ಈ ಹಾವನ್ನು ಅದುಮಿ ಅದುಮಿ
ಇಟ್ಟಿದ್ದೇವಲ್ಲಾ ನಾವು ನೀವೆಲ್ಲಾ
ಅದು, – ಪಡ್ಡೆ ಹುಡುಗರ ವಿಷಯ ಬಿಡಿ
ಅವರು ಅದುಮುವುದೇ ಇಲ್ಲ – ಹೆಡೆಯೆತ್ತಿ
ಒಮ್ಮೊಮ್ಮೆ ಆಡಿಸುತ್ತದೆ, ನೋಡಿ.
ಎಂಥವರೂ ಬೆಚ್ಚಿ ಬೀಳಬೇಕು
ಬಂದ ದಾರಿಗೆ ಸುಂಕವಿಲ್ಲ ಎಂದು
ಅದಕ್ಕೂ ಗೊತ್ತು, ಬುಟ್ಟಿಯೊಳಗೆ
ಮತ್ತೆ ಮಲಗುತ್ತದೆ. ಏಕೆಂದರೆ
ಬಯಸಿದ….. ಆ ಅವರು ಬರಲೇ ಇಲ್ಲ.
*****


















