ಚಿಂತೆ ಏತಕೆ ಗೆಳತಿ?

ಜೀವ ಭಾವ ಹೆಗಲ ಹೂಡಿ
ನೋವು ನಲಿವ ಕೀಲ ಮಾಡಿ
ಸಾಗುತಿಹುದು ಬಾಳಿನ ಗಾಡಿ

ಮೇಲು ಕೀಳು ಎನುವುದುಂಟೆ?
ಹಳಿದು ಉಳಿದ ಹಮ್ಮು ಉಂಟೆ?
ಬದುಕೇ ಸಾವಿನ ಒಲೆಯ ಕುಂಟೆ

ಇಷ್ಷ ಕಷ್ಟ ಯಾಕೆ ದೂರು?
ಈ ಭೂಮಿ ನಾಲ್ಕು ದಿನದ ಊರ
ತಾಳಿ ನಿಂತು ಮುಂದೆ ಸಾಗು

ಬಯಕೆ ಜನಿಸಿ ನಾಕ ನರಕ
ಸಾಕು ಬೇಕು ಎಂಬ ತವಕ
ಇರುಳು ಬಂದು ಕವಿವ ತನಕ

******