ಒಡಕ ಮಡಿಕೆಯಂತೆ ಒಡೆದು ಹೋಗುವ, ಹಡಿಕಿಕಾಯವ ನೆಚ್ಚಿ, ತಟತಟನೆ ತಾಗಿ, ಮಠದ ಬೆಕ್ಕಾಗಿ ತಿಟ್ಟನೆ ತಿರುಗಿ, ಬಟ್ಟೆಯ ಲಿಕ್ಕಿ ಕಡಿವ ಕಳ್ಳನನರಿಯದೆ, ತಿಂಬ ಹುಲಿಯನರಿಯದೆ, ಒಡವೆಯ ಗಳಿಸಿಹೆನೆಂದು ಒಡೆಯನ ಮರೆದು, ತನ್ನ ಮಡದಿಮಕ್ಕಳಿಗೆಂದು ಅವರ ಒಡವೆರೆ...

ಚುಮು ಚುಮು ನಸಕು ಸುಂಯ್‌ಗುಡುವ ಅಶೋಕ ವೃಕ್ಷಗಳು ರಾತ್ರಿಯಿಡೀ ಎಣ್ಣೆಯಲಿ ಮಿಂದೆದ್ದ ಗಿಡ ಗಂಟೆ, ಗದ್ದೆ ಮಲ್ಲಿಗೆ ಸಂಪಿಗೆ ಗುಲಾಬಿಗಳು ಕೊರಡು ಕೊನರುವಿಕೆಯೆ ಸಾಲುಗಳು…. ಚಳಿ ಚುಚ್ಚಿ ಮುದುರುವ ಕಂದಮ್ಮಗಳಿಗೆ ಕನಸು ಹೋದಿತೆನ್ನುವ ಬೇಸರ ತಿ...

(ಹುಡುಗಿಯರ ನಗು ಕೇಳಿ ಬರೆದುದು) ಮಲ್ಲಿಗೆಯ ಮೊಗ್ಗುಗಳ ರಾಸಿ ಅರಳಿರಲದರ ನಡುವೆ ಅರೆ ಎಚ್ಚರದಿ ಇರವನೇ ಅರೆಮರೆತು ಕಂಪಿನಿಂದಾತ್ಮವನು, ಹೃದಯವನು, ತುಂಬಿಸುತ ಬೇರೊಂದು ವಿಶ್ವವನೆ ಸೇರಿದಂತಾಗುವುದು ನಿಮ್ಮ ಕಿಲಕಿಲ ನಗುವು ದೂರದಿಂ ಗಾಳಿಯಲಿ ತುಂಬಿ ...

ಪ್ರಸನ್ನ ಶರದಿಂದುಮಂಡಲದಂತೆ ‘ಶ್ರೀ’ ಗುರುವೆ ನೀವೆನ್ನ ಹೃದಯಪೀಠವನೇರಿದಂತೆನಗೆ ನಿಮ್ಮ ಸಂಸ್ಮರಣೆ. ನಿಮ್ಮಿಂದ ಪಂಪನ ಜೊತೆಗೆ ಬಂದರಾ ಪೇಕ್ಸ್‌ಪಿಯರ್ ಸಾಫೊಕ್ಲೀಸ್ ಭಾಸರೆ; ದೈವಹತ ಧನ್ಯಾತ್ಮನಾದನಶ್ವತ್ಥಾಮನ್. ಇತ್ತ ‘ಇಂಗ್ಲಿಷ್ ಗೀತೆ’ ಹೊಸತೊಂದು ...

ತಟಪಟ ತಟ್ಟುತ ಒಟ್ಟಿನಲಿ ಕೋಲಿಂ ಕೆಲವರು ಹೊಲದಲ್ಲಿ, ಕಿಣಿಕಿಣಿ ಮಣಿಯಿಂ ಕುಣಿಸುತಲಿ, ಗಲಗಲ ಬಾಲರ ಒಲಿಸುತಲಿ. ಡಂ ಢಂ ಡಾಂಬರ ಗಡಗಡಿಸಿ ಪೆಂಪಾಪೆಂಪೆಂದು ಪೇಳಿರಿಸಿ, ಲಲ್ಲಾಲ್ಲೆನ್ನುತ ಸೊಲ್ಲನೊಂದು ಬಾಯೊಳು ಸಾಯಲು ಹಾತೊರೆದು! ರತ್ನದ ಚಿನ್ನದ ಬಣ್...

ಮರ್ತ್ಯದ ಮನುಜರು ಸತ್ತರೆನುತ್ತ, ಕತ್ತೆಲೆಯೊಳು ಮುಳುಗಿ, ಈ ಮಾತು ಕಲಿತುಕೊಂಡು ತೂತು ಬಾಯೊಳಗೆ ನುಡಿದು ಕಾತರಿಸಿ ಕಂಗೆಟ್ಟು, ಹೇಸಿಕೆಯ ಮಲದ ಕೋಣನ ಉಚ್ಚೆಯಬಾವಿಗೆ ಮಚ್ಚಿ ಕಚ್ಚಿಯಾಡಿ, ಹುಚ್ಚುಗೊಂಡು ತಿರುಗುವ ಕತ್ತೆ ಮನುಜರ ಮೆಚ್ಚರು ನಮ್ಮ ಅಪ್ಪ...

ಆಕಾಶದ ರಾವುಗನ್ನಡಿಯೊಳಗೆ ನನ್ನ ನಾ ದಿನನಿತ್ಯ ನೋಡಿಕೊಳ್ಳುತ್ತೇನೆ ಪರೀಕ್ಷಿಸಿ ಉತ್ತರಿಸಿಕೊಳ್ಳುತ್ತೇನೆ ನಸುಕಿನ ಮುಗ್ಧ ನಿದ್ದೆಯಿಂದೆದ್ದಾಗ ನನ್ನೊಂದಿಗೆ ಮಂದಸ್ಮಿತ – ಉಷೆ ಬರುತ್ತಾಳೆ ಹೊಸ್ತಿಲಿಗೆ ನೀರು ಹಾಕಿ ನಮಸ್ಕರಿಸುವಾಗ ಬಾಳೆ ತೆ...

ಎಣ್ಣೆಗೆಂಪಿನ ಮೇಲೆ ಹಾಲ್ಕೆನೆಯ ಲೇಪನದ ಕೆನ್ನೆಯೇನಲ್ಲ, ಹೂ ಮೃದುತೆಯೇನಿಲ್ಲ! ತುಟಿ ಬಹಳ ಕೆಂಪಿಲ್ಲ!  ಕಂಡೊಡನೆಯೇ ಸೆಳೆವ ಮೆಲುನಗುವು ಅದರ ಮೇಲ್ಸುಳಿದುದೇ ಇಲ್ಲ! ಮಾತುಗಳಲೇನಂಥ ಮಾಧುರ್ಯವೇನಿಲ್ಲ ಬೆಡಗು ಬಿನ್ನಾಣಗಳು ಚೆಲುವಿಕೆಯು ಇಲ್ಲ! ಕವಿಗಳ...

‘ಮಾಸ್ತಿಯವರಾಸ್ತಿ ಆ ಸಣ್ಣ ಕತೆಗಳೆ’ ಎಂದು ಸಾಂಬಶಾಸ್ತ್ರಿಗಳ ಸಿದ್ಧಾಂತ. ಕೇಶವಮೂರ್ತಿ ‘ಶ್ರೀನಿವಾಸರ ಕವಿತೆ ಒಣ ಗದ್ಯವೇ ’ ಎಂದು ಎಗರಿ ಬೀಳುವನು. ಈ ಸಂಶಯವೆ ಕವಿಕೀರ್ತಿ. ಪರಿಚಿತ ಕವಿಗಳೆಲ್ಲ ಬರಿದೆ ರಾರಾಜಿಪರು ಪ್ರಾಚೀನ ಪ್ರಾರಬ್ಧ ಹೊತ್ತು. ಅ...

ಅಯೋಧ್ಯೆ ರಾಜ್ಯದಲಿ ಇನಕುಲದ ಖ್ಯಾತಿಯಲಿ ಧರ್ಮಾಭಿಮಾನದಲಿ ಬಾಳಿದನು ನೋಡಾ. ದಶರಥನೆಂದಾತನೀ ನೃಪ ಶ್ರೇಷ್ಠನೆಂಬಂತೆ ಪಾಲಿಸುತ ದೇಶವನು ಆಳಿದನು ಕೇಳಾ. ರಾಜಾಧಿರಾಜನೂ ಭುವನೈಕ ವಂದ್ಯನೂ ಸಿರಿಲೋಲ ಮಾನ್ಯನೂ ರವಿಕುಲದ ಪ್ರಭುವು; ಎಂದೆನಿಸಿ ತ್ರಿಪತ್ನಿ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....