ಮತ್ತೆ ಕತ್ತಲು ಆಳದಿಂದೆದ್ದ ತಕ್ಕಡಿಗಳು ರಂಗಸ್ಥಳವೇರಿ ತಕಥೈ ನರ್ತಿಸುತ್ತಾ ಬೆತ್ತಲು. ಈಗೆಲ್ಲವೂ ತಲೆಕೆಳಗು ಗೆದ್ದಲು ಹಿಡಿದ ಒಳಗು ಬೊಟ್ಟಿಟ್ಟ ಭಾರದ ತಟ್ಟೆ ಮೇಲೇರುತ್ತಲೇ ಕುಣಿಯುತ್ತದೆ. ಖಾಲಿ ತಕ್ಕಡಿ ತಟ್ಟೆ ಭಾರವಿಲ್ಲದೆಯೂ ಸರ್ರನೆ ಕೆಳಗಿಳಿ...

ನಂಬಬಾರದುದ ನೋಡಿದ ಜೀವದ ನೋವಿಗೆ ಸಮವಿದಯೇ? ಹುಸಿದು ಬೀಳಲು ಪ್ರೇಮದ ಚಪ್ಪರ ಕುಸಿಯದ ಎದೆಯಿದೆಯೇ ಒಲಿದು ಪೂಜಿಸಿದ ಕಲ್ಪವಲ್ಲಿ ಇದು ಒಣಗಿತೇಕೆ ಹೀಗೆ? ಬಯಸಿ ನೆಮ್ಮಿದಾ ಕಾಮಧೇನುವೇ ಬರಡಾಯಿತೆ ಹೇಗೆ? ತೀರಿಹೋಯಿತೇ ಅರೆಚಣದಲ್ಲೇ ಅಪ್ಸರೆಯಲಿ ಪ್ರೇಮ?...

ಹಸುಗಳ ಕದ್ದ ನೆಪಕೆ ಬೆಂಕಿಹೊತ್ತಿಕೊಂಡಿತು ಬೆಳವಡಿಗೆ ಧಗಧಗಿಸಿದ್ದು ಶಿವಾಜಿಡೇರೆಯೊಳಗೆ ಈಶ ಪ್ರಭುವಿನ ಮರಣ ನಕ್ಷತ್ರ ಜಾರಿದ ಹೊತ್ತು ಉಕ್ಕಿ ಉಕ್ಕಿ ಹರಿಯಿತು ಮಲ್ಲಮ್ಮಳ ಮಲಪ್ರಭೆ ಆಕಾಶ ತುಂಬೆಲ್ಲ ಧೂಳಿಪಟಗಳ ಅಬ್ಬರ ಕಾಲಡಿಯಲ್ಲಿ ಬೆಳವಡಿಯ ವೀರರರ...

ಹಿಡಿಯೊಳಗೇ ಅವಿತು ಮೆಲ್ಲಗೆ ಮಿಸುಕು ಜಾಡು ತಪ್ಪುವ ಭಯಕ್ಕೆ ಬೊಗಸೆ ಮೀರದ ಬದುಕು. ಏಕಿಂಥ ಕೀಳರಿಮೆ ಹಿಡಿಯಲ್ಲೇ ಹುಡಿಯಾಗುವ ಹುಚ್ಚು? ಕಣ್ತೆರೆದಷ್ಟೂ ಕಾಣುತ್ತದೆ ಬೆಳಕು ಮೊದಲು ದೀಪ ಹಚ್ಚು. ಹಾರು ಹಾರೆಲೆ ಹಾಡೇ ಭುವಿಯಿಂದ ಬಾನಿಗೆ ಅಳೆದುಬಿಡು ಎ...

ಕಾದು ಕಾದು ಸೀದು ಹೋದೆ ನಲ್ಲ ನಿನ್ನ ಬಯಸಿ ನನ್ನ ಮರೆತು ಎಲ್ಲಿ ಹೋದೆ ಹೊಸ ಪ್ರೀತಿಯನರಸಿ? ಒಂದೇ ಪ್ರೀತಿ ಮಾತಿಗಾಗಿ ಕಾದೆ ಹಿಂದೆ ದಿನ ದಿನಾ ಹಂಬಲಿಸಿದೆ ನೋಡಲೆಂದು ಮುಟ್ಟಲೆಂದು ಪ್ರತಿಕ್ಷಣ ಒಣಗಿದೆಲೆಯ ರಾಶಿ ನಡುವೆ ಬಿದ್ದ ಕಿಡಿಯ ರೀತಿ ಜ್ವಾಲೆ...

ಹಸಿರಂಚಿನ ಹಳದಿಪತ್ತಲು ಸುತ್ತಿ ಬೆಳ್ಳಿಯುಂಗರ ಕಾಲುಗೆಜ್ಜೆ ಬುಗುಡಿ ನಗುಮೊಗ ತುಂಬಿಕೊಂಡು ಕಣ್ಣರಳಿಸಿ ಜೀವನದಿಯ ಸುಖದ ಹರಿವು ಬೆಳ್ಳಿ. ಏನೆಲ್ಲ ನನ್ನ ನಿನ್ನ ನಡುವೆ ಎಂದು ತಾನಾಗಿಯೇ ತುಂಬಿಕೊಂಡ ಬಂದ ಮುಂಜಾವಿನ ಎಳೆಬಿಸಿಲಿನ ಉಸಿರಿನೊಳಗೆ ನೀರವ ...

ಬಿಳಿರಂಗೇ ನಿನ್ನ ಸುಮ್ಮನೆ ಕಾಡುವ ಕಪ್ಪು, ಕೆಂಪು, ಹಸಿರು, ಹಳದಿ, ನೀಲಿ ಹುಚ್ಚುಚ್ಚು ಗಾಢ ಬಣ್ಣಗಳದೇನು ತಪ್ಪು? ಕನಸುಗಳೂ ಇರಲಿ ವಾಸ್ತವವ ಒಪ್ಪು! ತಪ್ಪಿರುವುದೆಲ್ಲಿ? ಬಣ್ಣಗಳ ಅರ್ಥೈಸಲಾಗದ ನಿನ್ನ ಹುಂಬತನದಲ್ಲೇ? ತುಂಟ ಬಣ್ಣಗಳೇ ಬೇಡೆನುವ ನಿರ...

ಈ ಲೋಕದ ಕಪ್ಪು ಬೋರ್ಡಿನ ಮೇಲೆ ಕ್ರಾಂತಿ ಡಸ್ಟರ್ನಿಂದ ಓನಾಮಗಳ ಗುರುತುಗಳನ್ನು ಅಳಿಸಿಹಾಕಬೇಕು ಹೊಸ ಉಸಿರೆರೆದು ಅಕ್ಷರಗಳನ್ನು ಸೃಷ್ಟಿಸಬೇಕು ಮರಳಿ ಈ ದೇಶವನ್ನು ಶಾಲೆಗೆ ಹಾಕಬೇಕು *****...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....