ತಟ್ಟಿಕೊಳ್ಳಿ
ನಿಮ್ಮ ಬೆನ್ನ ನೀವೇ……
ಧಾರಾಳವಾಗಿ ತಟ್ಟಿಕೊಳ್ಳಿ.
ಬೇರೆಯವರು
ನಿಮ್ಮ ಬೆನ್ನ ತಟ್ಟಲು
ಅವರಿಗೇನು
ತಲೆ ಕೆಟ್ಟಿದೆಯೇ?
ಜಾಹೀರಾತೇ ಜೀವ
ಆಗಿರುವ
ಈ ಕಾಲದಲ್ಲಿ
ಬೇರೆಯವರ
ಬೆನ್ನುತಟ್ಟಿದರೆ
ನಮಗೇನು ಲಾಭ?
ನಮ್ಮ ನಮ್ಮ
ಬೆನ್ನ ತಟ್ಟಿಕೊಳ್ಳುವುದೇ
ಎಲ್ಲರಿಗೂ
ಶುಭ.
*****
೧೩-೦೩-೧೯೯೨