
ಮಣ್ಣು ಮಣ್ಣೆಂದು ಹಳಿದರೆ ಬಂತೆ ಎಲ್ಲಿಂದ ಮರ ಹುಟ್ಟಿ ಬೆಳೆಯಿತಯ್ಯಾ ಸಾವು ಸಾವೆಂದು ಅಂಜೀಕೆ ಯೇಕೆ ಜೀವವು ಹುಟ್ಟಿದೆ ಸಾವಿನಿಂದಯ್ಯ || ನಿದ್ದೆ ಮಬ್ಬಂತಾ ಗೊಣಗುವಿಯಾಕೆ ನಿದ್ದೇನೆ ಇಲ್ದಂಥ ಎಚ್ಚರೆಂತು ದೌರ್ಬಲ್ಯ ದೌರ್ಬಲ್ಯ ಎಂದೇಕೆ ಕೊರಗುವಿ ದೆ...
ಯಾವ ಕಾಣದ ಭಾವಸೂತ್ರ ಅರಿವನು ಮೀರಿ ಕಟ್ಟಿ ಎಳೆಯಿತು ನನ್ನ ನಿನ್ನ ಬಳಿಗೆ? ಏನೋ ಕೇಳಿತು ನಿನ್ನ ಕಣ್ಣು, ಮಾವಿನ ಹಣ್ಣು ಕಳಚಿ ಬಿದ್ದಿತು ನನ್ನ ಮಡಿಲಿನೊಳಗೆ ಮುಗಿಲು ಸಾಗುವ ಲಯಕೆ ತೂಗಿ ಬೆಳೆಯಿತು ಬಯಕೆ ಮಂದಾರ ಬೀದಿಯಲಿ ದುಂಬಿಗಾನ ನರನಾಡಿಯಲ್ಲ...
ಎಲ್ಲಿಂದ ಬರ್ತೀಯೊ ಯಾವ ಗಳಿಗೆ ಬರ್ತೀಯೊ ಯಾವ್ಮಾತ್ನಾಗೆ ಹೊಳಿತಿಯೊ ತಿಳಿಯದಲ್ಲಾ ಹೊರಗೆಲ್ಲ ಹುಡುಕಿದ್ದೆ ಹುಡುಹುಡುಕಿ ದಣಿದಿದ್ದೆ ಯಾವಾಗ್ಲೋ ಒಳಬಂದು ಕುಂತಿಯಲ್ಲಾ ||೧|| ಹೆಣದಾಗೆ ಚೈತನ್ಯ ಮೈತುಂಬಿ ನಿಂತಂಗೆ ತುಂಬ್ಕೊಂಡೆ ಬಂದಿತ್ತು ಯಾವ್ದೋ ಶ...
ಚಿಂತೆ ಏತಕೆ ಗೆಳತಿ? ಜೀವ ಭಾವ ಹೆಗಲ ಹೂಡಿ ನೋವು ನಲಿವ ಕೀಲ ಮಾಡಿ ಸಾಗುತಿಹುದು ಬಾಳಿನ ಗಾಡಿ ಮೇಲು ಕೀಳು ಎನುವುದುಂಟೆ? ಹಳಿದು ಉಳಿದ ಹಮ್ಮು ಉಂಟೆ? ಬದುಕೇ ಸಾವಿನ ಒಲೆಯ ಕುಂಟೆ ಇಷ್ಷ ಕಷ್ಟ ಯಾಕೆ ದೂರು? ಈ ಭೂಮಿ ನಾಲ್ಕು ದಿನದ ಊರ ತಾಳಿ ನಿಂತು ...
ಯಾವುದು ಸಿಹಿಯೋ ಯಾವುದು ಕಹಿಯೋ ನೀನಿಲ್ಲದೆ ರುಚಿ ಎಲ್ಲಿ? ಯಾವುದು ಸ್ವರವೋ, ಯಾವುಮ ಶ್ರುತಿಯೋ ನೀನಿಲ್ಲದೆ ಅರಿವೆಲ್ಲಿ? ಸುತ್ತ ಇದ್ದರೂ ನದಿ ವನ ಕಾಡು ಆ ಚೆಲುವಿಗೆ ನಾ ಕುರುಡ; ನೀನಿದ್ದರೆ ಮರುಭೂಮಿಯಾದರೂ ಅಮೃತಕೆ ಹಾರುವ ಗರುಡ. ಎಲ್ಲಿದೆ ರುಚಿ...
ನೀನಿಲ್ದೆ ಸಂಪತ್ತು ಶವದಲಂಕಾರಾ ನೀನಿದ್ರೆ ಸುಡುಗಾಡು ಅರಮನೆಯಾಕಾರ ||ಪ|| ನೀನಿಲ್ಲೆ ತಣ್ಣೀರ ಬಾವೀಲಿ ಮುಳುಗಿದರು ಕುದಿವಂಥ ಎದೆಗುದಿ ಒಳಹೊರಗ ನೀನಿದ್ರೆ ಬಿಸಿಲಿನ ಬೇಗೆಯ ಬೆವರೂ ತಣ್ಣೀರ ಸ್ನಾನವು ಏನ್ ಬೆರಗ ||೧|| ನೀನಿದ್ರೆ ತುಂಬಿದ ಮನೆಯ...
ತಾಗದಿರಲಿ ಮುನಿಯ ಕೋಪ* ಕಾಡದಿರಲಿ ಶಾಪ ಕಾಯುತಿರುವ ಪ್ರೇಮಿಯ ತೋಳಿನಲ್ಲಿ ಬೀಳು ನಲ್ಲನೆದೆಯ ಕಂಪಿಸುವ ಮೊಲ್ಲೆಯಾಗಿ ಏಳು ಕಾsಳಾಗಿ ಹೋsಳಾಗಿ ಮುಚ್ಚಿ ಬಿಚ್ಚಿ ಆಡು ಮೇವಾಗಿ ಮೊಗೆಯಾಗಿ ದಾಹಗಳಿಗೆ ಊಡು ಪ್ರಿಯನ ಬಯಕೆಯುತ್ಸವಕೆ ಕಳಶಗಳನು ನೀಡು ಅವನಾಸ...
ಕರೆಯೂ ಬಂದದ ಕಾಣೇ ಅವ್ವ ಕೇಳು ಬಾರೆ ಕೇಳೆ ಅವ್ವ ಮಲಗಿದವನ ಎಬ್ಬಿಸಿ ಬಿಡ್ತು ಕುಂತಿರುವವನ ಕುಲುಕಿ ಬಿಡ್ತು ನಿಂತಿರುವವನ ಏರಿಸಿ ಬಿಡ್ತು ಏರಿಹಾರಿ ಕುಣಿವಂಗಾಯ್ತು ಯಾವುದೋ ಲೋಕದಾಗ ಸುತ್ತಿದಂಗಾಯ್ತು ಯಾವ್ದೊ ಸೀಮೇ ಸೇರಿದಂಗಾಯ್ತು ಯಾವುದೋ ಜೇ...
ನಿನ್ನ ಕನಸುಗಳಲ್ಲಿ ಮುಳುಗಿಹೋದೆನು ನಾನು ಎತ್ತಿ ಕಾಪಾಡುವರು ಯಾರು? ಸವೆನೆನಪಿನಾಳದಲಿ ಹುಗಿಮ ಹೋಗಿರುವೆನು ಅಗೆದು ತೆಗೆಯುವರಿಲ್ಲವೇನು? ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನ ಹಿಡಿದು ನಿಲ್ಲಿಸುವವರು ಯಾರು? ಕ್ರೂರ ವಿರಹಾಗ್ನಿಯಲಿ ಬೇಯುತಲೆ ಇರು...













