ರೊಕ್ಕದ ರೇಸು ಹೊಂಟೈತೆ ತಗೊ ಸಿಕ್ಕಿದ ದಾರಿಯೆ ಹಿಡಿದೈತೆ ನನಗೇ ತನಗೇ ಎನ್ನುತ ನುಗ್ಗಿದೆ ಬಾಚುತ ದೋಚುತ ಗಳಿಸುತ ಬಲಿಯುತ ಓಡಲಾಗದೇ ಕಂಗೆಟ್ಟವರನು ತೊತ್ತಳ ತುಳಿಯುತ ಸಾಗೈತೆ ಹೊಟ್ಟೆಗಿಲ್ಲದೇ ಬಟ್ಟೆಗಿಲ್ಲದೇ ಗೂಡು ಇಲ್ಲದೆ ಪಾಡು ಇಲ್ಲದೆ ನರಳುವ ಮ...

ತುಂಬಿದ ಕಪ್ಪನೆ ನೇರಿಳೆಯಂತೆ ಮಿರಿ ಮಿರಿ ಮಿಂಚುವ ಮಗುವೊಂದು ಚಿಂದಿಯನುಟ್ಟಿದೆ, ಚರಂಡಿ ಬದಿಗೆ ಮಣ್ಣಾಡುತ್ತಿದೆ ತಾನೊಂದೆ ದಾರಿಯ ಎರಡೂ ದಿಕ್ಕಿಗೆ ವಾಹನ ಓಡಿವೆ ಚೀರಿವೆ ಹಾರನ್ನು, ಮಗುವಿನ ಬದಿಗೇ ಭರ್ರನೆ ಸಾಗಿವೆ ನೋಡದಂತೆ ಆ ಮಗುವನ್ನು! ಅರೆ ಕ...

ನೀಲಿ ಗುಲಾಬಿ ಹಳದಿ ಕಪ್ಪು ಬಣ್ಣಗಳ ಮೋಡಿನ ಬಟ್ಟೆ ತೊಟ್ಟು ಹೊರಟ ನಿನ್ನ ಅದೆಷ್ಟೋ ಸಲ ಕಣ್ಣು ಕವಿಚಿ ನೋಡಿದ್ದು ಹಸಿರೇ ಹಸಿರು. ಹಸಿರು ಕುದುರೆಯನೇರಿ ಬಿಸಿಲು ಕೋಲುಗಳನು ದಾಟಿ ಆಕಾಶದಾರಿಯಲಿ ಹಾಯ್ದು ನಿನ್ನ ಕಾಣಲು ಕಣ್ಣ ಕಿಟಕಿ ತೆರೆದರೆ ಕಣ್ತುಂ...

ಹಿತ್ತಲ ಬಾಗಿಲು ಬಹು ದಿನಗಳಿಂದ ಮುಚ್ಚಿಯೇ ಇತ್ತು ಇಂದು ಅದೇಕೋ ಬಿಸಿಲು ಹೆಚ್ಚಾಯಿತೆಂದು ತೆಗೆಯಬೇಕಾಯಿತು ಉಸಿರುಗಟ್ಟಿದಂತಿದ್ದ ಆ ಕೋಣೆಯೊಳಗೆ ಸ್ವಲ್ಪ ಗಾಳಿ ಸ್ಚಲ್ಪ ಬೆಳಕು ಸುಳಿದಾಡಿದಂತೆನಿಸಿ ಜೀವ ನಿರಾಳವಾಯ್ತು ಕಂಪ್ಯೂಟರ್ ಪರದೆಯನ್ನೇ ವಿಶ್...

ಕೆಸರಲಿ ಕಾಯುವ ಕಮಲದ ಕೆನ್ನೆಗೆ ಬಾನಿನ ಹನಿಮುತ್ತು ಮಿಸುಕಲು ಬಾರದ ಬೆಟ್ಟದ ನೆತ್ತಿಗು ಹೂಬಿಸಿಲಿನ ಸುತ್ತು ಬಿರಿಯಲು ಕಾದಿಹ ಮೊಗ್ಗಿನ ಬದಿಗೇ ದುಂಬಿಯ ದನಿಹೊರಳು ಕಾಯಿಯ ನೆತ್ತಿಯ ತಾಯಿಯ ಹಾಗೆ ಕಾಯುವ ಎಲೆನೆರಳು ಕಾಡಿನ ಮಡಿಲಲಿ ಸಾವಿರ ಜೀವ ಎಲ್ಲ...

ಸಪ್ಪುಳಾಗುತಿಹುದು ಅಲ್ಲೀ ಅಪ್ಪ ಬಂದನೇನೊ ನೋಡೂ ಒಪ್ಪದಿಂದ ಪಾದ ತೊಳೆದು ಅರ್ಪಿಸುವೆನು ಕಾಣಿಕೆಯನು ಘಲು ಘಲೆಂಬುದೇನೊ ಓಹೋ ನಳಿನನಾಭ ಬಂದನೇನೊ ಒಳಗೆ ಕರೆದು ಕರವ ಮುಗಿದು ಬೆಳಗಿಸುವೆನು ಧೂಪ ದೀಪ ಬಂಧುವೆನ್ನ ಭಾಗ್ಯನಿಧಿಯಗೊ ಬಂದನೇನೊ ನೋಡು ನೋಡು ...

ಹ್ಯಾಮ್ಲೆಟ್ಟು ನಾನಾಗಿ ಕ್ವಿಕ್ಸೋಟನಾಗಿ ಬಣ್ಣಬಣ್ಣದ ಉದ್ದ ಟೊಪ್ಪಿಗೆ ಧರಿಸಿ ಆಡಿದ್ದು ಮೂರು ಬೀದಿಗಳ ಮಧ್ಯೆ ನಿಂತು ಸಾಕ್ರೆಟಿಸ್ ಮರೆತದ್ದು ನಾನು ಸಾರುವೆನೆಂದು ಬೊಗಳಿದ್ದು ಈ ಮನೀಷೆ ಈ ಒಳತೋಟಿ ಅನುಭವಿಸಿ ಅನುಭವಿಸಿ ಸೋತು ಸುಸ್ತಾಗಿ ಯಶೋಧರೆಯ ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....