
ಆರದಿರಲಿ ಆಸೆ ಉರಿಗೆ ಬೀಳದಿರಲಿ ಕನಸು, ನೋಯದಿರಲಿ ಭಾರ ಹೊತ್ತ ಬಡವರ ಹೂಮನಸು. ಯಾರ ಅನ್ನ ಎಲ್ಲೋ ಬೆಳೆವ ರೈತನ ಬಲದಾನ ಯಾರ ಭಾರ ಏಕೋ ಹೊರುವ ಕೂಲಿಯವನ ಮಾನ ಬೀದಿ ಗುಡಿಸಿ ಕೊಳೆನೆಲದಲಿ ಮಲಗುವವನ ನೇಮ ಕಾಯುತ್ತಿವೆ ನಮ್ಮ, ಅವರೆ ಈ ನಾಡಿನ ಪ್ರಾಣ ಗು...
ಕೇಳಿದ್ದೆವು ಗಗನಸಖಿಯರೆಂದಷ್ಟೆ ಯಾವ ಮಾಯಾಲೋಕದವರಿವರು- ತೆಳ್ಳನೆಯ ದೇಹ ಗುಲಾಬಿ ಬಣ್ಣ ಮೈಗೊತ್ತಿದ ಸೀರೆ ಎತ್ತಿಕಟ್ಟಿದ ಕೂದಲು ತಿಳಿನಗೆ ಹೊಳಪು ಕಣ್ಣು ತುದಿಗಾಲಲಿ ನಡೆವ ನವಿಲೆಯರು ಬೆಡಗು ಬಿನ್ನಾಣಗಿತ್ತಿಯರು ಮೆಲ್ಲಗೆ ಕೈ ಮುಗಿದು ಸ್ವಾಗತಿಸಿ ...
ಹೊಳೆಯ ಆ ದಂಡೆಯಲಿ ಸುಂದರ ಜನ ಕಣ್ಣ ಕುಕ್ಕುತ್ತಾರೆ ತುಂಬಿ ಹರಿವ ಹೊಳೆ ಸಿಹಿ ನೀರು ಅವರ ಹೊಲಗದ್ದೆಗಳಿಗೆ ಅಲ್ಲಿ ಮೀಯುವ ಮೀನು ಅವರ ಗಂಗಾಳಕೆ ಆ ಹಸಿರು ಕಾಡು ಅಲ್ಲಿ ಜಿಗಿದಾಡುವ ಜಿಂಕೆ ಕುಣಿವ ನವಿಲು ಉಲಿವ ಹಕ್ಕಿಗಳು ಅವರ ಸಂತೋಷಕೆ ಕಣ್ಣು ಕುಕ್ಕ...
ಹರಿಯುವ ಹೊಳೆಗೂ ಸುರಿಯುವ ಮಳೆಗೂ ಏನೇನಿದೆಯೋ ಸಂಬಂಧ! ಬೆಳಕಿನ ಹನಿಗೂ ಹಕ್ಕಿಯ ದನಿಗೂ ಇಲ್ಲವೆ ಹೇಳಿ ಒಳಬಂಧ? ನಾರುವ ಕಸಕೂ, ಹೂ ಪರಿಮಳಕೂ ಇದ್ದೇ ಇದೆ ಬಿಡಿ ಮಾತುಕಥೆ; ಹಣ್ಣಿನ ಒಳಗೇ ಬೀಜವಿಡಲು ಮರ ಉಪಾಯವಲ್ಲದೆ ಇದ್ದೀತೇ? ಕುಡಿಯಲು ಬಾರದ ಕಡಲಿನ ...
ದೇವಲೋಕದ ಹೂವು ಭೂಲೋಕಕಿಳಿದಂತೆ ಭಾವವೆನ್ನೊಳಗೆ ಬಂತು ಸಾವಿಗಂಜಲು ಬೇಡ ಪರರಿಗಳುಕಲು ಬೇಡ ನೋವುಂಟೆ ಬಕುತರಿಗೆ? ಹಸುಳೆ ಕೇಳೆಂದು ಸಾಲು ದೀವಿಗೆಯಂತೆ ತಾರೆ ನೆಲಕಿಳಿದಂತೆ ಪೊಳೆವ ಮಾಣಿಕ್ಯದಂತೆ ಕೋಲು ಮಿಂಚೊಡೆದಂತೆ ಫಕ್ಕನೇ ನಕ್ಕಂತೆ ಬೆಳಕು ನೋಡೆಲ...
ಸದಾ ಕಿಚಿಪಿಚಿಗುಡುವ ಗೊಂದಲದ ಗುಬ್ಬಿ ಗೂಡು ಕೇಳುವುದಿಲ್ಲ ಒಂದಾದರೂ ಸುಮಧುರ ಹಾಡು ಬಿಡುವಿಲ್ಲದೇ ತುಯ್ಯುವ ಒಂದು ವೀಣೆ ನಿರಂತರ ಕಾಡುವುದೇಕೋ ಕಾಣೆ! ಮಧ್ಯಂತರದಲಿ ನಿಂತ ನಾನು-ನನ್ನಂತವರು ದವಡೆಯ ಕೊನೆಯ ಹಲ್ಲುಗಳನ್ನು ಅರ್ಧವಷ್ಟೇ ಕಂಡವರು. ಹಳತು...
ಭಾರತ ದೇಶದ ಸ್ವಾತಂತ್ರ್ಯೋತ್ಸವದ ಸುವರ್ಣ ಹಬ್ಬವ ಮಾಡೋಣ ಬನ್ನಿರಿ ಗೆಳೆಯರೆ ದೇಶ ಬಾಂಧವರೆ ಸ್ವಾತಂತ್ರ್ಯವ ಕೊಂಡಾಡೋಣ ತಿಲಕ್ ಗೋಖಲೆ ಮಹಾತ್ಮ ಗಾಂಧಿ ಸುಭಾಷ್ ವಲ್ಲಭ ಜವಾಹರ ಸಾವಿರ ಸಾವಿರ ದೇಶಭಕ್ತ ಜನ ಹೋರಾಡುತ ಗಳಿಸಿದಾ ವರ ಎಷ್ಟೋ ಜನ ಪ್ರಾಣಗಳನ...













