ಸ್ಫೂರ್ತಿ ಬಂದಾಗಲೆಲ್ಲ
ಕವನ
ಬರೆ ಬರೆದು
ಜುಬ್ಬದ ಜೇಬಿಗೆ
ಸೇರಿಸುತ್ತಾ
ಬಂದ
ಕವಿಯ
ಕಿಸೆಯಲ್ಲೇ
ಕವನ ಸಂಕಲನ
ಜುಬ್ಬ
ಒಗೆಯುವ
ಸಮಯ
ಸಂಕಲನ
ಬಿಡುಗಡೆ.
*****
೨೬-೦೩-೧೯೯೨