
ಉಂಡುಂಡು ಮಲಗೋ ನಂಜುಂಡ ಅಯ್ಯ ಚಿತ್ರಾನ್ನ ಮೊಸರನ್ನ ಪರಮಾನ್ನ ತಂದೇವೊ ಹಾಲನ್ನ ಪಾಯಸ ಮೃಷ್ಟಾನ್ನ ತಂದೇವೊ ಉಂಡುಂಡು ಮಲಗಯ್ಯ ನಂಜುಂಡ ಅಯ್ಯ ನೀ ದುಂಡಾಗೆ ಮಲಗೊ ತಿಂದು ಮಲಗೋ ನಂಜುಂಡ ಅಯ್ಯ ಒಗ್ಗರಣೆ ಅವಲಕ್ಕಿ ಕಲಸಿದ ಮಂಡಕ್ಕಿ ಎಳ್ಳುಂಡೆ ಗುಳ್ಳುಂಡ...
ಸತ್ಯವೆ ಗೆಲ್ಲುವುದು ಅನೃತವು ಅಲ್ತು ಇದು ಭವಿಷ್ಯತ್ತು. ಗೆದ್ದುದೆ ಸತ್ಯ ಸೋತುದೆ ಮಿಥ್ಯ ಭೂತದ ರೀತ್ಯಾ. ವರ್ತಮಾನದೊಳೊ?- ಸಂಗ್ರಾಮವೆ ಸತ್ಯ ಶಾಂತಿಯೆ ಮಿಥ್ಯ ಮಿಗಿಲೆನೆ ಇದರಿತ್ಯರ್ಥಕೆ ಸಮರವೆ ಮುಖ್ಯ ಶಾಂತಿಯಸಹ್ಯ. ಸಂಗ್ರಾಮದೊಳೇ ಸತ್ಯದ ಸುಳಿವು...
ಅವರು ಹೆತ್ತು ಹೆತ್ತು ನಲುಗಿದ ಹೆಣ್ಣುಗಳು ದುಡಿದು ದುಡಿದು ಸವೆದು ಹೋದ ದೇಹಗಳು ಸಹಿಸಿ ಸಹಿಸಿ ಸುಣ್ಣವಾದ ಅವರ ಮನಸುಗಳು ಸುತ್ತಲೂ ಎತ್ತರೆತ್ತರದ ಪಹರೆ ಗೋಡೆಗಳು ಉಸಿರುಗಟ್ಟಿಸುವ ನಿಯಮಗಳು ನಡುವೆ ಸಮಾಧಿಯಾದ ಬದುಕು. ಗೋಡೆಯಾಚೆ ತೂಗುತ್ತಿದೆ ನೋಡ...
ಭಾರತವನುಳಿಯುತ್ತ ನನಗೆ ಜೀವನವೆತ್ತ? ಭಾರತವೆ ನನ್ನುಸಿರು, ನನ್ನೊಗೆದ ಬಸಿರು. ಭಾರತವೆ ಧನಧಾನ್ಯ, ಭಾರತವೆ ಮನೆಮಾನ್ಯ, ಭಾರತವೆ ದೇವಾರವೆನ್ನ ಸಂಸಾರ. ಭಾರತದ ನೆಲಹೊಲವು ಸುರಭಿಯಿಳಿಕೆಚ್ಚಲವು, ಭಾರತದ ತಿಳಿಜಳವು ಸೊದೆಯ ಸವಿ ಸೆಳವು, ಭಾರತದ ಶ್ಯಾಮ...
ಕಣ್ಣೆದುರೇ ಕಣ್ ಮರೆಯಾಗುತಿದೆ ಮಾತು ಕಲಿಸಿದ ಕನ್ನಡವು ನಿಂತ ನೆಲವು ಪರದೇಶಿಯಾಗುತಿದೆ ಜನ್ಮ ಕೊಟ್ಟು ಕರ್ನಾಟಕವು || ಪಲ್ಲವಿ || ಇಲ್ಲೆ ಹುಟ್ಟಿ ನದಿಯಾಗಿ ಹರಿದ ನಮ ಕಾವೇರಮ್ಮ ಮುನಿದಿಹಳು ಕನ್ನಡಿಗರ ಅಭಿಮಾನ ಶೂನ್ಯಕೆ ಅನ್ಯರ ಮನೆಯನು ಸೇರಿಹಳು ...
ನುಡಿಯೊಳಗಣಾ ನಿನ್ನ ನುಡಿಯಲಿ ಕನ್ನಡತನವು ನಲಿವಾಗಿರಲಿ ಸದಾ ನಡೆಯೊಳಗಣಾ ನಿನ್ನ ನಡೆಯಲಿ ಕನ್ನಡತನವು ಹಸಿರುಸಿರಾಗಿರಲಿ ಸದಾ ನೀ ಹುಟ್ಟಿದ ಈ ಮಣ್ಣಿನ ಕಣ್ಣಾಗಿ ಜನುಮ ಜನುಮಕೂ ನಿನ್ನ ಕೀರ್ತಿ ಬೆಳಗಲಿ ಹಣತೆಯಾಗಿ ಸದಾ ದುರಭಿಮಾನದ ಕೊಳೆಯ ತೊಳೆದೊಗೆದ...
ಎಂಥಾ ಸುಂದರ ಭಸ್ಮಾ ಥಳಥಳ ಥಳಥಳ ಭಸ್ಮಸ್ನಾನವ ಮಾಡಿದೆ ಬೂದಿ ಭಸ್ಮವ ಬಿಟ್ಟೆ ಜ್ಯೋತಿ ಭಸ್ಮವ ಹಿಡಿದೆ ಭಸ್ಮ ಸ್ನಾನವ ಮಾಡಿದೆ ಬೆಳಕು ತುಂಬಿದ ಭಸ್ಮ ಥಳಕು ಚಿಮ್ಮಿದ ಭಸ್ಮ ಜ್ಯೋತಿ ಸ್ನಾನವ ಮಾಡಿದೆ ಚಿದ್ಲಿಂಗ ಶಿವಯೋಗಿ ಲಕಲಕ ಹೊಳಿದಂತ ಜ್ಯೋತಿ ಸ್ನಾ...
ಮಡಿಕೇರೀಲಿ ರತ್ನ ಕಂಡಾ ವೊಸಾ ಮತ್ನ. ೧ ‘ಮಡಿಕೇರೀಲಿ ಮಡಿಕೆ ಯೆಂಡ ಯೀರ್ದಿದ್ರ್ ಅಲ್ಲೀಗ್ ವೋದ್ದೂ ದಂಡ’ ಅಂದಿ ರತ್ನ ಪಡಕಾನೇಗೆ ವೊಂಟಿ, ಬೆಟ್ಟದ ನೆತ್ತಿ ಮೇಗೆ ವೋಯ್ತಿದ್ದಂಗೆ ನಿಂತ! ಕಲ್ಲಾದಂಗೆ ಕುಂತ! ೨ ಸುತ್ತ ಸಾಯೋ ಬಿಸಿಲಿನ್ ಚಾಪೆ! ಅಲ್ಲಲ್...













