
ಬಲ್ಲುದೆ ಲತೆ ಫಲಂ ತನ್ನ ಸಿಹಿಯೊ ಕಹಿಯೊ ಎಂಬುದನ್ನ? ಒಗೆದಂತೊದಗಿಸಲು ಬನ್ನ ಮೇನೊ? ಬಳ್ಳಿಯಾ ೪ ಹಲವೊ ಕೆಲವೊ ಸವಿದು ಹಣ್ಣ, ಸಿಹಿಯಾದಡೆ ಕೊಳುವುದುಣ್ಣ ಕಹಿಯಾದಡೆ ಕಳೆವುದಣ್ಣ ಲತೆಯ ತಳ್ಳಿಯಾ ೮ ಪ್ರಕೃತಿವಶಮೆ ಫಲಿಸ ಬಲ್ಲ ಲತೆಗೆ ರುಚಿಯ ಗೊಡವೆ ಸಲ...
ದೂರದೊಂದು ಹಾಡಿನಿಂದ ಮೂಡಿಬಂದ ಕನ್ನಡ; ನನ್ನ ಮುದ್ದು ಕನ್ನಡ ಕಾಣದೊಂದು ಶಕ್ತಿಯಿಂದ ಉಸಿರಿಗಿಳಿದ ಕನ್ನಡ; ನನ್ನ ಪ್ರಾಣ ಕನ್ನಡ ನೀಲಿ ಕಡಲ ಅಲೆಗಳಿಗೆ ದನಿಯ ಕೊಟ್ಟ ಕನ್ನಡ; ಸಪ್ತಸ್ವರ ಕನ್ನಡ ತೇಲಾಡುವ ಮೋಡಗಳಿಗೆ ಮುತ್ತನಿಟ್ಟ ಕನ್ನಡ; ಸಹ್ಯಾದ್ರಿ...
ವರುಷ ವರುಷಕ್ಕೊಮ್ಮೆ ಹುಟ್ಟು ಹಾಕುವರು ನಿನ್ನ ಮೆಟ್ಟಿ ನಿಲ್ಲುವರು ಕನ್ನಡ ಕನ್ನಡವೆಂದು ಎಲೈ ತಾಯೆ ಇಂಥ ಜೀವಿಗಳಿಗೆ ನೀಡು ಚೈತನ್ಯ ನಿನ್ನ ಗುಣಗಾನ ಮಾಡುವರು ಇವರೇ ಊರ ಮನೆಯವರು ಇವರ ಭಂಡತನದ ಬದುಕಿಗೆ ನೀಡು ಚೈತನ್ಯ ಅಂದು ನಿನ್ನ ರಕ್ಷಣೆಗಾಗಿ ಪ್...
ನಾನೆ ಗೋಪಿಕೆ ಬಾರೊ ಗೋಪನೆ ನೋಡು ಚಂದನ ಜಾರಿವೆ ಗುಡ್ಡ ಬೆಟ್ಟದ ಗಾನ ಹಕ್ಕಿಯ ಕಂಠ ಕೊರಗಿ ಸೊರಗಿದೆ ಮಳೆಯ ನೀರಿಗೆ ಹಸಿರು ಹಸಿದಿದೆ ಹನಿಯ ರೂಪದಿ ಚುಂಬಿಸು ಮಂದ ಗಾಳಿಯು ಸೋತು ನಿಂದಿದೆ ಗಂಧ ರೂಪದಿ ನಂಬಿಸು ನೋಡು ಕಡಲಿನ ಕನ್ಯೆ ಬಂದಳು ಗೆಜ್ಜೆ ಜಾ...
ಬೇವಾರ್‍ಸಿ! ನನ್ ಪುಟ್ನಂಜೀನ ರೂಪಾನ್ ಆಡ್ತಿನಿ ಬಾಪ್ಪ! ನಂಗ್ ಆಗಾಗ್ಗೆ ಆಡೀಸ್ತೈತೆ ನನ್ ಪುಟ್ನಂಜೀ ರೂಪ! ೧ ಆಲ್ನಲ್ ಕಮಲದ್ ಊ ತೇಲ್ಬುಟ್ಟಿ ಮೇಲ್ ಒಂದ್ ತೆಳ್ನೆ ಲೇಪ ಚಿನ್ನದ್ ನೀರ್‍ನಲ್ ಕೊಟ್ಟಂಗೈತೆ ನನ್ ಪುಟ್ನಂಜೀ ರೂಪ! ೨ ಅಮಾಸೇಲಿ ಅತ್ತೀಸ್...
ತನ್ನ ತಾನು ಗೆದ್ದವನೇ ನಮ್ಮ ಚೆಲುವ ಗೆದ್ದುದೆಲ್ಲವನೊದ್ದವನೇ ನಮ್ಮ ಚೆಲುವ ಬೆಟ್ಟದೆತ್ತರ ಬೆಳೆದವನೇ ನಮ್ಮ ಚೆಲುವ ದಿಗಂಬರವನುಟ್ಟವನೇ ನಮ್ಮ ಚೆಲುವ ಸೂರ್‍ಯನಿಗೆ ಪ್ರತಿಸೂರ್‍ಯನೇ ನಮ್ಮ ಚೆಲುವ ಚಂದ್ರನಿಗೆ ಪ್ರತಿಚಂದ್ರನೇ ನಮ್ಮ ಚೆಲುವ ಕಲ್ಲರಳಿ ಹ...
ಬುವಿಯ ಚಾಪೆಯ ತೆರದಿ ಸುತ್ತಿ ಹೊತ್ತೊಯ್ವಂತೆ ಕತ್ತಲೆಹಿರಣ್ಯಾಕ್ಷ ಮುತ್ತಿಬಹ ನಕ್ಷತ್ರ- ಮೊತ್ತಮಂ ಧಿಕ್ಕರಿಸಿ ಬರುತಿಹನು ಗೆಲವಾಗಿ ದಿವಕಶಾಂತಿಯ ತಂದು. ಹೊಸರಾಜ್ಯವಾಯ್ತಿಂದು ಇದರ ಸತ್ಯವೆ ಬೇರೆ, ಶಾಸನವೆ ಬೇರೆ. ರವಿ ತೋರಿದಾ ಜಗದ ಮಾಯೆ ತೀರಿತು....













