ತಾಗದಿರಲಿ ಮುನಿಯ ಕೋಪ*
ಕಾಡದಿರಲಿ ಶಾಪ

ಕಾಯುತಿರುವ ಪ್ರೇಮಿಯ
ತೋಳಿನಲ್ಲಿ ಬೀಳು
ನಲ್ಲನೆದೆಯ ಕಂಪಿಸುವ
ಮೊಲ್ಲೆಯಾಗಿ ಏಳು

ಕಾsಳಾಗಿ ಹೋsಳಾಗಿ
ಮುಚ್ಚಿ ಬಿಚ್ಚಿ ಆಡು
ಮೇವಾಗಿ ಮೊಗೆಯಾಗಿ
ದಾಹಗಳಿಗೆ ಊಡು

ಪ್ರಿಯನ ಬಯಕೆಯುತ್ಸವಕೆ
ಕಳಶಗಳನು ನೀಡು
ಅವನಾಸೆಯ ಮೆರವಣಿಗೆಗೆ
ಪಲ್ಲಕ್ಕಿಯ ಹೂಡು

ಉಣಿಸಾದರು ಮಾನುಷಗೆ
ಉಣಿಸು ಮಾವು ಜೇನು
ಪ್ರಿಯನ ಕೋಟಿ ಕನಸ ತಣಿಸಿ
ಆಗು ಕಾಮಧೇನು

* ಊರ್ವಶಿ ನಾಟಕದ ಒಂದು ಗೀತೆ
******

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)