
ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು ಮೆರೆಸಿ ಅವನೆದೆಯನ್ನು ಸುಖದೊಳದ್ದುವುದು; ಎಲ್ಲೊ ಒಮ್ಮೊಮ್ಮೆ ತೆರೆಯುವನು ಅವನು ಅದನ್ನು, ಇಲ್ಲವೋ ಅಪರೂಪ ಸುಖ ಹಳಸಿಹೋಗುವುದು. ಅವನಂತೆ ನಾನು ಸಹ. ಉದ್ದ ಎದೆಸರದಲ್ಲಿ ಎಲ್ಲೊ ಅಲ್ಲಲ್ಲಷ್ಟೆ ಹರಳು ಮಿಂಚುವುದು...
ಸ್ಫೂರ್ತಿ ಬಂದಾಗಲೆಲ್ಲ ಕವನ ಬರೆ ಬರೆದು ಜುಬ್ಬದ ಜೇಬಿಗೆ ಸೇರಿಸುತ್ತಾ ಬಂದ ಕವಿಯ ಕಿಸೆಯಲ್ಲೇ ಕವನ ಸಂಕಲನ ಜುಬ್ಬ ಒಗೆಯುವ ಸಮಯ ಸಂಕಲನ ಬಿಡುಗಡೆ. ***** ೨೬-೦೩-೧೯೯೨...
ಅಂಜಿಕೆಯ ತೊಟ್ಟು ಕಳಚಿಟ್ಟು ಅವಳೊಳಗೆ ಒಂದಾದರೆ ಬದುಕು ಹಸನಾಗುವುದೆಂಬ ಕಲ್ಪನೆ ಭ್ರಮೆಯೂ ಇರಬಹುದು *****...
ಇದೇ ಭುವನಾ ಶಿವನ ಕವನಾ ನಾವು ದೇಗುಲ ವಾಗುವಾ ನುಡಿವ ದೇಗುಲ ನಡೆವ ದೇಗುಲ ವಿಶ್ವ ಜಂಗಮವಾಗುವಾ ಶಿವನ ಒಡ್ಡೋಲಗದಿ ನಾವೆ ನಂದಿ ಭೃಂಗಿ ಗಣಗಳು ನಾವೆ ಪಾರ್ವತಿ ಗಂಗೆ ಗೌರಿಯು ಬನ್ನಿ ಕುಣಿಯುವ ಗೆಳೆಯರು ಮಣ್ಣ ಭೂಮಿಯ ಮಂತ್ರ ಮಾಡುವ ಚಂದ ಸ್ವರ್ಗವ ಕಟ್...
ಕಾರ್ಖಾನೆಗಳಿಂದ ಹೊರ ಬರುವ ಹೊಗೆ, ವಾಹನಗಳಿಂದ ಬರುವ ಪೆಟ್ರೋಲಿನ ವಾಸನೆಗೆ ಉಸಿರುಗಟ್ಟಿಸುವ ಧಗೆ ದುರ್ಗಂಧದ ಅಲೆಗೆ ಹೆದರಿ ಓಡೋಡಿ ಸುಸ್ತಾಗಿ ಶುದ್ಧ ಗಾಳಿ ಸಿಗದೆ ಕಲುಷಿತಗೊಳಿಸಿದ ಕೃತಕ ನಾಗರೀಕತೆಯ ರಣ ಹದ್ದಿನ ಗೂಡಿಗೆ ವಿಧಿಯಿಲ್ಲದೇ ಮತ್ತೇ ಮರಳ...
ದುಡಿಮೆಯೊಳನ್ನದೊಡಗೂಡಿ ಜ್ಞಾನವಿರುತಿರಲು ಗಾಡಿ ಪುಸ್ತಕಗಳದ್ಯಾಕೋ ಮಾಡಿ ಕಲಿಯದ ಮೇಲೆ ಕುಡಿದುಣದೆ ಬರಿದು ಟಾನಿಕ್ಕುಗಳಿಂದೇನಹುದು? ಬಡತನದೊಳತಿ ಬಡತನವಜೀರ್ಣದೊಡಲು ಮೌಢ್ಯದೊಳತಿ ಮೌಢ್ಯ ದುಡಿಯದುಂಬೊಲವು – ವಿಜ್ಞಾನೇಶ್ವರಾ *****...
ಇಂದಿನಿಂದ ನೂರು ವರ್ಷದ ನಂತರ ನನ್ನ ಕವಿತೆಯನ್ನು ಓದುವಾತ ನೀನು ಯಾರು.. ಹೃದಯದ ಒಲವಿನ ಲತೆಯಲ್ಲಿ ಚಿಗುರಿರುವ ವಸಂತದ ಬೆಳಗಿನ ಸರಳವಾದ ಸಖ್ಯವನ್ನು ನಿನಗೆ ಮುಟ್ಟಿಸಲು ಅನುವಾದದಲ್ಲಿ ಹೂವಿನ ಗಂಧ ಹಕ್ಕಿಯ ಹಾಡಿನ ಛಂದ ಇಂದಿನ ಬಣ್ಣದ ಹೊಳಪು ನೂರು ವ...













