
ಇನ್ನುಮೇತಕೆ ನಿನ್ನ ಮುಸುಕು ಮೌನವ ತೊರೆಯೆ? ಮುಚ್ಚಾಲೆಯಾಡಿ ದೊಲ್ಲಯಿಸುವೇಕೆನ್ನ? ತಳಮಳಿಪುದೆನ್ನ ಮನ ನಿನ್ನ ತೆರೆಯಂ ಹರಿಯೆ- ನಿಲುಕದಲೆ ತಡೆವೆ; ಬುಲ್ಲಯಿಸುವೇಕೆನ್ನ? ೪ ಸೊಲ್ಲಿಲ್ಲದುಲಿಗಳಿಂದುಲಿವ ನಿನ್ನಯ ಸೊಲ್ಲ ಸೆಲೆಯಿಂದ ಹಾಡುಲಿಯ ಬಲ್ಲುದೇ...
೧ ಜಯವು ಶಾಂತಿಯ ಶರಣ, ಭಾರತ- ಪಾರತಂತ್ರ್ಯ ನಿವಾರಣಾ! ಜಯ ಮಹಾತ್ಮಾ, ಜಯವು ಮೋಹನ, ಪತಿತಜನ ಸಂಜೀವನಾ ! ೨ ಬೆಳಕು ಬಿದ್ದಿತು ಭರತಭುವಿಯಲಿ ಜನ್ಮಿಸಲು ಗುರುಗಾಂಧಿಯು, ಕಳಕಳನೆ ನಗೆಯೆದ್ದು ನಿಂತಿತು, ಶಾಂತಿ-ಸೌಖ್ಯದ ನಾಂದಿಯು ! ೩ ಭರತಮಾತೆಯ ಪೂರ್ವ...
ಬಯಸಿದ್ ಸಾಮಾನ್ ಬೇಕಾದಂಗೆ ಇರಲಿ ಇಲ್ದೇನ್ ಇರಲಿ- ತಾಪತ್ರೇಯನಕ್ ತಪ್ಪಿದ್ದಲ್ಲ! ಸುಳ್ಳಂತ್ ಅನ್ನೌನ್ ಬರಲಿ! ೧ ಬುಂಡೇಲ್ ಒಂದ್ ತೊಟ್ ಇರೊಗಂಟ್ಲೂನೆ ನಿದ್ದೆ ಗಿದ್ದೆ ಬರದು! ಬುಂಡೇ ಕಾಲಿ ಆಗೋದ್ರನಕ ನಿದ್ದೆ ಬರಲೇ ಬರದು! ೨ ಈ ತಾಪತ್ರೇನ್ ತಳ್ಳಾಕ...













