ಸಂಜೆ… ಇಳಿ ಹೊತ್ತಿನಲಿ
ಏಕಾಂಗಿತನದಿ… ನಾ ಬೆಟ್ಟವೇರುತಿರಲು
ಬೆಳ್ಳಿಯಾಗಸವ ಭೇದಿಸುತ
ನಿಸರ್ಗದ ನೈರ್ಮಲ್ಯ ಆಲಿಸುತ
ನಿರ್ಲಿಪ್ತತೆಯ ನಿಷೆ ಆವರಿಸಿತ್ತು

ಆ ಬಿಳಿಯಾಗಸದಿ ಭೇದವನೆಣಿಸದೆ
ಬರಸೆಳೆದು ಮುತ್ತಿಡುತ…
ಜೋಡಿಯಲಿ – ಹತ್ತಿರವಾಗಿ…
ಬಾನಲಿ ಹಕ್ಕಿಗಳು ಹಾರುತಿರಲು
ಹಕ್ಕಿಗಳ ರಾಜ, ಎಲ್ಲಿ… ನಿನ್ನಾಕೆ
ಬರಸೆಳೆದು ಮುತ್ತಿಡು…
ಕುಳುತಿರುವಿ ಏಕೆ… ನಿರ್ಲಿಪ್ತದಿ…?
ಎನ್ನುತ ಆಗಸದಿ ಮರೆಯಾದವು

ಮನಸ್ಸು ಮರು ಮಾತಾಡದೆ
ಮೇಲೆ ಗಗನ ನೋಡುತ
ಬೆಳೆದ ಮರಗಳ ತಂಗಾಳಿಯಲಿ
ಜುಳು-ಜುಳು-ವೆನ್ನುತ ಸಾಗಿದ
ನೀರಿನ ಝರಿಯ ಆ ನಾದದಲಿ
ಕೋಮಲದ ಆ ಮಧುರ ಸ್ವರದಿ
ಎಲ್ಲಿ… ನಿನ್ನಾ… ಮಾಧುರಿ…?
ಗುನುಗು… ಮನ ಗರಬಡಿಸಿತು.

ಅಲ್ಲಾಡುವಾ ಪ್ರಶ್ನೆಗಳಿಗುತ್ತರಿಸಲೆ…
ಎನ್ನುತಲಿ, ಕತ್ತಲೆ ಮೃಗವು…
ಬೆನ್ನಟ್ಟಿ ನನಗರಿವಿಲ್ಲದೆ ಕಾಲುಗಳು
ಬೆಟ್ಟವಿಳಿಸುತ ಮನೆಯೆಡೆ ಓಡುತ್ತಾ
ತಳ್ಳುತಲಿ… ಕೊಂಡೊಯ್ದವು..

***