ನಿಮ್ಮ ಅಪ್ಪ ಅಮ್ಮ ಯಾಕಾಗಿ
ಎಲ್ಲಾ ಬಿಟ್ಟು ನಿಮಗೆ ಈ ಹೆಸರನಿಟ್ಟರೋ
ನಮಗೆ ಗೊತ್ತಿಲ್ಲ ಕಾರಣ
ಆದರೆ ಲಂಕೇಶನೆಂದ ಮಾತ್ರಕ್ಕೆ
ಆಗಲೇಬೇಕಿರಲಿಲ್ಲ ನೀವು ರಾವಣ
ಆಗಲೂಬಹುದಿತ್ತಲ್ಲ ವಿಭೀಷಣ
ನೀವು ವಿಭೀಷಣನಾಗದಿದ್ದರೇನಂತೆ ಬಿಡಿ, ಅವನಂತೆ
ಚಿರಾಯುವಾಗಿದ್ದಾವೆ ನೀವು ಬರೆದ ಅಕ್ಕ, ಅವ್ವ, ಪತ್ರಿಕೆಯಲ್ಲಿನ
ನಿಮ್ಮ ಅನೇಕಾನೇಕ ಅಂಕಣ.
*****