
ಒಬ್ಬನೆಂದರೊಬ್ಬನೇ ಒಬ್ಬನೊಳಗೆ ಇಬ್ಬನೇ ಇಬ್ಬನೇ ಮೂವನೇ ಒಬ್ಬನೊಳಗೆ ಎಷ್ಟನೇ ಒಂದು ಒಡಲ ನೋಡಿ ನಾವು ಒಬ್ಬನೆನುವೆವು ಒಂದು ಒಡಲಿಗೊಬ್ಬನೇ ಎಂದುಕೊಳುವೆವು ಒಬ್ಬನಲ್ಲ ಇಬ್ಬನಲ್ಲ ಒಳಗಿರುವವನಿಗೆ ಲೆಕ್ಕವಿಲ್ಲ ಬಂದು ಹೋಗಿ ಮಾಡುತಾರೆ ಒಕ್ಕಲಿಗರೆ ಎಲ್ಲ...
ಸೃಷ್ಟಿ ಸ್ವಯಂಪ್ರಭೆಯಗುಹೆಯ ದಾರಿಗನಾಗಿ ಚೇತನಂ ನಡೆಯುತಿರೆ, ವಿಸ್ಮಯಂಗೊಳಿಸಿತಿದ ನೂತನದ ನಸುಕೊಂದು ಒಂದೆಡೆಯೊಳ್ ; ಅದರಿಂದ ಸ್ಪಷ್ಟ ಮಂದದಕಾಯ್ತು ಅಹಮಸ್ಮಿ ಎಂಬರಿವು. ನಾನುಂಟು’ ಎನ್ನುತಿದು ಹಿಗ್ಗಿ ಕಣ್ಮನ ತೆರೆಯ- ಲೆನಿತು ಭಯಮಾಯ್ತದಕೆ...
ಶರಣ ದೊಡ್ಡ ದೀಪದ ಕೆಳಗ ಉದ್ದ ಭಾಷಣ ಬಿಗಿದು ಚಪ್ಪಾಳಿ ಹೊಡೆಸಿದರ ಶರಣನಲ್ಲ ಕುಡ್ಡ ದೀಪದ ಕೆಳಗ ಬಿದ್ದ ಆತ್ಮರ ಹುಡಿಕಿ ಶಿವನ ತೋರುವ ಶರಣ ಮುದ್ದುಕಂದ ವ್ಯಾಖ್ಯಾನ ಬಲುದೊಡ್ಡ ಜುಟ್ಟಿನಲಿ ರುದ್ರಾಕ್ಷಿ ಸರ ಬಿಗಿದು ವ್ಯಾಖ್ಯಾನ ಕುಟ್ಟುವವ ಶರಣನಲ್ಲ ಹ...
ನಂ ಪಡಕಾನೇಲ್ ವುಂಬ ಮುನಿಯ ಇಬ್ರೂ ಗಟಾಂಗಟಿ! ಓದ್ ಸನವಾರ ಬಿತ್ ಇಬ್ಬರ್‍ಗು ಬಾರಿ ಲಟಾಪಟ! ೧ ಸುರುವಾಯ್ತಣ್ಣ ಮಾರಾಮಾರಿ- ಯಾವ್ದೊ ಒಂದ್ ಚಿಕ್ ಮಾತ್ಗೆ; ಬೆಟ್ದಾಗ್ ಕಲ್ಗೋಳ್ ಪೇರೀಸ್ದಂಗೆ ಲಾತ್ ಏರ್‍ಕೋಂತು ಲಾತ್ಗೆ ೨ ನಡನುಗ್ ಎತ್ತಾಕ್ ಕೆಳಕ್ ಕೆ...
ನಗೆಯಾಡದಿರು ನನ್ನ ನಲುಮೆ ಒಲುಮೆಯ ಕುರಿತು. ಅರಿಯೆನೇ ತುಂಬು ಮೈ ಮಾಂಸಪಿಂಡದ ಡಂಭ- ವೆಂಬುದನು? ನಾಣು ನೆತ್ತರದಾಟ, ಮಧು ಚುಂಬ- ನವು ಕುನ್ನಿ ಚಿನ್ನಾಟ, ಸಂತತಿಯ ತಂತು ಋತು- ಮಾನಗಳ ಮಾಟ; ಅಂತಃಕರಣ ಹುಲು ಡೊಂಬ- ನೊಲು ಕುಣಿದು ಮಣಿವಾಟ. ಅತಿಥಿ ರೂ...













