Home / ಕವನ / ಕವಿತೆ

ಕವಿತೆ

ಬಣ್ಣ ಬಣ್ಣದ ಹೂಗಳು, ಗಾಜಿನ ಚೂರುಗಳು ಚಿತ್ತಾರದ ಗರಿಗಳು ತರಾವರಿ ಬೆಣಚುಕಲ್ಲು, ಸಿಂಪಿ ಕವಡಿಗಳ ತಂದು ಸಂಭ್ರಮಿಸುವ- ಮುಂಜಾವಿನ ಮಂಜು ಮುಸ್ಸಂಜೆಯ ಕೆಂಪು ಪ್ರೀತಿಸುವ- ಆಕಾಶದಂಗಳದೊಳು ಹಾರಾಡಿ ಏನೆಲ್ಲಾ ಬಾಚಿ ತಬ್ಬಿಕೊಳ್ಳುವ ಕನಸುಗಳಿಗೆ ಕಾವೂಡಿ...

ಮನೆಗೆ ಹಿರೀಮಗ ಹೊಸಿಲು ಎರಡೂ ಒಂದೇ ಬೊಟ್ಟು ಬಳಿದುಕೊಂಡರೂ ಎಡವುವವರು, ತುಳಿಯುವವರು, ದಾಟುವವರು ಇದ್ದದ್ದೇ ಮನೆಯ ಕಾಯುವ ಭಾರ ಹೊಸಿಲಿಗೂ ಹಿರಿ ಮಗನಿಗೂ ಸಮನಾಗಿ ಹಂಚಿಕೆಯಾಗಿದೆ ಆಕಳಿಸಿದರೆ ತಲಬಾಗಿಲ ಮೇಲೆ ಹಲ್ಲಿ ಲೊಚಗುಟ್ಟಿ ಎಚ್ಚರಿಸುತ್ತದೆ ಭೂ...

ನಿನ್ನೊಳಗೇ ಇದೆ ಬಾನು ನಿನ್ನಲ್ಲೇ ಇದೆ ಕಾನು ಉರಿಯುವ ಹಗಲು ಸುರಿಯುವ ಮುಗಿಲು ಎಲ್ಲಕು ತವರೇ ನೀನು ನೀನಲ್ಲ ಬರಿ ದೇಹ, ದೇಹಕೆ ಹುಟ್ಟುವ ದಾಹ ನೀರಿಗೆ ನಾರಿಗೆ ಸಲ್ಲದ ದಾರಿಗೆ ಸೂರೆಹೋಗುವ ಮೋಹ ವಿಶ್ವದ ಕಾರಣಭಾವ ಆಯಿತೊ ಸೃಷ್ಟಿಯ ದೇವ ಅದರೊಳು ಮೂಡ...

ಅಳುವವರನು ನಗಿಸಿ ಮೂಕರನು ಮಾತನಾಡಿಸಿ ಜಗಳಾಡಿದವರನು ಒಂದುಗೂಡಿಸಿ ಹಿರಿಯ ಕಿರಿಯರನ್ನೆಲ್ಲಾ ಆಹ್ವಾನಿಸುತ ಅವರವರ ಬಯಕೆಗೆ ಅರ್ಥಪೂರ್ಣವಾಗಿ ಬಲಿಯಾಗುವ ನಾನು – *****...

ಉತ್ತು ಹೊಡೆಮರಳಿದ ಮಣ್ಣಿಗೆ ಹೆಣ್ಣಿನ ಮುಖ ಬೆಳೆದ ಪೈರಿನ ಬಯಲಿಗೆ ಬಸುರಿಯ ಮುಖ ಗ್ರೀಷ್ಮದಲ್ಲಿ ಭೂಮಿಗೆ ವೃದ್ಧೆಯ ಮುಖ ಮಳೆ ಬಂದ ಪ್ರಕೃತಿಗೆ ಮತ್ತೆ ಹುಟ್ಟಿದ ಸುಖ ಕಾಣಿಸಿತಲ್ಲ ಇದೆಲ್ಲ ಒಮ್ಮೊಮ್ಮೆ ನೇರ ಒಮ್ಮೊಮ್ಮೆ ಊರ ಕೆರೆಯಲ್ಲಿ ಬಿದ್ದು ಕೆರೆ...

ಕಲ್ಲು ಕರಗುವಂಥ ಮನಸು ನನ್ನದಿರಲೊ ದೇವ ಸಲ್ಲುತಿರಲಿ ನಿನಗೆ ಎನ್ನ ಮೂಢಬಕುತಿ ಭಾವ ಕುಸುಮದಂತೆ ಅರಳಿ ನಾನು ನಕ್ಕುನಲಿಯಬೇಕು ಭೃಂಗದಂತೆ ನಿನ್ನಸುತ್ತಿ ಮಧುವ ಸವಿಯಬೇಕು ತುಂಬಿ ಹರಿವ ಗಂಗೆಯಂತೆ ಘನವು ಮೂಡಬೇಕು ಅಂಬಿಗ ತಾ ಸಾಗುವಂತೆ ಮನವು ತೇಲಬೇಕು...

ಬೇರೆ ದೈವ ಯಾಕೆ ಬೇಕು ತಾಯಿ ಈಕೆ ಸಾಲದೆ? ಎಲ್ಲ ತೀರ್ಥ ಕೂಡಿ ನಿಂತ ಸಾಗರವೆನೆ ಆಗದೆ? ಲಕ್ಷ ಚಿಕ್ಕ ಹಕ್ಕಿ ಯಾಕೆ ಗರಿತೂಗುವ ನವಿಲಿದೆ ಯಾ ಹೂವಿಗೆ ಹೋಲಿಕೆ ಕಂಪಾಡುವ ಮಲ್ಲಿಗೆ? ಕವಿತೆಯಲ್ಲಿ ಹುಟ್ಟಿ ಬೆಳೆದು ಕಥೆಯ ದಾಟಿ ಬಂದಳು ವ್ಯಥೆಯ ಸೋಸಿ ದೇವ...

ನಿಮ್ಮ ಅಪ್ಪ ಅಮ್ಮ ಯಾಕಾಗಿ ಎಲ್ಲಾ ಬಿಟ್ಟು ನಿಮಗೆ ಈ ಹೆಸರನಿಟ್ಟರೋ ನಮಗೆ ಗೊತ್ತಿಲ್ಲ ಕಾರಣ ಆದರೆ ಲಂಕೇಶನೆಂದ ಮಾತ್ರಕ್ಕೆ ಆಗಲೇಬೇಕಿರಲಿಲ್ಲ ನೀವು ರಾವಣ ಆಗಲೂಬಹುದಿತ್ತಲ್ಲ ವಿಭೀಷಣ ನೀವು ವಿಭೀಷಣನಾಗದಿದ್ದರೇನಂತೆ ಬಿಡಿ, ಅವನಂತೆ ಚಿರಾಯುವಾಗಿದ್...

ಹದ್ದು ಹಾರಾಡುತಿವೆ ದೇಶಾಕಾಶದ ಮೇಲೆ ನಿದ್ದೆ ಮಾಡುತಿವೆ ಹೆಣಗಳು ಈ ನೆಲದ ಮೇಲೆ ರಾಮಬಾಣಗಳು ಬಡಿಗೆ ಸಲಾಕಿಗಳಾಗಿವೆ ಮಂದಿರಗಳಲ್ಲಿ ಮಾರಣಹೋಮ ನಡೆದಿದೆ ವಿದ್ಯಾಮಂದಿರಗಳಲ್ಲಿ ಕೊಲ್ಲುವ ವಿದ್ಯಾಪಠಣ ಜಗದೊಡೆಯ ಯಾವುದೋ ಸಂದಿಯಲ್ಲಿ ಕುಳಿತುಕೊಂಡು ಬೇರೆ...

ಮನೆಯ ಮಾಳಿಗೆಯ ಮೇಲೆ- ತೋಟ ಗದ್ದೆಗಳಲಿ- ಎತ್ತರೆತ್ತರ ಕಟ್ಟಡಗಳ ಸಂದುಗೊಂದುಗಳೊಳಗಿಂದ ಮರಳ ಮೇಲೆ ಓಡಾಡುವ ಸಮುದ್ರ ಹಡಗಿನ ಡೆಕ್ ಮೇಲೆ ಗಕ್ಕನೆ ನಿಂತು ಮಕ್ಕಳಿಂದ ಮುದುಕರೂ ನನ್ನ ಪಯಣದ ವಿಮಾನ ನೋಡಿ ಕೈ ಬೀಸುತ್ತಿರಲೇಬೇಕು ನಾನೂ ಒಂದೊಮ್ಮೆ ಬೀಸುತ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....