೊಡುಂಟು ಘನ ಬೆಲೆಯದನು ಉತ್ತು ಬಿತ್ತಿದೊಡೆ ಆನೆ ಸಾಕಿದಂದದಲಿ ಬರಿ ಖರ್ಚು ಮಾನಿಸೆಲೋ ಕಾನನವನತಿ ತುರ್‍ತಿನಲಿ - ವಿಜ್ಞಾನೇಶ್ವರಾ *****

ಆರೆಂದರೀ ಸಾವಯವದೊಳೆಲ್ಲ ಬರಿ ಲಾಭವೆಂದೆನುತ?

ಆರೋಗ್ಯ, ಐಶ್ವರ, ಅವಕಾಶವಿಹುದಿಲ್ಲಿ ಹಿರಿದು ಸಾವಯವವೆಂದರದು ಬರಿದು ಒರೆದು ನೋಡಿದರಿದಕೆ ಹಿರಿ ಸಾಕ್ಷಿ ಸಿಗದು ತರತಮವು ವರ ಬರವು ಜಗದ ಸೂತ್ರವಿದ ನರಿದು ಮಾಡುವ ತಪದ ಪರಿ ಸಾವಯವ - ವಿಜ್ಞಾನೇಶ್ವರಾ *****

ಅರಿತೊಡಾ ಮರಕು ಗೊಬ್ಬರಕು ಅಂತರವದೇನು?

ಮರತಾನೊಲಿದು ಕೊಟ್ಟುದನುಂಡು ಬೆಳೆವೆಮ್ಮ ಶರೀರದೊಳು ಹಿರಿದಂಶ ಬರಿ ಗೊಬ್ಬರವಾಗುತಿರಲಿದ ನರಿದು ತ್ವರಿತದೊಳು ವಿಲೆವಾರಿ ಮಾಡಲೆಲ್ಲೆಡೆಗು ಆರೋಗ್ಯ. ಮಲ ಮರಕೊದಗಲದು ಜಗದ ಭಾಗ್ಯ ನಿರವಯವ ಗೊಬ್ಬರದುಬ್ಬರ ರೋಗದೊಳೆಲ್ಲೆಲ್ಲೂ ತ್ಯಾಜ್ಯ - ವಿಜ್ಞಾನೇಶ್ವರಾ *****

ಉದ್ಯೋಗದೊಳುನ್ನತದುದ್ಯೋಗ ಕೃಷಿಯಲ್ಲದಿನ್ನೇನು?

ಜಾಬೆಂಬಾಗ್ಲ ಪದಕೆಮ್ಮ ಉದ್ಯೋಗವೆಂಬುದೆಂದೆಂದುಂ ಬದಲಿ ಪದವಲ್ಲವಿದರರ್ಥದೌನ್ನತ್ಯವದಕಿಲ್ಲ ಜಾಬೆಂದರೆಮ್ಮ ಪ್ರಕೃತಿಯನರ್ಥ ಲಾಭಕೊಳಪಡಿಸುವುದು ಉದ್ಯೋಗದೊಳೆಮ್ಮ ಬುದ್ಧಿ ಮೈ ಮನಗಳನ್ನದೊಳೊಂದಾಗಿ ಲಾಭದರ್‍ಥವನುನ್ನತದ ಕೃಷಿಗೇರಿಪುದು - ವಿಜ್ಞಾನೇಶ್ವರಾ *****

ಆರಂಭವೇ ಇಷ್ಟು ದುಬಾರಿಯಾದರೆ ಅಂತ್ಯವಿನ್ನೆಂತು?

ಆರಣ್ಯಿಕವೆಮ್ಮ ಸಂಸ್ಕೃತಿಯು ಕಾಡೊಳ ಗರಿತು ಬದುಕುವ ಕಲೆಯು. ಕಾಡ ಕಳೆಗಳೆಡೆಯಲ್ಲಿ ಆರಂಭ ಎನುತಷ್ಟಿಷ್ಟು ಕಳೆಯ ಕೀಳುವ ಕಲೆಯು ಬರ ಬರುತಾರಂಭವೀ ಪರಿವೇಷದೊಳಂತ್ಯವನು ದೂರಿಡಲೆಳಸುವಾಸ್ಪತ್ರೆವೊಲ್ ದುಬಾರಿಯಾಯ್ತಲಾ - ವಿಜ್ಞಾನೇಶ್ವರಾ *****
cheap jordans|wholesale air max|wholesale jordans|wholesale jewelry|wholesale jerseys