ಈ ದೇಹವು ನಿನ್ನದೇ ಈ ಪ್ರಾಣವು ನಿನ್ನದೆ| ನನ್ನ ಜೀವನದಲಿ ನೀ ಯಾವ ನಿರ್ಧಾರವನು ನಿರ್ಧರಿಸಿದರೂ ಸರಿಯೇ ನಾನು ನಿನ್ನವನೆಂಬ ಆತ್ಮವಿಶ್ವಾಸವಿದೆ ಎನಗೆ|| ನಾನು ನಿಂತಿಹ ಈ ನೆಲ, ಕುಡಿಯುತಿಹ ಈ ಜಲ ಸೇವಿಸುತಿಹ ಗಾಳಿ ಇದೆಲ್ಲದು ನಿನ್ನದೇ| ನಿನ್ನ ಪಂಚ...

ಬಲು ಕಷ್ಟ ಕವನದ ಹಾದಿಯದರೊಳು ವನದ ಸ ವಾಲುಗಳದನಷ್ಟಿಷ್ಟು ಕೋಲು ಕತ್ತಿಯೊಳುತ್ತರಿಸು ತಲೇರುವೆತ್ತರದ ಖಷಿಯನಂತೆ ಪೇಟೆ ಬೀದಿಯೊ ಳೆಳೆಸಲಳವಿಲ್ಲವಾ ಕಾಡೆ ಪೇಟೆ ಬಲ ಮೂಲ ವಿ ರಲೆಮ್ಮ ಕವನವಾಗಲಿ ಜಟಿಲ, ಸಲಿಲಕೆ ಮೂಲ – ವಿಜ್ಞಾನೇಶ್ವರಾ *****...

ದೀಪ ಬಾಳಿನ ಸಂಜ್ಞಾರೂಪ. ಬುದ್ಧಿ ಉಪಯೋಗಿಸಿ ತೆರೆ ಮರೆ ಮಾಡಿ ಜೋಪಾನ ಮಾಡಿ ಬೆಳಗುತ್ತದೆ; ಆನಂದ ತರುತ್ತದೆ. ಅಜಾಗರೂಕರಾಗಿ ಕೆಟ್ಟಗಾಳಿ ತುಸುವೆ ಒಳ ತೂರಲು ಬಿಟ್ಟಿರಿ ಅಂಕೆ ಶಂಕೆ ತಪ್ಪಿ ಅಡ್ಡಾದಿಡ್ಡಿ ಉರಿಯುತ್ತದೆ. ಹೊಯ್ದಾಡಿ, ನರಳಾಡಿ ಎಣ್ಣೆ, ...

ಮಗನಿಗೆ ದೊಡ್ಡ ವಹಿವಾಟು ಮುಂಬಯಿಯಲ್ಲಿ ಮಗಳು ಮದುವೆಯಾಗಿ ಮಕ್ಕಳೊಂದಿಗೆ ಕಲ್ಕತ್ತೆಯಲ್ಲಿ ಹಣ್ಣು ಹಣ್ಣು ಮುದುಕ-ಮುದುಕಿ ಸಾಗರದ ಒಂದು ಮೂಲೆ ಚಿಕ್ಕ ಹಳ್ಳಿಯಲ್ಲಿ ದೊಡ್ಡ ಮನೆ- ಮಂಕಾಗಿ ಉರಿಯುವುದು ದೀಪ ಭರವಸೆಯಲ್ಲಿ ಸುಳಿದಾಡುವುದು ನಿರೀಕ್ಷೆಯ ದೆ...

ನನ್ನ ಪ್ರೇಮದ ಕಡ ಎಷ್ಟು ದಿನ ಇಟ್ಟುಕೊಳ್ಳುವಿ ನೀ ಬಿದಿರಕೋಲಿನ ಸಖನೇ ನಾಳೆಗಾದರೂ ತೀರಿಸಿಬಿಡು ಹನಿಮುತ್ತಿದ ಕೆಂದಾವರೆಗಳು ನನ್ನ ತುಟಿಯಲ್ಲರಳಲಿ. ಬಿದಿರುಗಣೆ ಉಲಿತ ಸದ್ದಾಗದಂತೆ ನನ್ನಾತ್ಮವನ್ನೆ ಕಬಳಿಸುತ್ತಿದೆ. ಯಮುನೆ ತೀರದ ಕುಳಿರ್‍ಗಾಳಿ ತಣ...

ಎಲ್ಲ ಮುಗಿದ ಮೇಲೆ ಅವಳನ್ನು ಮಣ್ಣಿಗಿಟ್ಟರು. ಹೂ ಬೆಳೆದವು, ಚಿಟ್ಟೆ ಹಾರಿದವು ಅಲ್ಲಿ. ಹೆಣ ಮಣ್ಣಿಗಿಟ್ಟಾಗ ಗುರುತು ಕೂಡ ಬೀಳಲಿಲ್ಲ. ಅಷ್ಟು ಹಗುರವಾಗಲು ಅವಳೆಷ್ಟು ನೋವು ತಿಂದಿದ್ದಳೋ! ***** ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht...

ಕಳ್ಳ ನೋಟ ಬೀರಿ ಎನ್ನ ಮನವ ಕದ್ದವ ಎಲ್ಲಿಹ ಹೇಳೆ! ಸಖಿ || ಇರುಳು ಮರಳಿತು ಚಂದ್ರಮ ಬಂದನು ನೀನೇ ಪುಣ್ಯವತಿ ಚಕೋರಿ || ಚಂದ್ರಮ ನಿನಗಾಗಿ ಪ್ರೀತಿ ಬೆಳದಿಂಗಳಾಗಿ ಮುತ್ತನಿತ್ತನೇ ನೀನೇ ಪುಣ್ಯವತಿ || ವಿರಹದ ಬೇಗೆಯಲಿ ರಾಧೆ ನಾ ಒಂಟಿಯಾದೆ ಶ್ಯಾಮ ಬ...

ಈಚೆಗೆ ಯಾಕೋ ತುಂಬ ಸಣ್ಣಗಾಗಿದ್ದೀರಿ ಅಂತ ಗೆಳೆಯರು ಪರಿಚಿತರೆಲ್ಲ ಹೇಳಲು ಶುರುಮಾಡಿದರು. ನನಗೇನಾಗಿದೆ ಧಾಡಿ ಧಾಂಡಿಗನಂತಿದ್ದೀನಿ – ಆಂತಾ ದಿನಾ ಹೇಳಿ ಹೇಳಿ ಬಾಯಿ ಒಣಗಿ ಹೋಯಿತು. ಮೊನ್ನೆ ಇವಳೂ ಒಮ್ಮೆ ಮೆಲ್ಲಗೆ ಹತ್ತಿರ ಬಂದು “ಯಾ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...