ಸರಿಗಾಣೆನು ಧರಣಿಯೊಳಗಮ್ಮ

ಸರಿಗಾಣೆನು ಧರಣಿಯೊಳಗಮ್ಮ ಕರುಣೆ ಎಲ್ಲಮ್ಮ ||ಪ||

ಏನು ಹೇಳಲಿ ನಿನ್ನ ಕೌತುಕವ ನೀನಾದಿಯಲ್ಲಿ ತುಂಬಿ ತುಳುಕಿದಿ
ಏಕೆಂಬ ಭಾವ ||ಅ.ಪ.||

ಪ್ರಥಮ ಕೃತಯುಗದಲ್ಲಿ ಪರಶಿವಗೆ ಸತಿಯಾಗಿ ನೀನು
ನಿತ್ಯ ಮೆರೆದೆ ರಜತಗಿರಿಯೊಳಗೆ
ಕೃತಕ ಮದುಕೈಟಭರ ಪ್ರಾಣ ಹತವ ಮಾಡಿದಿ ಯುದ್ಧ ಮುಖದಲಿ
ಹಿತವು ತೋರಿದಿ ಸುರರ ಸಮೂಹಕೆ ಪ್ರತಿಯು ಉಂಟೆ
ನಿನ್ನ ಮಹಾತ್ಮೆಗೆ? ||೧||

ತ್ರೇತಾಯುಗದಲ್ಲಿ ಭೂಮಿಯೊಳು ಜನಿಸಿ ರಾಘವನ ಸ್ತ್ರೀಯೆನಿಸಿ
ಕೋತಿ ಬಳಗವ ಕೂಡಿಕೊಂಡು ಸೇತುಬಂಧನ ಕಟ್ಟಿ ಕಲಹದಿ
ಪಾತಕಿ ರಾವಣನ ಕುಲವನು ನಾಶಮಾಡಿಸಿದೆಲ್ಲ ತತ್ವದಿ ||೨||

ದ್ವಾಪರ ಯುಗದಲ್ಲಿ ದೃಪದನಿಗೆ ನೀ ಪುತ್ರಿಯಾಗಿ
ಪತ್ನಿಯಾದೆ ಪಂಚಪಾಂಡವರಿಗೆ
ಪಾಪಿ ಕೌರವ ಕರ್ಣ ದುಶ್ಯಾಸನರು ತಾಪಕೊಡಲು ನಿನ್ನ ಜನ್ಮಕೆ
ಕೋಪ ಜ್ವಾಲೆಯ ತಾಳಿ ನರಕದ ಕೂಪದೊಳು
ಕುರುಕುಲವ ಕೆಡುಹಿದಿ ||೩||

ಕಲಿಯುಗದೊಳಗಾದಿ ಎಲ್ಲಮ್ಮ ಸುಲಲಿತದಿ
ಜಮದಗ್ನಿ ಋಷಿಗೆ ಭಾರ್ಯಳಾದೆಮ್ಮ
ಕಲಹಕಾರಿ ಕಾರ್ತಿವೀರ್ಯನ ತಲೆಯ ಕೊಯ್ಸಿಬಿಟ್ಟಿಯಮ್ಮ
ಖಲಿಂದರ ಶಿಶುನಾಳಧೀಶಗ ಒಲಿದು ಪ್ರಿಯ ಮಾತೆಯಾದೆ
ಸರಿಗಾಣೆ ಧರಣಿಯೊಳಗಮ್ಮ ||೪||

* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲೀ ಕಾಣೆ ಎಲ್ಲೀ ಕಾಣೆ
Next post ತತ್ವಬೋಧದೊಳಗಿದ್ದು ಭವಬಾಧೆಯನು ಗೆದ್ದು

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…