ನನ್ನ ಜೀವನ ನದಿಯ ಎದೆ ಮೊರೆತ ಶಾಂತತೆಯ ಕಡಲಿನಲಿ ಮರೆಯಾಗಿ, ಕಲ್ಪನೆಯ ಕನಸುಗಳು ವಿಶ್ರಾಂತಿಗಾಗೊರಲಿ ವಿರಹಿಯಾಗಿಹ ಮನವ ಬಿಸಿ ಮುಳ್ಳುಗಳ ಹಾಗೆ ಒತ್ತೊತ್ತಿ ಕಾಡುವುದು ನಿಲ್ಲಿಸಿದ ದಿನದಂದು ಈ ಎಡೆಗೆ ಸಾಗುವೆಯ? ಹೃದಯದಲಿ ಹಾವಿಟ್ಟು ವಿಷವ ಹುಸಿಯಲಿ...

ಮೃದು ಪವನ ಪರಿಮಳದ ಅರಿಕೆಗೆಚ್ಚರಗೊಳಲಿ ಸುಮವೀಣೆ! ಆ ವೀಣೆಯಿಂಚರದ ಕನಸಿನಲಿ ತೆರೆತೆರೆ ತೆರೆಯಲೊಂದು ರೂಪಕ ಸರೋವರಂ! ಅಲ್ಲುಲಿವ ರಾಜಹಂಸಗಳ ಪಲ್ಲವಿ ‘ಪಂಪಂ’! ಪಂಪ, ನಿನ್ನಿಂಪಿನಚ್ಚರಿಯ ನುಡಿವೆಳಗಿನಿಂ- ದರಳ್ವ ಮಲ್ಲಿಗೆ ಮಾವು ಕರ್ಬು ಗಿಳಿ ತುಂಬಿ...

ಮಡಿಕೇರೀ ಮಲೆ ಸೃಷ್ಠಿಯ ಕೋಮಲೆ ಸುತ್ತಲು ಗಿರಿಸಾಲು. ಬಯಲಿನ ತಪ್ಪಲು ನಿರ್ಝರ ದರಿಗಳು ನಿಡು ಮರ ಗಿಡ ಸಾಲು, ಸೃಷ್ಠಿಯ ರಮ್ಯ ಸೌಂದರ್ಯಗಳು ದೃಷ್ಠಿಯೆ ಬೀಳದ ಆಳದೊಳೆಲ್ಲಿಯು ಹಚ್ಚನೆ ಹೊಲಸಾಲು ಸುತ್ತು ದಿಗಂತವ ಅಪ್ಪುತ ನಿಂತಿಹ ನುಣ್ಣನೆ ಬೆಟ್ಟಗಳು,...

ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ ಹೆಡೆ ಎತ್ತಿ ಆಡುತಿರಲು, ಆ ಸರ್ಪನ ಕಂಡು ನಾ ಹೆದರಿಕೊಂಡು, ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು, ನೋಟ ನಿಂದಿತ್ತು, ಹೆಡೆ ಅಡಗಿತ್ತು, ಗುರು ಕರುಣವೆಂಬ ಪರುಷವೆ ನಿಂದಿತ್ತು. ನಿಂದ ಪರುಷವೆನ ಕೊಂಡ...

“ಹೌದಲ್ಲ! ಪುಸ್ತಕಕ್ಕೆ ಗೆದ್ದಲ ಹತ್ಯಾಽವು ಕನ್ನಡ ಬರೆಯೋದು ಓದೋಽದು ಮಾಡೋದಿಲ್ಲ ನೀವು ಇಂಗ್ಲಿಷ್ ಪುಸ್ತಕ ಪತ್ರಿಕೆ ಮನಿ ತುಂಬ ಹರಿವಿದ್ದೀರಲ್ಲ! ನೀವು ಇಂಗ್ಲೀಷಿನವರ ಸಂಬಂಧಿಕರೇಽನು ಮತ್ತಽ? ಆರೇ ನಿಮ್ಮ ಟಿ.ವಿ. ಹೊಳ್ಯಾಕತ್ತತ್ಯಲ್ಲ ಎಷ್...

ನನ್ನೆದೆಯ ಬಾಗಿಲನು ಮುಚ್ಚಿ ನಿದ್ರಿಸುತಿದ್ದೆ ಜೀವನದಿ ತಿರುಳಿಲ್ಲವೆಂಬ ಭ್ರಮೆಯೊಳಗೆ ದೇವ ನೀನೈತಂದು ಬಾಗಿಲನು ಬಡಿಯೆ ನಾ ಸಿಡುಕಿನಿಂದಲೇ ಕೇಳ್ದೆ “ಯಾರು ಅದು” ಎಂದು!   ೧ ಮೌನದಲಿ ಮತ್ತೊಮ್ಮೆ ಶಬ್ದ ಮಾಡಲು ನೀನು ನಾನೆದ್ದೆ ಕೋಪದ...

ಕಾಲದ ಕಡಲಲಿ ಉಸಿರಿನ ಹಡಗು ತೇಲುತ ನಡೆದಿದೆ ಹಗಲೂ ಇರುಳೂ; ನೀರಲಿ ತೆರೆದಿವೆ ನಿಲ್ಲದ ದಾರಿ.- ಎಲ್ಲಿಂದೆಲ್ಲಿಗೆ ಇದರ ಸವಾರಿ! ಕಾಮನ ಕೋರುವ ಕಣ್ಣು ಇದಕ್ಕೆ, ಬಯಕೆಯ ಬೀರುವ ಬಾವುಟ-ರೆಕ್ಕೆ, ಕ್ಷುಧಾಗ್ನಿ ಹೊರಳುವ ತುಂಬದ ಹೊಟ್ಟೆ, ಹಾಹಾಕಾರದ ಹೆಬ್...

ಧನ್ಯಭೂಮೀ- ಮಾನ್ಯರೂಪೀ, ಕನ್ಯೆಭಾರತಿ ಪುಣ್ಯೆಯೇ! ಏಸುಕಾಲದಿ ಮಾಸದಳಿಯದೆ ಕೋಶಸಲಹಿದೆ-ತಾಯಿಯೆ? ಆರ್ಯಮೊಗಲರ ವೀರ್ಯತೇಜರ ಶೌರ್ಯದಿಂದಲಿ ಸಲಹಿದೆ- ರಾಶಿಜನಗಣ ಆಶ್ರಯಾ ನಿನ್ನ ಲೇಸು ಪಡೆದರು-ಅಲ್ಲವೇ? ನೆನೆವೆ ಅಂದಿನ ಮುನಿಜನ ಮನ, ನಿನ್ನ ವೈಭವ-ವೈಭವ...

ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ ಕುನ್ನಿಗಳೇ ನೀವು ಕೇಳಿರೋ. ಅವರ ಬಾಳುವೆ ಎಂತೆಂದರೆ, ಕುರುಡ ಕನ್ನಡಿಯ ಹಿಡಿದಂತೆ, ತನ್ನೊಳಗೆ ಮರೆದು, ಇದಿರಿಂಗೆ ಬೋಧೆಯ ಹೇಳಿ, ಉದರವ ಹೊರೆವ ಛೀಮಾರಿಗಳೆಲ್ಲರು ಹಿರಿಯರೆ? ಆಲ್ಲಲ್ಲ. ಇದ ಮೆಚ್ಚುವರು ನಮ್...

೪೦ ಡಿಗ್ರಿ ಬಿಸಿಲಿನ ತಾಪಕ್ಕೂ Fail  ಎನ್ನುವ ರಿಜಲ್ಟಕ್ಕೂ ಬೆವರದ ನಾನು ನಿನ್ನೆ ಮೊದಲನೆಯ ಮುತ್ತಿಗೆ ಬೆವೆತಿದ್ದೆ ನೋಡಲಿಕ್ಕೆ ಚಂದ್ರನಂತೆ ತಂಪಾಗಿ ಕಂಡರೂ ಗೆಳೆಯಾ ಸೂರ್ಯನಕ್ಕಿಂತಲೂ ಜೋರಾಗಿದ್ದೀಯಾ ಕನಸುಗಳು ಮೆತ್ತನೆ ಸುರಿಯುವ ಮಂಜಿನಂತೆ ಭಾವ...

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...