
ನಗೆಯು ಬಂದು ತುಟಿಯ ಮೇಲೆ ನಿಂತಿದೇತಕೆ| ನಸುನಗುತಲಿ ಮೊಗ್ಗಾಗಿ ಮಿಂಚುತಿದೇಕೆ? ಹೊರಹೊಮ್ಮಲಿ ನಗೆ ಚಿಮ್ಮಲಿ ಹರ್ಷದಾನಂದ ಮಳೆಸುರಿಯಲಿ|| ಏನೋ ಒಳಗೆ ಸಂತಸದ ಹೊನಲು ಚಿಗುರೊಡೆದಂತಿದೆ| ಹೇಳಲಾರದ ಹೊಸ ಅನುಭವವ ಅನುಭವಿಸುತಲಿ| ತನಗರಿವಿಲ್ಲದಲೆ ತುದಿಬ...
ಮೊದಲು ತಾಯ ಹಾಲ ಕುಡಿದು, ಲಲ್ಲೆಯಿಂದ ತೊದಲಿ ನುಡಿದು, ಕೆಳೆಯರೊಡನೆ ಬೆಳೆದು ಬಂದ ಮಾತದಾವುದು- ನಲ್ಲೆಯೊಲವ ತೆರೆದು ತಂದ ಮಾತದಾವುದು- ಸವಿಯ ಹಾಡ, ಕತೆಯ, ಕಟ್ಟಿ, ಕಿವಿಯಲೆರೆದು, ಕರುಳ ತಟ್ಟಿ, ನಮ್ಮ ಜನರು, ನಮ್ಮ ನಾಡು, ಎನಿಸಿತಾವುದು- ನಮ್ಮ ಕ...
ಕಾಣದ ಕೈಯೆಂದು ಕಾಣದಕೆ ಹಂಬಲಿಸಿ ಹುಡುಕುವಿಯೇತಕೆ ಕಾಣುವ ಕೈ ಕೈಯಲ್ಲವೇ? ತೊಟ್ಟಿಲು ತೂಗಿದ ಕೈ ಅಟ್ಟುಣಿಸಿದ ಕೈ ಮೀಯಿಸಿದ ಕೈ ಬಟ್ಟೆಯುಡಿಸಿದ ಕೈ ತೊಡೆ ಮೇಲೆ ಕೂಡಿಸಿದ ಕೈ ಹಾಲೂಡಿದ ಕೈ ಒರೆಸಿದ ಕೈ ಬರೆಸಿದ ಕೈ ಕರೆದ ಕೈ ಚಾಚಿದ ಕೈ ಅಕ್ಕರೆಯಿಂದ ...
ದೂರದ ಗೋವೆಯಿಂದ ವಧು ಬಂದಿತ್ತು ಪ್ರಥಮ ನೋಟದಲೆನ್ನ ಮನವ ಗೆದ್ದಿತ್ತು. ಕಣ್ಗಳೇ ಆಡಿದವು ನೂರಾರು ಮಾತು, ಆಳವಾಗಿ ಬೇರೂರಿತು ಪ್ರೇಮ, ಹೃದಯಗಳು ಬೆರೆತು. ಬಾಂಧವ್ಯಕೆ ಭಾಷೆಯ ಬಂಧನವಿಲ್ಲ ಹಲವು ಭಾಷೆಗಳಲ್ಲಿ ಹರಿಯಿತು ಪತ್ರ ಪ್ರವಾಹ ವ್ಯವಸ್ಥಿತ ಮದು...
ಬೆಲ್ಲಾ ತಿಂದೆ ನಾನು ನಲ್ಲಾ ಬೆಲ್ಲಾ ಜೇನು ಎಲ್ಲಾ ಇಂಥಾ ಬೆಲ್ಲಾ ಎಲ್ಲೂ ಇಲ್ಲಾ ನಾನು ನೀನು ಖುಲ್ಲಾ ಹುಲ್ಲು ಕಳ್ಳಿ ಕಂಟಿ ತಿಂದೆ ಅದಽ ವೈನ ಅಂದೆ ತಿಂದ ಮ್ಯಾಗ ತಿರುಗಿ ಬಿದ್ದೆ ತಳಗ ಮ್ಯಾಗ ಆದೆ ಇಂಗು ತಿಂದು ಮಂಗ ನಾದೆ ಮ್ಯಾಲ ಹೆಂಡಾ ಕುಡಿದೆ ರಂ...
ಕಣ್ಣೀರು ಬತ್ತಿಹೋದ ನನ್ನ ಗುಳಿಬಿದ್ದ ಕಣ್ಣುಗಳಲ್ಲಿ ನೋವಿನ ಸೆಳಕು ಏಕೆಂದರೆ ಮೊಗ್ಗಗಳು ಬಿರಿವಾಗ ಹಸಿರುಟ್ಟು ನಲಿವಾಗ ನನ್ನ ಸುಕ್ಕುಗಟ್ಟಿದ ಕಪ್ಪು ಮುತ್ತಿದ ಕಣ್ಣುಗಳು ಯಾತನೆಯಿಂದ ಹನಿಗೂಡುತ್ತಿದ್ದವು. ಎಣ್ಣಿಗಟ್ಟಿ ಮಸುಕಾದ ಭಾರವಾಗಿ ಜೋತುಬಿದ...
ಹಾಳು ಬೀದಿ ಬಸದಿಯಲಿ ಗೋಳು ಕ್ಷಯ ಹಿಡಿದ ಬಾಳಿಗೆ ದೊಂಗಾಲು ಬಿದ್ದು ಕ್ರಿಮಿಗಳೋಪಾದಿ ಕೊಳೆವ ನರ ನಾರಾಯಣರ ಬಾಳು ಬಾಳೆ? ನೋಡಿರೈ ಅವರ ಜೀವಂತ ಮರಣ ಗುರಿರಹಿತ ಪಯಣ ಉದಾಸೀನ ನಯನ, ನಿಶ್ಯಕ್ತ ಹರಣ ಜೀವನದ ಅಲೆದಾಟ ರೇಗಾಟ, ಕೂಗಾಟ, ನಿಜವನ್ನೆ ಸುಳಿವಾಟ...













