ಗುರುತಿಸಬೇಕೋ ಪಕ್ಷಿಜಾತಿ ಬಲ್ಲವರು ನೀವು
ಗುರುತು ಹೇಳೋ ಪಕ್ಷಿಜಾತಿ ಗುರುವಿನ ಜ್ಞಾನಮಾಡುತಿದೆ     |ಪ|

ಅಡವೀಪಲ್ಲೆ ಮಡಿಯ ನೀರು
ಒಡಲ ಒಳಗ ಸಲ್ಲಿಸಿಕೊಂಡು
ಅಡವಿ ತಿರುಗುವವರ ಕೂಡ
ದುಡುಕಿನಿಂದ ಹೋಗುವದು                                 |೧|

ಒಂದು ಕಣ್ಣು ಒಂದು ನಾಲಿಗೆ ಬಾಯಿ ಎರಡು
ಅದರ ದೇಹ ಮೂರು ಕಲ್ಲು ತಿಂಬುವದು
ಮೋಡ ಮುಸುಕು ಗುಡುಗು ಸೇರಿ
ಛಾಯ ಮಿ೦ಚು ಗಗನಕಡರಿ
ಸಾಯಲಾರದ ಹೆಣವ ತಂದು
ಗಾಯ ಮಾಡಿ ಪೋಗುವದು                                  |೨|

ಪಕ್ಕವಿಲ್ಲದೆ ಅಂತರಾಡ್ವದು
ಇದು ಎಂಥಾದು ನೋಡೋ
ಊರ ಅಗಸಿಯೊಳಗ ಇರುವದು
ತಾನು ಹಡೆದ ಮಕ್ಕಳ ಕರೆದು
ಮುಂದಕ್ಕೋಡುವುದು ಗುರುವು ತಾನೇ ಬಲ್ಲ                 |೩|
*****