ಅವಳು ತನ್ನೆರಡೂ ಸ್ತನಗಳನ್ನು ಮುಚ್ಚಿಕೊಳ್ಳುತ್ತಾ,
ಗಾಳಿಯಲೆಗಳಲ್ಲಿ ನಡೆಯತೊಡಗಿದ್ದಳು.

ಬಟ್ಟೆಯಿದ್ದರೂ ಬೆತ್ತಲೆಯಲ್ಲಿದ್ದೇನೆ ಅಂದುಕೊಂಡವನ
ಹಾಳುಭ್ರಮೆ ಮರದ ಹೂಎಲೆಗಳನ್ನು ಉದುರಿಸುತ್ತಿತ್ತು.

ಉನ್ಮತ್ತ ಉಡುಪಿನ ಅವಳ ನಗೆ-
ಕಿಟಕಿಯ ಮೂಲಕ ಹಾದುಬರುವ ಬಣ್ಣದ ಚಿಟ್ಟೆಗಳನ್ನು,
ಹೆಣದ ವಾಸನೆಯನ್ನು ಹಿಮ್ಮೆಟ್ಟುತ್ತಾ ಅವನನ್ನೇ ಮುಗಿಸುವ
ತವಕದಲ್ಲಿತ್ತು.

ಉನ್ಮಾದ ರಾತ್ರೆಗಳನ್ನು ಶೋಧಿಸಿದ ಗಿಟಾರ್ ವಾದ್ಯ
ಕತ್ತಲಗರ್ಭದಲ್ಲಿ ಕ್ರಿಯಾಶೀಲಗೊಂಡಿದ್ದು,
ಬೆಳಕಿನ ಕಾಲದಲ್ಲಿ ಮದ್ಯ ಹೀರುತ್ತಾ ತನ್ನ ದುರಾಶೆಗಳಲ್ಲಿ
ಮಲಗಿಕೊಂಡಿರುತ್ತಿತ್ತು.

ಇನ್ನಿಲ್ಲದ ಅವಳ ಕರಾಳ ರಾತ್ರೆಗಳು
ಅಸಂಖ್ಯಾತ ಮನುಷ್ಯರು, ಪ್ರಾಣಿ ಪಕ್ಷಿಗಳನ್ನು ಕೊಂದು
ಹಲವಾರು ರಾತ್ರೆಗಳನ್ನೂ ಮುರಿದಿವೆ.

****

Latest posts by ಮಂಜುನಾಥ ವಿ ಎಂ (see all)