ಅಂತರಾತ್ಮನೆ ಆತ್ಮ ದೀಪನೆ
ಪಕ್ಷಿಯಾಗುತ ಹಾರಿ ಬಾ
ಹಸಿರು ನೋಡುತ ಹೂವು ನೋಡುತ
ಮುಗಿಲ ತೋಟಕೆ ಇಳಿದು ಬಾ
ನೀನೆ ಚಿನ್ಮಯ ನೀನೆ ಚೇತನ
ವಿಶ್ವ ಚಲುವಿನ ಚಿಂತನಾ
ಜಗದ ತಂದೆಗೆ ಯುಗದ ತಂದೆಗೆ
ನೀನೆ ಶಕ್ತಿಯ ತೋರಣಾ
ಜಡವು ಏತಕೆ ಜಾಢ್ಯವೇತಕೆ
ಜಡದ ಕೊಡವನು ಒಡೆದು ಬಾ
ಬೀಜದಲ್ಲಿಯ ಮೊಳಕೆಯಂತೆ
ಪ್ರೀತಿ ಅಂಕುರ ಚಿಮ್ಮಿ ಬಾ
ಪಕ್ಕ ಬೀಸಿ ಮುಗಿಲು ಈಸಿ
ವಿಶ್ವ ತಂದೆಯ ಬಳಿಗೆ ಬಾ
ನೂರು ಕೋಟಿ ದುಃಖಿಯಾತ್ಮರ
ಕಣ್ಣ ನೀರನು ತಣಿಸು ಬಾ
*****