Home / ಕವನ / ಕವಿತೆ

ಕವಿತೆ

ನಟ್ಟನಡು ರಾತ್ರಿಯಲಿ ಹುತ್ತಗಟ್ಟಿತು ಕತ್ತಲು ತುಟ್ಟತುದಿ ಕೋವಿಯಲಿ ಹೆಡೆಯ ಎತ್ತಿತು ಸುತ್ತಲು ಬುಸ್ಸೆನ್ನುವ ಭಾವದಲ್ಲಿ ಸತ್ತ ಸಂಬಂಧಗಳು ವಿಷನಾಗರ ನಾಲಗೆಯಲ್ಲಿ ನಕ್ಷತ್ರಗಳ ನುಂಗಿದವು ಗೋರಿಯೊಳಗೆ ತಂಗಿದವು ಆಕಾಶದ ಹಣೆಯಲ್ಲಿ ಕುಂಕುಮದ ಚಂದಿರನ ಒ...

ಪ್ರಕೃತಿಯಲಿ ಸೌಂದರ್ಯ ಕಾಣದೆಯೆ ಕುರುಡಾಗಿ ವಿಕೃತಿಯನೆ ನೋಡಿದೆನು ಅದು ಸತ್ಯವೆಂದು ಸುಕೃತಿಗಳನೊಪ್ಪದೆಯೆ ಎನ್ನದೇ ಸರಿಯೆಂದು ಆಕೃತಿಯ ದುಷ್ಕೃತಿಗೆ ಬಲಿಗೊಟ್ಟೆನಯ್ಯ. ನಾನು ದೊಡ್ಡವನೆಂದು ಹೆಮ್ಮೆಯಲಿ ಮೆರೆಯುತ್ತ ಮಾನಾಪಮಾನಮಂ ಲೆಕ್ಕಿಸದೆ ನಡೆದು ...

ಸಾಲು ಮೆಟ್ಟಲುಗಳನೇರಲು ಹೊರಟರೆ ಸಾಲಭಂಜಿಕೆಗಳು ತಡೆದಾವೆ ಸಾಲಭಂಜಿಕೆಗಳು ತಡೆದಾವೆ ನಮ್ಮ ವಿಗಡವಿಕ್ರಮರಾಯನ ಕೇಳ್ಯಾವೆ ಒಂದೊಂದು ಸಾಲಿಗೆ ಒಂದೊಂದು ಪ್ರಶ್ನೆ ಇಪ್ಪತ್ತು ಬೊಂಬೆಗಳು ಕೇಳಿದರೆ ಒಂದೊಂದು ಬೊಂಬೆಗು ಒಂದೊಂದು ಉತ್ತರ ಜಾಣ ವಿಕ್ರಮರಾಯ ಹ...

ನನಗೂ ಆಸೆ ಕವಿತೆ ಬರೆಯಲು ಭಾರತಾಂಬೆಯ ಮೇಲೆ ಸತ್ಯವ ಮುಚ್ಚಿ ಸುಳ್ಳು ಹೇಳುವುದು ಥರವೆ? ಗೆಳತಿ ಹೇಳೆ ಭಾರತಾಂಬೆಯ ಒಬ್ಬ ಮಗ ಇರುವನು ಊರ ಒಳಗೆ ಇವನಿಗೆ ಸಹಜ ಭಾರತ ಮಹಾನ್ ನಾನು ಯಾರ ಧ್ವನಿಗೆ? ಮೈಲಿಗೆ ತೊಳೆದ ಗಂಗೆ ತುಂಗೆ ಕಾವೇರಿಗೆ ಒಂದೆ ನಮನ ಮನ...

ಗುಂಡಗುರುಳಿ ದುಂಡಾಗಿ ಹೊಗೆ ಬೆಂಕಿ ಒಳಗೇ ಅಮುಕಿ ಹಸಿರು ಚೆಲ್ಲುತ ನಿಂತ ತಾಯೇ ನಮ್ಮಮ್ಮ ಮಹತಾಯಿ ಭೂಮಿತಾಯೇ ಹಸಿರಿನ ಪಸೆ ಎಷ್ಟು ಹೊತ್ತೇ ನಿನಗೆ? ಬೆಂಕಿಯುಗುಳಿ ಒಳಗಿನ ಕಿಚ್ಚ ಹೊರ ಚೆಲ್ಲಿ ಕಾರಿಕೊಳ್ಳುವ ಬಾಯೇ ನಿನ್ನ ಒಣಗಿದ ಮೈಯ ಮಡಿಕೆ ಮಡಕೆಯ ...

ಎನ್ನ ದೇಹವೇ ಕನ್ನಡಾಲಯ ಕನ್ನಡ ಕನ್ನಡವೆನ್ನಲೇತಕೆ ಭಯ ಕನ್ನಡಕೆ ನಮೋ ನಮೋ ಎನ್ನುವೆ ಎನ್ನ ಮಂತ್ರವೊಂದೇ ಅದುವೇ ಕನ್ನಡ ಬಾಡದ ಹೂವಿನ ಮಾಲೆ ಈ ಕನ್ನಡ ನಂಬಿದರೆ ಕೈಬಿಡದೆಂದಿಗೂ ಈ ಕನ್ನಡ ಪ್ರೀತಿಯ ಕನ್ನಡವೇ ಎನ್ನುಸಿರು ತಾಯ್ತುಡಿಯಿಲ್ಲದೆನಗೆ ಬದುಕಿ...

ಯಾರು ಹೇಳಿದರು ಜಾಗತೀಕರಣದಿಂದ ಅಳಿಯಿತು ಕನ್ನಡ? ಅಂತರ್ ಜಾಲದಲ್ಲಿ ಕನ್ನಡ ಲಿಪಿ ಸೇರಿ ಜಗದಗಲ ಪಸರಿಸಿದೆ ಕನ್ನಡ. ಅಭಿಮಾನಿಯ ಹೊಸಿಲೊಳಗೆ ಮಾತೃಭಾಷೆಯ ಕೊಲೆ?! ಇಲ್ಲ ಸಾಧ್ಯವಿಲ್ಲ. ನಿರಭಿಮಾನಿಯ ಮನೆಯಲ್ಲಿ ಅಳಿಯುತ್ತಿದೆ ಕನ್ನಡ! ಪಾಶ್ಚಾತ್ಯೀಕರಣದ...

ವಸಂತ ಋತು ಮನದೇಚ್ಛೆ ಅನುಭವಿಸಲು ಕಾಡಿಗೆ ಹೋಗಿ ಕುಳಿತುಕೊಳ್ಳಬಯಸಿದೆ ನಾಡು ಹೇಳಿತು ಕಾಡಿನ ಮೃಗಗಳು ಭಯಂಕರ ನಾಡಿನಲ್ಲೇ ಕುಳಿತೆ ಇದ್ದಷ್ಟು ಕಣ್ಣುಂಬಿಕೊಳ್ಳಲು ಕಾಡುಪ್ರಾಣಿಗಳು ನಕ್ಕವು ನಮಗಿಂತಲೂ ಭಯಾನಕ ರಾಜಕೀಯದವುಗಳು, ಜಾತಿ ಮತದವುಗಳು. ಕಾಡು...

ಬಾ ಗೆಳೆಯ ಬಾ ಹೃದಯದಂಗಳದಲ್ಲಿ ಚಿತ್ತಾರ ಬಿಡಿಸು ಬಾ ಬಾನಿನಂಗಳದಲ್ಲಿ ಚಂದಿರ ನೀನಾಗು ಬಾ ನೀ ಬರುವಿಯೆಂದು ಕಾಯುತಿರುವೆ ಕಾತುರದೆ ಇಹಪರವ ಮರೆತು ಹೃದಯ ಬಾಗಿಲು ತೆರೆದು ಕಣ್ಣಿನಲಿ ಪ್ರೀತಿ ದೀಪ ಬೆಳಗಿಸಿ ಮುಗುಳ್ಳಗೆಯ ಮಲ್ಲಿಗೆ ಮುಡಿದು ಮೌನ ಬಂಗಾ...

ಬಲೆಯಲಿ ಸಿಕ್ಕ ಮೀನಿನಂತೆ ನಾನೀಗ ಒದ್ದಾಡುತ್ತಿರುವೆ ನಿನ್ನ ಪ್ರೇಮದ ಸೆಳತದಲಿ. ಸರಳುಗಳಾಚೆಯ ಬೆಳಕು ಗೋಡೆಯ ಮೇಲೆ ಹರಡಿ ಹಾಸಿವೆ ನೆರಳುಗಳು ಬಿತ್ತಿಯಲಿ. ನನ್ನ ಈ ಪ್ರೇಮದ ಅಲಾಪ ಗೀತೆಗಳ ಪ್ರೀತಿ ಸಂಜೆ ಬೆಳ್ಳಕ್ಕಿಗಳು ನಿನ್ನ ನೆತ್ತಿಗೆ ಸವರುತ್ತವ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...