ಹಸಿವಿನ ಕಾಲಿಗೆ ಬಿದ್ದು
ಅದರ ಪಾರಮ್ಯವನ್ನು
ಒಪ್ಪಿಕೊಂಡಿದ್ದ ರೊಟ್ಟಿ
ಅದರ ಪರಿಧಿಯೊಳಗಿದ್ದೇ
ಎಲ್ಲೆಗಳನ್ನು ಮೀರುತ್ತದೆ.
ದಾಖಲಾಗಿದ್ದು ಸ್ಥಿರವೆಂಬ
ವಿಭ್ರಮೆ ಹಸಿವೆಗೆ
ಮೆಲ್ಲಗೆ ಸೀಮೆ ದಾಟಿದ ರೊಟ್ಟಿ
ಅರಿವಿಲ್ಲದೇ ದಾಖಲೆ ಮೆಟ್ಟುತ್ತದೆ.
ಆಕಾಶ ಮುಟ್ಟುತ್ತದೆ.
*****
ಹಸಿವಿನ ಕಾಲಿಗೆ ಬಿದ್ದು
ಅದರ ಪಾರಮ್ಯವನ್ನು
ಒಪ್ಪಿಕೊಂಡಿದ್ದ ರೊಟ್ಟಿ
ಅದರ ಪರಿಧಿಯೊಳಗಿದ್ದೇ
ಎಲ್ಲೆಗಳನ್ನು ಮೀರುತ್ತದೆ.
ದಾಖಲಾಗಿದ್ದು ಸ್ಥಿರವೆಂಬ
ವಿಭ್ರಮೆ ಹಸಿವೆಗೆ
ಮೆಲ್ಲಗೆ ಸೀಮೆ ದಾಟಿದ ರೊಟ್ಟಿ
ಅರಿವಿಲ್ಲದೇ ದಾಖಲೆ ಮೆಟ್ಟುತ್ತದೆ.
ಆಕಾಶ ಮುಟ್ಟುತ್ತದೆ.
*****