Home / ಕವನ / ಕವಿತೆ

ಕವಿತೆ

ಈ ಹುಡಿಯ ಗೂಡಿನೊಳಗೆ ರಕ್ತ ಮಾಂಸ ಹೂವ ಮಿಡಿಯು ಕಾಲ ಕಾಲಕೆ ನೆರದು, ಅರಳಿ ಮಿಂದ ಘಮ ಮನದ ಘನ ಎಲ್ಲಾ ಮುಖದಲಿ ಗುಹೇಶ್ವರನ ನೆರಳು. ಮನಸಿನಲಿ ಮಹಾಲಿಂಗದ ಬೆಳಕು ಅರಳಿತು ಆಳಕ್ಕಿದರೆ ಕ್ಯಾದಿಗೆಯ ಘಮ ಸೊಂಪನ್ನು ಕಂಡವರಿಲ್ಲ ಅನುಭವಿಸಿದವರು ಚಿಹ್ನೆಯಲಿ...

ಶರಣೆಂಬೆವು ತಾಯಿ ಶರಣೆಂಬೆವು ಶರಣಾಗತರಾಗಿಹೆವು ರಕ್ಷಿಸೆಮ್ಮನು ಕರಮುಗಿದು ಬೇಡುವೆವು ವರವೊಂದನು || ಭುವನೇಶ್ವರಿಯೆ ತಾಯೆ ರಾಜ ರಾಜೇಶ್ವರಿಯೆ ಕರುನಾಡ ತಾಯೆ ಕರುಣೆಯ ತೋರು ಕರಮುಗಿದು ಬೇಡುವೆವು ವರವೊಂದನು || ನಿನ್ನ ಕರುಣೆಯೆ ನಮಗೆ ಶ್ರೀ ರಕ್ಷೆ...

೧ ಶಿವನುಂಡ ನಂಜು ತಿಳಿಗೊಂಡು ಮಂಜು- ಮಂಜಾಗಿದೆ ಈ ಸಂಜಿಗೆ. ಇದು ಉಷಾಮಿಷದ ಪೊಸನೇಹ ಸೇರಿ ಕಳೆ ಏರಿದೆ ಹುರಿಮಂಜಿಗೆ. ಭೌಮಾತ್ಮಭೂತಿ ಚೈತನ್ಯದೂತಿ, ಊ- ರ್ಜಿತದಾ ಸಿರಿವಂತಿಗೆ. ಕಥಕ್ಕಳಿಯ ಪುತ್ಥಳಿಯೆ ! ಪೃಥಕ್ ಥತ್ ತಳಿಸಿದೆ ಜೀವಂತಿಗೆ. ಜಡೆತುಂಬ ...

ಪ್ರಜಾರಾಜ್ಯ ಬಂತು ಬಂತು, ಸಕಲಪ್ರಜಾರಾಜ್ಯ ! ಪ್ರಜೆಗಳಿಗೇ ಇಲ್ಲಗೊತ್ತು: ‘ಯಾರದು ಈ ರಾಜ್ಯ!’ ೧ ಆಯ್ಕೆಯ ದಿನ ಬಂದಾಕ್ಷಣ ಸವಿಯ ಭಕ್ಷ್ಯ-ಭೋಜ್ಯ ಪ್ರಜರ ಬಾಯ್ಗೆ ಬೀಳ್ವುದು ನಿಜ, ಅದಕೆ ಪ್ರಜಾರಾಜ್ಯ ! ಆಯ್ಕೆ ಮುಗಿದ ಮರುದಿನವೇ ಪ್ರಜೆಗಳೆಲ್ಲ ತ್ಯಾ...

ಅಮ್ಮ ನಿನ್ನ ನಾನು ಸರಿಯಾಗಿ ನೋಡಿಕೊಂಡೆನೆ?|| ಹಿರಿಯ ಅಣ್ಣ ನಿನಗೆ ನೆಚ್ಚಿನವನೆಂದು ಕಿರಿಯ ತಮ್ಮ ನಿನಗೆ ಮೆಚ್ಚಿನವನೆಂದು ನನಗೆ ನಾನೇ ಅಂದುಕೊಂಡು| ಅವರೇ ನಿನ್ನ ನೋಡಿಕೊಳ್ಳಲೆಂದು ಮಧ್ಯಮನಾದ ನಾನು ಹೊಣೆಗೇಡಿಯಾದೆನೆ?|| ಅಮ್ಮಾ ನೀನು ನನ್ನ ಬಾಲ್...

ಅಮ್ಮಿಯ ಗುಳಿಬಿದ್ದ ಕಣ್ಣುಗಳಲ್ಲಿ ಮಿಂಚಿನ ವಿದ್ಯುತ್‌ ಹರಿದಾಟ ಅವಳ ಸತ್ತ ಕೈಗಳಲ್ಲಿ ಜೀವ ಸಂಚಾರ ಬಯಲು ಸೀಮೆಯ ರೊಟ್ಟಿಚಟ್ನಿ ರುಚಿಕಂಡ ಶೇಖನೊಬ್ಬ ಬಂದ ಕತ್ತಲೆ ರಾತ್ರಿಯಲ್ಲಿ ಧರ್ಮ ದಲ್ಲಾಲರ ಎದುರಾಗಿಟ್ಟುಕೊಂಡು ಮುಗಿಸಿಯೇ ಬಿಟ್ಟ ಒಪ್ಪಂದ ಪುಟ್...

ಎಂತೂ ನಾನಿರಬೇಕಿದ್ದರೆ ಅಂತಿರಬೇಕೊ ಇಂತಿರಬೇಕೊ ನಾ ಎಂತಿರಬೇಕೊ ಕೂತಲಿಂದ ಏಳಲೆ ಬೇಕೊ ಎದ್ದಮೇಲೆ ಓಡಲೆ ಬೇಕೊ ಎಡೆತಡೆಗಳ ಮೀರಲೆ ಬೇಕೊ ಸದಾ ನಡೆಯುತ್ತಿರಬೇಕೊ ಇನ್ನೊಬ್ಬರು ಕಲಿಸಿದ ಮಾತನು ಒಪ್ಪಿಸಬೇಕೊ ಇತರರ ಮಾತಿಗೆ ತಲೆ ಜಪ್ಪಿಸಬೇಕೊ ನಗು ಬರದಿದ...

ಕಲ್ಲ ಪೂಜಿ ಮಾಡಲಕ ನನ್ನ್ಯಾರು ಕರಸ್ಯಾರ। ಸಾಲಮ್ಯಾಳಿಗಿ ಮನಿಯವಳ|| ಸುವ್ವಿ ಸುವ್ವಿ ಸುವ್ವಾಲೆ ||೧|| ಸಾಲಮ್ಯಾಳಿಗಿ ಮನಿಯಽಳ ತಂಗೆವ್ವಾ| ಕಲ್ಲ ಪೂಜಿಽಗಿ ಕರಸ್ಯಾಳ|| ಸು…. ||೨|| ಒಳ್ಳ ಪೂಜಿ ಮಾಡಲಿಕ್ಕ ನನ್ನ್ಯಾರು ಕರಸ್ಯಾರ| ಸಾಲ ಮ್ಯಾ...

ಕನಸುಗಳು ಕರೆದಾವೊ ಮನಸುಗಳು ಬೆರೆತಾವೊ ಕೆಂಬಾವುಟದಡಿಯಲ್ಲಿ ಹೊಸ ಹಾಡು ಕೇಳಿದವೊ || ಕತ್ತಲಲಿ ಕರಗಿದ ಸೂರ್‍ಯ ಇನ್ನು ಕರಗೋದಿಲ್ಲವಣ್ಣ ಕಣ್ಣೀರಲಿ ತೊಳೆದ ಬದುಕು ಇನ್ನು ಮುಂದೆ ಬೇರೆಯಣ್ಣ ಇನ್ನು ಯಾಕ ಒಳಗ ಕುಂತಿ ಎದ್ದು ಹೊರಗೆ ಬಾರಣ್ಣ… ನ...

ನಾನು ಭೂಮಿ; ಭೂಮಿ ಕಾಯುವುದಿಲ್ಲ ನೀನು ಮಳೆ. ನೀನು ಕಾಯುತ್ತೀಯೆ, ಕಾಯಬೇಕು ನೀನು ಮುಗಿಲು ನಾನು ನೆಲ ಎಂದು ಒಂದು ಗಂಡು ಹಾಡಿದಂತಲ್ಲ ನಮ್ಮಿಬ್ಬರ ಯುಗಯುಗಗಳ ಈ ಬಂಧ ನಾನು ಭೂಮಿ, ಭೂಮಿಯೇ ಹಾಡಬೇಕು ನಾನು ಭೂಮಿ, ನಾನು ಬರೀ ನೆಲವಲ್ಲ. ನಾನು ತಿರುಗ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...