
ನಿದ್ದೆಯೊಳಿದ್ದೆನೊ ಎಚ್ಚರವಿದ್ದೆನೊ ನನಸೋ ಕನಸೋ ಎಂತರಿವೆ? ವರುಷವೆ ತುಂಬದ ಕೂಸಾಗಿರೆ ನಾ ಎನಗಿದ್ದಿತು ಹಿರಿಯನ ಪರಿವೆ. ಎಳೆಯನ ಮುದ್ದಿಡುತಿದ್ದಳು ತಾಯಿ ತುಟಿಗಿಳಿಯುತ್ತಿರೆ ಕಣ್ಣೀರು. ತುಟಿಜೇನಿನ ಸಿಹಿಗುಪ್ಪಿನ ರುಚಿ ಬರೆ ಆ ರುಚಿಯನು ಬಣ್ಣಿಪ...
ಕತ್ತಲೆ ರಾತ್ರಿ ಘನಘೋರ ಕಡುರಾತ್ರಿ ದಶ ದಿಕ್ಕುಗಳೆಲ್ಲ ಕಪ್ಪು ಹಚ್ಚಡ ಹೊದ್ದು ಮೌನದ ಮಂಜುಗಡ್ಡೆ ಕರಗಿ ಹನಿಹನಿಯಾಗಿ ಒಂದೊಂದಾಗಿ ತೊಟ್ಟಿಕ್ಕಿ ಹೆಪ್ಪುಗಟ್ಟಿದ ಕಪ್ಪು ಕರಾಳತೆಯನು ಘನೀಕರಿಸಿ ಪಟಪಟನೆ ಬೀಳುವ ಮಳೆ ಹನಿಗಳ ಶಬ್ದ ಸಮುದ್ರ ತೀರದ ಅಲೆಗಳ...
ಕೋಗಿಲೆ ಕೊರಗುತಿದೆ ನವಿಲು ಮರುಗುತಿದೆ ಕನ್ನಡ ನಾಡಲ್ಲಿ ಸಿರಿ ಗಂಧದ ಬೀಡಲ್ಲ ಜಿಂಕೆ ಓಡದಿದೆ ಹಕ್ಕಿ ಹಾರದಿದೆ ಕನ್ನಡ ಬಾನಲ್ಲಿ ! ತಿಳಿ ಗನ್ನಡ ನೀಲಿಯಲಿ ಸಹ್ಯಾದ್ರಿಯ ಹಸಿರು ಕಳಕೊಂಡಿದೆ ಉಸಿರು ನಂದನ ವನದಲ್ಲಿ ! ಚೆಲುವ ಕನ್ನಡ ನೆಲದಲ್ಲಿ ಗೊಮ್ಮ...
ಗಗನ ಹಕ್ಕಿಯು ಗಾನ ತುಂಬಿತು ಪ್ರೇಮ ಪರ್‍ವತ ನಗಿಸಿತು ಮುಗಿಲು ಹನಿಹನಿ ಗಂಧ ತೂರಿತು ಪ್ರೀತಿ ಗಮಗಮ ಹರಡಿತು ಬೀಜ ಒಡೆಯಿತು. ಚಿಗುರು ಚಿಮ್ಮಿತು ಮೊದಲ ಚುಂಬನ ನೀಡಿತು ರಸದ ಮಾವಿನ ಮಧುರ ಸೋನೆಯು ತುಟಿಯ ಮೇಲಕೆ ಇಳಿಯಿತು ಗುಡ್ಡ ಆಡಿತು ಬೆಟ್ಟ ಚಾಚಿ...
ಮೂಗ ಆದಂಗ್ ಆಗ್ತೀನ್ ನಾನು ನನ್ ಪುಟ್ನಂಜಿ ನಕ್ರೆ! ಆಡಬೇಕಂದ್ರೆ ಮಾತೇ ಸಿಕ್ದು ಉಕ್ ಬರ್‍ತಿದ್ರೆ ಅಕ್ರೆ- ನನ್ ಪುಟ್ನಂಜಿ ನಕ್ರೆ! ೧ ಲಕ್ಕಂತ್ ಮತ್ತ್ ನಂಗ್ ಅತ್ಕೋಂತೈತೆ ನನ್ ಪುಟ್ನಂಜಿ ನಕ್ರೆ! ಝಮ್ಮಂತ್ ಇಗ್ತ ಪದವಾಡ್ತೀನಿ ಆ ಮತ್ತ್ ನನಗಾಗ್ ಮ...
ಮೈತಳೆದ ಕರುಣೆ ಮೈಮರೆತು ಕುಳಿತಿದೆ ನೋಡು ಯೋಚನೆಯ ಯೋಜನೆಯ ಕುರಿತು ಬೆರೆತು. ಜಗದ ಉದ್ಧಾರಕ್ಕೆ ಜಗಕೆ ಅವತರಿಸಿಹುದು ನೊಗ ಹೊತ್ತ ರೀತಿಯಿದು ಜಗಕೆ ಹೊರತು. ಇದುವೆ ಮುಕ್ತಾಸನವೊ? ಏನು ಯುಕ್ತಾಸನವೊ? ಕೂಡಿಹವು ಚಿಂತೆ ಚಿಂತನಗಳಿಲ್ಲಿ ಎಡಗೈಯ ಭಾರವನು...
ಇಷ್ಟೊಂದು ದೇವರ ಎಷ್ಟೊಂದು ದೇವರ ಎಲ್ಲೆಲ್ಲಿ ನೋಡಿದರು ದೇವರೆ ದೇವರ ಇಷ್ಟೊಂದು ದೇವರಲಿ ನಿನಗಾರು ದೇವರ ನಿನಗ್ಯಾಕೆ ದೇವರ ನೀನೇ ದೇವರ ಯಜಮಾನ ದೇವರ ಧಣಿಗಳು ದೇವರ ಜನನಾಯಕರು ದೇವರ ಢಣನಾಯಕರು ದೇವರ ಅಂಬಾರಿ ದೇವರ ಜಂಬೂಸವಾರಿ ದೇವರ ಪೂಜೆಯ ದೇವರ ...













