ನೆನಪುಗಳೇ ಹೀಗೆ

ಮೊನ್ನೆ ಬಿದ್ದ ಮಳೆಗೆ ಮೈಯೆಲ್ಲಾ ಒದ್ದೆ
ಬಂದ ನೆನಪುಗಳ ಅಲೆಯಲಿ ಮುಳುಗಿದ್ದೆ

ಕಛೇರಿ ಬಿಟ್ಟು ಮನೆ ಸೇರುವ ಹಾದಿಯಲಿ
ಮಳೆ ಹನಿ ಸೋಕಿದಾಗ
ಬಿಚ್ಚಿದ್ದು ನೆನಪುಗಳ ಸರಮಾಲೆ

ಕಡಲ ದಂಡೆಯಲಿ ಮರಳಾಟ ಆಡಿದ್ದು
ಅಲೆಗಳಲಿ ಸಿಲುಕಿದಾಗ ನಾನು ಬಿದ್ದದ್ದು
ಅಷ್ಟರಲಿ ನೀನೋಡೋಡಿ ಬಂದದ್ದು
ನನ್ನನ್ನು ಬರಸೆಳೆದು ನಿನ್ನೆದೆಗಾನಿಸಿಕೊಂಡದ್ದು
ನನ್ನ ಮೈಯೆಲ್ಲ ಜುಂ ಜುಂ ಎಂದದ್ದು
ಮರೆತಿಲ್ಲ ನಿನ್ನುಸಿರು ಎನ್ನೆದೆ ಸವರಿದ್ದು

ಮೊನ್ನೆ ನನ್ನ ಮಾತನಾಡಿಸದೇ ಹೋದದ್ದು
ಏಕಿಷ್ಟು ಸಿಟ್ಟು ಬಿಡು ಹುಸಿ ಕೋಪ
ನಾನೇನು ತಪ್ಪು ಮಾಡಿದ್ದೆ?
ಶಿಕ್ಷಿಸಬೇಡ ಮೌನವಾಗಿದ್ದು
ಬೊಗಸೆ ತುಂಬಾ ನೀಡುವೆ ಪ್ರೀತಿ

ಮಾಡದ ತಪ್ಪಿಗೆ ಮನ್ನಿಸೆಂದು
ಹಗಲಿರುಳೆಲ್ಲಾ ದೇವರಲ್ಲಿ ಬೇಡಿದೆ ಗೊತ್ತಾ!

ಹೋದೆ ಮಾರನೇ ದಿನ ಕಛೇರಿಗೆ
ನಿನ್ನ ಪ್ರೇಮದೋಲೆ ಕಂಡು
ಬಂದಿತು ಈ ದೇಹಕೆ ಮರುಜೀವ
ಗುಲ್ಮೊಹರು ಮರದ ನೆರಳಿನಲಿ
ಹರಟೆ ಪ್ರೀತಿ ಪಿಸು ಮಾತು
ಪ್ರೇಮಿಗಳಾಟ ಆಡೋಣು ಕುಳಿತಲ್ಲಿ
ಬಾ ಎಂದು ಬರೆದದ್ದು ಸ್ವರ್‍ಗಕ್ಕೆ
ಮೂರೇ ಗೇಣು ಎಂದೆನಿಸಿತ್ತು.

ನಿನ್ನೊಂದಿಗೆ ಸಿದ್ಧಳಾದವಳು ನಾನಾಗಲೇ
ಸುದೀರ್ಘ ಜೀವನ ಪಯಣಕೆ

ಇಲ್ಲಿ ಮತ್ತೆ ಜಿನುಗುತಿದೆ
ಇದ್ದೀನಿಲ್ಲಿ ನಿನ್ನ ನೆನಪಲ್ಲೇ
ಕಾಯುತ್ತಿದ್ದೇನೆ ನಿನ್ನಾಗಮನಕ್ಕಾಗಿ

ನೆನಪುಗಳೇ ಹೀಗೆ
ಮುಂಗುರುಳಿನೊಂದಿಗೆ ಲಾಸ್ಯವಾಡಿದಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಡುಗ – ಹುಡಿಗಿ
Next post ಮನೆಯಲ್ಲಿ ಭೂತ ಸಂಚಾರ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…