
ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?- ಬೇಡಿದುದ ಕೊಡೆ, ಬೇಡದುದನಾಯ್ದು ಕೊಡುವೆ! ಆರದುದನಾಪೆನೆಂದೇಕೆ ತಡಬಡುವೆ? ಕೇಳುವೊಡನೀವೆನೆಂದೇಕ ಬೇಡಿಸುವೆ? ೪ ಆದೊಡಂ ಕೇಳೆನಗೆ ನಿನ್ನಿಂದು ಬೇಡ- ಅವಳನೆನ್ನಿಂದೊಯಿದ ಇಂದೆನಗೆ ಬೇಕೆ? ಇನ್ನವಳ ಕಾಣಿಸದ ನ...
ನಾದ ವೇದಗಳ ಶಿವೆ ಭರತ ಮಾತೆಯ ಓಂಕಾರಗೀತೆಯ ಶಿರೋಮಣಿಗಳ ಮಾತೆಯೆ ನಿನಗೆ ವಂದನೆ ಶಿವೆ || ಆನಂದದನುರಾಗದ ಪದ್ಮಮುಕುಟ ಶೋಭೆಯೆ ಸುರನರಸೇವಿತೆ ಸುಂದರಿ ಮಾಧವಿ ಲಾವಣ್ಯಕಾಲವಲ್ಲಭೆ ನಿನಗೆ ವಂದನೆ ಶಿವೆ || ವನಸ್ಪತಿಯ ವೈಭವದ ತಾಣವೆ ಸುಂದರ ಗಾನ ವಿನೋದವ...
ತನ್ನತಾನೆ ಚಂದ ತನ್ನದೆಲ್ಲವು ಚಂದ ತನ್ನ ಮೀರಿದ ತಾನು ಇನ್ನು ಚಂದ ತನ್ನ ಮಾನಿನಿ ಚಂದ ಮನಿಮಾರು ಕುಲಚಂದ ತನ್ನದೆಲ್ಲವ ಮೀರಿದ್ದಿನ್ನು ಚಂದ ಹಾಂಗ ಹೋದರ ಹಾಂಗ ಹೀಂಗ ಬಂದರ ಹೀಂಗ ಹಾದಿಮನಿ ಜಡಿಲಿಂಗ ನೋಡು ಮ್ಯಾಲ ತನಗಾಗಿ ಸತ್ತವರು ತನಗಾಗಿ ಅತ್ತವರು...
ಯರಲವವೆಂಬುದು ಸತ್ಯ ಯರಲವವೆಂಬುದೆ ನಿತ್ಯ ಉಳಿದದ್ದೆಲ್ಲವು ಮಿಥ್ಯ ಹರಿ ಶಂಭೋಶಂಕರ ಅ ಆ ಇ ಈ ಮಿಥ್ಯ ಎ ಏ ಐಯೂ ಮಿಥ್ಯ ಋ ೠ ಎಂಬುದು ಮಿಥ್ಯ ಒ ಓ ಔವೂ ಮಿಥ್ಯ ಅಂ ಅಃ ಭಾರೀ ಮಿಥ್ಯ ಯರಲವವೆಂಬುದೆ ಸತ್ಯ ಉಳಿದದ್ದೆಲ್ಲವು ಮಿಥ್ಯ ಹರಿ ಶಂಭೋಶಂಕರ ಕ ಖ ಗ ...
ಬಾನ ಬಣ್ಣ ಮಾಗಿಸಿ ಶಶಿ ಮೂಡುತಿಹನದೋ. ಸಂಜೆ ಹೂವನೆರಚಿ ಸಾರೆ ನಮ್ರವಾಗಿ ತಾರೆ ತೋರೆ ಶರದದಿರುಳ ಕರವ ಪಿಡಿದು ಏರುತಿಹನದೋ. ಉದ್ಯಾನದ ಪುಷ್ಪಬೃಂದ ಲಜ್ಜೆಯ ಸಿರಿ ಹೊಂದಿದಂದ ತೆಳು ಬೆಳಕಿನ ಮೇಲುದುವನು ಧರಿಸುವಂತಿದೋ. ತಮವನುಳಿದುವೆನುವ ತೆರದಿ ನಿಡಿ...













