ಉಂಡುಂಡು ಮಲಗೋ ನಂಜುಂಡ ಅಯ್ಯ

ಉಂಡುಂಡು ಮಲಗೋ ನಂಜುಂಡ ಅಯ್ಯ
ಚಿತ್ರಾನ್ನ ಮೊಸರನ್ನ ಪರಮಾನ್ನ ತಂದೇವೊ
ಹಾಲನ್ನ ಪಾಯಸ ಮೃಷ್ಟಾನ್ನ ತಂದೇವೊ
ಉಂಡುಂಡು ಮಲಗಯ್ಯ ನಂಜುಂಡ ಅಯ್ಯ
ನೀ ದುಂಡಾಗೆ ಮಲಗೊ

ತಿಂದು ಮಲಗೋ ನಂಜುಂಡ ಅಯ್ಯ
ಒಗ್ಗರಣೆ ಅವಲಕ್ಕಿ ಕಲಸಿದ ಮಂಡಕ್ಕಿ
ಎಳ್ಳುಂಡೆ ಗುಳ್ಳುಂಡೆ ಹಂಡೇಲಿ ತಂದೇವೊ
ತಿಂದು ಮಲಗಯ್ಯ ನಂಜುಂಡ ಅಯ್ಯ
ನೀ ಚಂದಾಗೆ ಮಲಗೊ

ಹೊದ್ದು ಮಲಗೋ ನಂಜುಂಡ ಅಯ್ಯ
ಚಡ್ಡರ ತಂದೇವೊ ಕೌದಿ ತಂದೇವೊ
ಕೊಲ್ಲಾಪುರದಿಂದ ಕಂಬಳಿ ತಂದೇವೊ
ಯಲ್ಲಾಪುರದಿಂದ ಮಖಮಲ್ಲು ತಂದೇವೊ
ಹೊದ್ದು ಮಲಗಯ್ಯ ನಂಜುಂಡ ಅಯ್ಯ
ನೀ ಮುದ್ದಾಗೆ ಮಲಗೊ

ಆಲಿಸಿ ಮಲಗೋ ನಂಜುಂಡ ಅಯ್ಯ
ವಾಲಗ ತಂದೇವೊ ವಾದ್ಯ ತಂದೇವೊ
ಹಲಗೆ ಜಾಗಟೆ ಶಂಖ ತಂದೇವೊ
ಆಲಿಸಿ ಮಲಗಯ್ಯ ನಂಜುಂಡ ಅಯ್ಯ
ನೀ ಲಾಲಿಸಿ ಮಲಗೊ

ಮುಂಗೋಳಿ ಕೂಗೀತು
ಪಲ್ಲಕಿ ಬಂದೀತು
ಜಳಕಕ್ಕೆ ಸ್ವಾಮಿ ನಿನ್ನ ಒಯ್ದೇವೊ
ಜಳಕ ಮಾಡಿಸಿ ತಂದೇವೊ ಸ್ವಾಮೀ ನಿನ್ನ
ಮಲ್ಲಿಗೆ ಹರಡಿ ಹಾದಿಯಲಿ

ಮಲಗೊ ಚೆನ್ನಿಗರಾಯ
ಮಲಗೋ ಕನಸಿಗರಾಯ
ಮೆಲ್ಲನೆ ನಿದ್ದೆಗೆ ತೆರಳೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುದ್ಧಸಮರ್ಥನ ವಾದ
Next post ಉಮರನ ಒಸಗೆ – ೪೬

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…