ಹಸಿವಿನ ಕಾಲಿಗೆ ಬಿದ್ದು ಅದರ ಪಾರಮ್ಯವನ್ನು ಒಪ್ಪಿಕೊಂಡಿದ್ದ ರೊಟ್ಟಿ ಅದರ ಪರಿಧಿಯೊಳಗಿದ್ದೇ ಎಲ್ಲೆಗಳನ್ನು ಮೀರುತ್ತದೆ. ದಾಖಲಾಗಿದ್ದು ಸ್ಥಿರವೆಂಬ ವಿಭ್ರಮೆ ಹಸಿವೆಗೆ ಮೆಲ್ಲಗೆ ಸೀಮೆ ದಾಟಿದ ರೊಟ್ಟಿ ಅರಿವಿಲ್ಲದೇ ದಾಖಲೆ ಮೆಟ್ಟುತ್ತದೆ. ಆಕಾಶ ಮ...

ಎಲ್ಲಾ ಹಕ್ಕಿಗಳು ಹಾರಿ ಹೋದವು ಬರಡು ಮರದಲಿ ಹಸಿರು ಕಾಣದೆ ಎಲ್ಲಾ ಚಿಕ್ಕಿಗಳು ಮಾಯವಾದವು ಪ್ರೀತಿ ಕಳೆದ ನೀಲಿ ಆಗಸದಲಿ. ಅಂಬರದ ಮುನಿಸಿಗೆ ತೆರೆಯಲಿಲ್ಲ ಅರಿವಿನ ರೆಕ್ಕೆಗಳು ಪಟಪಟ ಅಕ್ಷಗುಂಟ ಇಳಿದ ಹನಿಗಳು ಮೋಡವಾಗಲಿಲ್ಲ ಬಿರು ಬಿಸಿಲಿನಲಿ. ಹಾರಿ...

ಕಾನ್ಪುರದ ಎಲ್ಲ ಬೀದಿಗಳಲ್ಲಿ ಎಲ್ಲ ಮೆನಗಳಲ್ಲಿ ಮನೆಯ ಮಾಳಿಗೆಯಲ್ಲಿ ಮೂರು ಹೆಣಗಳು ತೂಗಿದವು ನಿಶ್ಚಿಂತೆಯಲ್ಲಿ. ಗುಲಾಬಿಯಷ್ಟೇ ಮೃದು ಮನಸಿನ ಜೀವಿಗಳು ಸಾವಿನಲ್ಲೂ ನೋವಿನ ಮುಖವನ್ನೇ ಹೊತ್ತಿದ್ದವು. ಮದುವೆಯ ಮಾರುಕಟ್ಟೆಯಲ್ಲಿ ಬಿಕರಿಯಾಗದ ಜೀವಗಳು...

ಕಿಡಿಯೊಂದನಡಗಿಸೆ ನುಡಿಬಲೆ ಹೂಡಿ ಗುಡುಗಾಡಿ ಜಗವೆಲ್ಲ ಸುತ್ತಿತು ಹಾಡು ಸಿಡಿಯುತ ನುಡಿಗಳು ಸುಳಿರಾಗವುಗುಳೆ ಒಡಲುರಿಯೆಂದಿತು ಧರಣಿಯು ಹೊರಳಿ ಚಿಗಿಯಿತಿದಾಶೆಯ ಕಿಚ್ಚಿದು ಕಿಚ್ಚು ಚಿಗಿಯಿತು ಕವಿಮನದಾಶೆಯ ಕಿಚ್ಚು ಇನ್ನೊಂದು ಕಿಡಿಯಿಟ್ಟೆ ರೇಖೆ ಬಣ...

ಪದಗಳೆಂದರೆ ನನಗೆ ಅಚ್ಚುಮೆಚ್ಚು ದಿನಂಪ್ರತಿಯ ಅಭ್ಯಾಸವೂ ಪದಗಳ ಹೊಸೆಯುವುದರಲ್ಲಿ, ಮಸೆಯುವುದರಲ್ಲಿ: ಆದರೆ ಆ ಪದಗಳಿಗೆ ಶಬ್ದಕೋಶದಿ ಅರ್ಥಗಳ ಹುಡುಕಿ ಸೋತಿದ್ದೇನೆ. ಹೊಸ ಹಾಡಿಗೆ ಕುಣಿದಾಡುವ ನವಿಲುಗಳ ದಾರಿ ಕಾಯುತ್ತ, ನಾನೇ ನವಿಲಾಗಬಯಸುತ್ತೇನೆ. ...

ನವ್ಯದಪಿತಾಮಹರೆಂದು ವಿಮರ್ಶಕಜನ ಕಟ್ಟಿದರೂನು ನಿಮಗೆ ಪಟ್ಟ ಏರಲಿಲ್ಲ ನೀವಾ ಅಟ್ಟ ಪಂಥಗಳ ಕಟ್ಟುವರು ಕಟ್ಟುತ್ತಲೇ ಇರಲು ಹಿಡಿದಿರಿ ನಿಮ್ಮದೆ ದಿಕ್ಕು ನೀವು ಸುಮ್ಮನೆ ನಕ್ಕು ನವ್ಯ ನವೋದಯ ದಲಿತ ಬಂಡಾಯ ಇತ್ಯಾದಿ ಸರ್ವರನು ನಾಚಿಸುವ ತರ ಗ್ರಹಿಸಿದ್ದ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...