Home / ಕವನ / ಕವಿತೆ

ಕವಿತೆ

ಓ ಪಿತೃದೇವರುಗಳೇ ಅರ್ಪಿಸುವೆವು ನಿಮಗೆ ನಮ್ಮಯಾ ನಮನ| ಸ್ವೀಕರಿಸಿ ಹರಸಿರೆಮ್ಮನಿಂದು ಈ ಪುಣ್ಯದಿನ|| ವರುಷಕ್ಕೊಮ್ಮೆ ಬರುವ ಈ ಸುದಿನ ಮೀಸಲಿಡುವೆವು ನಿಮಗಾಗಿ ನಮ್ಮಯಾ ತನುಮನ| ನೀಡುವೆವು ಸದಾನಿಮ್ಮ ನೆನಪಲಿ ಬದುಕುವವೆಂದು ವಚನ|| ನಿಮ್ಮ ಸಂತೃಪ್ತಿ...

ಕತ್ತಲಿಗೆ ಕತ್ತರಿ ಬಿದ್ದು ಇಷ್ಟಿಷ್ಟೇ ಹರಿದು ಚಿಗುರೊಡೆದ ಮರದಲ್ಲಿ ಚಿಲಿಪಿಲಿ; ಒಂದಕ್ಕೊಂದು ಸೇರಿ ಅಸ್ಪಷ್ಟ ಗದ್ದಲ: ಕಣ್ಣ ತೆರೆಯುವ ತುರಿಕೆ; ಮನೆಯ ಒಳಹೊರಗೆಲ್ಲ ಬಳೆ ಸದ್ದು ಪೊರಕೆ. ಮನದ ಮೂಲದಲ್ಲಿ ಬೇರಿಳಿದ ಮರ ಗೀರಿದರೆ ಚಿಲ್ಲೆನ್ನುವ ರಸ; ...

ಹೋಗೋಣ ಬಾರೆ ಸಖೀ ತೀರಕೆ ಕಲಕಲ ಹರಿಯುವ ನದಿಯಾ ತೀರಕೆ || ಪ|| ಮಧುರ ರಸಾಮೃತ ನಾದವ ಹರಿಸುತ ಮೋಹನ ಮುರಳೀ ಲೋಲನು ಇರುವ ಹಸಿರೆಳೆ ಹುಲ್ಲನು ಮೇಯದೆ ಆಲಿಸಿ ಗೋವುಗಳೆಲ್ಲಾ ನಿಂತಿಹ ತೀರಕೆ || ೧ || ತಳಿರಿನ ಸೊಗಸಿನ ಹಾಸಿಗೆ ಹಾಸಿ ವಿಧ ವಿಧ ಹೂಗಳ ಮಾ...

ಬಂದು ಹೋಗುವರೆ ಇಂತು ಪ್ರತಿದಿನವು ಹೇಳೆ ಎದೆಯ ಗೆಳತಿ ಹೋಗಿ ಮುಟ್ಟಿಸುವೆಯೇನೆ ಈ ವೇಣಿ ಪುಷ್ಪವನ್ನು ಗೆಳತಿ ? ಯಾರು ಕೊಟ್ಟರಿದ ಯಾವ ಮಧುವನದ ಪುಷ್ಪವೆಂದು ಕೇಳೆ ಹೇಳದಿರು ಮತ್ತೆ ಬೇರೆ ಏನನ್ನು ಕೇಳರೆನ್ನ ಆಣೆ ವೃಕ್ಷದಡಿಯಲ್ಲಿ ಧೂಳ ಹಾಸಿನಲಿ ಕುಳ...

ಕೀಟ್ಸ್ ಹೇಳಿದ್ದು ಸರಿ ಒದರಿತು ಕೈಲಿದ್ದ ಪುಸ್ತಕದ ಗರಿ ಕವಿತೆಯ ಹಾಳೆಗಳು ಕೈ ಬದಲಾಗುತ್ತಿದ್ದವು ಮೊದಮೊದಲು ಅಭಿಪ್ರಾಯ ಚರ್ಚೆ ಸಲಹೆ ತಿದ್ದು ಎಲ್ಲ ಕೇಳುತ್ತಿತ್ತು ಕವಿತೆಯ ಸಾಲು, ಈಗ ಕಣ್ಣು ಮುಚ್ಚಿ ಕುಳಿತಿದೆ ಸಿದ್ಧ ಮಾದರಿ ಸ್ವಯಂಭೂ ನಾನು ಆವ...

ಅಲ್ಲಿದೆ ನನ್ನ ಮನೆ(ಸ್ಮಶಾನ) ಇಲ್ಲಿ ಬಂದಿರುವೆ ಸುಮ್ಮನೆ ನನ್ನ ಮನೆಗೆ ಸಾಗಲು ಇರುವವು ಕಾಣದ ಹಲವು ಮೈಲುಗಲ್ಲುಗಳು ನಾನು ಸಾಗಿ ಬಂದಿರುವೆ ಈವರೆಗೆ ಕೆಲವು ಅನುಭವದ ಮೈಲುಗಳನ್ನು ಮತ್ತಷ್ಟು ಹೊಸ ಮೈಲಿಯನ್ನು ದಾಟಲು ಆರಂಭಿಸಿರುವೆ ಇನ್ನು ನನಗೇನೋ ಸ...

ಕವನ ಬರೆಯಲು ಬಹುಕಾಲ ಕುಳಿತೆ, ಮೂಡು ಬರಲಿಲ್ಲ ಕೈ ಮುಂದೆ ಸಾಗಲಿಲ್ಲ. ದಿನಗಳು, ವಾರಗಳು, ತಿಂಗಳುಗಳು ಕಳೆದರೂ ಕಾವ್ಯ ಸೃಷ್ಟಿಯಾಗಲಿಲ್ಲ. ಕಾವ್ಯ ಕನ್ನಿಕೆಯ ಒಲಿಸಿಕೊಳ್ಳಲು ಕವಿತಾ ಸುಧಾರಸವ ಉಣ ಬಡಿಸಲು ಕಾದಿರುವೆ ನಾನು, ಸಂಸ್ಕೃತಿಯ ಪರಿಚಾರಕ! ಹ...

ತಾಳದಾಗ. ತಾಳವ್ವ ಹರತಾಳ ಚೋಳವ್ವ ಕೇಳವ್ವ ಬೀದಿಯ ಬಾಳವ್ವಾ ||ಪಲ್ಲ|| ಬ್ಯಾಂಕೀನ ಸ್ಟ್ರೈಕಾ ರೈಲೀನ ಸ್ಟ್ರೈಕಾ ಬಿಟ್ಟಿಲ್ಲ ಸ್ಟ್ರೀಟಾ ಈ ದೆವ್ವಾ ಕಾಲೇಜಿ ಜನರಾ ಸ್ಕೂಲೀನ ಜನರಾ ಯಾಲ್ಲಾರ ಬಾಯಾಗ ಸ್ಟ್ರೈಕವ್ವಾ ||೧|| ಡಾಕ್ಟರ ಗುಂಪಾ ಆಪೀಸು ಸಂಪಾ ...

ಆ ಒಡೆಯನ ಹೊಲದಾಗ ಮೂಳೆ ಮುರಿಯೋತನಕ, ಪುಡಿಪುಡಿಯಾಗೋ ತನಕ ನಾ ದುಡದೀನಿ. ಹರಕ ಮುರಕ ಝೋಪಡ್ಯಾಗ ನಾ ದಿನಾ ಕಳದೀನಿ, ಆದರೂ ನನಗಿಲ್ಲ ಒಪ್ಪೋತ್ತಿನ ಕೂಳ, ಹಸೀದ ನನ್ನ ಹೊಟ್ಟಿ ಚುರುಚುರು ಅನ್ತಾದ, ಹೊಟ್ಟಿ ಹೋಗಿ ಬೆನ್ನಿಗಿ ಹತ್ತ್ಯಾದ ಅಂದಾಗ್ಯೂ ಆ ಮಾ...

ಮಗುವಾಗಿ ಇರುವಾಗ ನೀನು ಎಲ್ಲರ ಮುಖದ ನಗುವಾಗಿದ್ದಿ ಮನಸಿಗೆ ಹಿತ ಬದುಕಿಗೆ ಮಿತವಾಗಿ ದೇವರ ದಯೆಯಾಗಿ ಮುದ್ದಾದ ಬಾಲಭಾವದ ಚೆಲುವಿನ ಖಣಿಯಾಗಿ ಸುಖ-ಶಾಂತಿಯ ಮಡುವಾಗಿದ್ದಿ ಯವ್ವನ ಬರುತಿರಲು ನೀನು ನಿನ್ನ ಮೈಯ ಮಾಟಕೆ ಕಣ್ಣ ನೋಟಕೆ ಹಮ್ಮಿನಧಿಕಾರಿಯಾದ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...