ಓ ನೋಡು ಬೆಳಗಾಯ್ತು ಮೂಡಲವು ಕೆಂಪಾಯ್ತು ಕೂಡಲದ ಸಂಗಯ್ಯ ಬಂದ ಬಂದ ಕಾಳರಾತ್ರಿಯ ಹಕ್ಕಿ ದೂರ ಹಾರುತ ಹೋತು ಶಿವತಂದೆ ಶುಭ ಬೆಳಗು ತಂದ ತಂದ ಶಿವಯೋಗದಾನಂದ ಶೃಂಗಾರ ಸುಂದರಿಯು ಶರಣಸುಂದರ ಪಾದ ತೊಳೆದಿರುವಳು ಮುಳ್ಳು ಮಲ್ಲಿಗೆ ಮಾಡಿ ಕಲ್ಲು ಸಂಪಿಗೆ ಮ...

ಬಂದಾಗ ಯೌವ್ವನದ ಮತ್ತು ಮುಗ್ಧತೆ ಸ್ವಾತಂತ್ರ್ಯಕ್ಕೆ ಕಲ್ಲು ಬಿತ್ತು ನೋಡುವ ನೋಟಕೆ ಆಡುವ ಮಾತಿಗೆ ಅಂಕೆ ಹೊಸ್ತಿಲು ದಾಟದಂತೆ ಸೀಮಾರೇಖೆ ಹುಡುಗಾಟಕೆ ಹೊರನೋಟಕೆ ಹಾಕಿದರು ದೊಡ್ಡ ಪರದೆ ಪ್ರಾರಂಭ ತಪ್ಪು ಒಪ್ಪುಗಳ ತಗಾದೆ ಅತ್ತ ಹೋಗದಿರು ಇತ್ತ ನಿಲ್...

ಆಕಾಶದ ನೀಲಿಯಲಿ ಅದ್ದಿದ ಬಟ್ಟೆ, ಕನಸುಗಳ ನೇಯ್ದು ಒಂದು ದಿವಸ, ಬದುಕಿನ ವಸಂತ ಅರಳಿದ ಬಿಸಿಲಿನ ದಗೆಗೆ ಕುಡಿಯುತ್ತಿರುವ ನೀರು ಆಕಾಶದ ಹನಿ. ಗಜ ಬಟ್ಟೆಯ ಜೋಳಿಗೆಯ ತುಂಬ, ಅವರಿವರ ಒಲವು ಮಾತು ಬಿರಿಸು, ಮಾತಾಪು, ಮತ್ತೆ ನನ್ನ ನಲ್ಲನ ವಸಗೆ ಮೋಡಗಳು...

ಭಾರತ ಮಾತೆಯ ಮಕ್ಕಳು ನಾವು ಭಾರತೀಯರು ನಾವು ಭಾಗ್ಯದಯವಾಗಲಿ ಬೆಳಕಿನ ಕಿರಣ ಭಾರತೀಯರ ಜನಮನ ಒಂದೇ ಒಂದೇ ಎನ್ನುವೆವು ನಾವೆಲ್ಲ ಒಂದೇ ಎನ್ನುವೆವು || ಭಾ || ಮಣ್ಣಿನ ಮಕ್ಕಳು ನಾವೆ ನಾವು ಈ ಮಣ್ಣಲಿ ಬೆಳೆದ ಸಸಿಗಳು ಹಸಿರು ಒಂದೇ ಎನ್ನುವೆವು ಉಸಿರು ...

ಗೆಳೆಯಾ ನಾವಿಂದು ಕೂಡಿದ್ದೇವೆ ಧ್ಯಾನಕ್ಕಾಗಿ ಮತ್ತೆ ಮನದ ಮೈಲಿಗೆ ತೊಳೆಯುವ ತಪಸ್ಸಿಗಾಗಿ ತೊಳೆಬೇಕು ತನವ ಮಾಡಬೇಕು ಹವನ ಆ ಮನದಲಿ ಕಾಣಬೇಕು ಸತ್ ಚಿತ್ತ ಶಿವನ ಮೃತ್ಯೂ ನಗುತ್ತಿದೆ ನಿನ್ನ ಬಾಳಿನ ಬಾಗಿಲಿನಲಿ ಸತ್ಯ ಅಡಗಿದೆ ನಿನ್ನ ಬದುಕಿಗೆ ಆಳದಲಿ...

(ಕೆಲವು ಸಾಲುಗಳು) ಕಾಂಬನೊಬ್ಬ ಒಳಗಿಹನು ಬಲ್ಲನೋರಣದ ಹಂಚು-ಸಂಚು. ಅದು ಕಾಣದಣ್ಣ ಕಾಲಲ್ಲೆ ಇದು ಅಡಿಗಡಿಗು ಅದರ ಅಂಚು. ಊದಿ ಉಸಿರನುಬ್ಬಿಸುವನೆಮ್ಮ ಕಣ್ಣಾಚೆ ಶಿಖರಗಳಿಗೆ ಹುಟ್ಟು-ಬಾಳುಗಳ ದರಿಗೆ ನೂಗಿದೊಲು ಹಿಂದೆ ಒಮ್ಮೆ ನಮಗೆ ಕಾಲಪಥಿಕನಾ ಕಿವಿಗ...

೧ ಕೂಗುತಲಿದೆ ಕಹಳೆಯು- ನವಯುಗ ವೈತಾಳಿಯು! ‘ಬಾಳಿದು ಕಾಳೆಗದ ಕಣ!’ ಹೇಳುತಿರುವುದಿಂತಾ ಸ್ವನ ! ಕೂಗುತಲಿದೆ ಕಹಳೆಯು…. ನಮಯುಗವೈತಾಳಿಯು! ೨ ‘ಬೇಡ ಕದನ’ ಎಂದೊರೆವಾ ಕೇಡುಗಾರನೆಲ್ಲಿರುವ….? ಹೇಡಿ ಏನ ಬಲ್ಲನವ? ನಾಡಿಗೆ ಕಾಳೆಗವೆ ಜೀವ...

ಅನ್ನ ಬ್ರಹ್ಮ ಅನ್ನ ಬ್ರಹ್ಮ| ನಿನ್ನಿಂದಲೇ ನಮ್ಮ ಜನ್ಮ| ಒಡಲ ಅಗ್ನಿಯೊಡನೆ ನೀನು ಸುಡಲು ಚೈತನ್ಯ ಜನ್ಯ|| ನಿನ್ನ ಪ್ರಸಾದವೇ ಪರಮ ಶಕ್ತಿ| ನಿನ್ನಿಂದಲೇ ಬೆಳೆಯುವುದು ಯುಕ್ತಿ| ನಿತ್ಯ ನಿನ್ನ ಸ್ಮರಿಸಿ ಸ್ವೀಕರಿಸುವುದೇ ಸೂಕ್ತಿ|| ಬ್ರಹ್ಮ ನಿನ್ನ ಸ...

ಬೆರಳು ಕತ್ತರಿಸಿ ಕರುಳ ಕದ್ದವರು ಮರುಳು ಮಾಡಿದರು ಮಾತನ್ನು ನಡೆದ ಕಡೆಯೆಲ್ಲ ನೆರಳ ನೆಟ್ಟವರು ಮಸುಕು ಮಾಡಿದರು ಮನಸನ್ನು. ಬೆರಳು ಕೊಟ್ಟವರೆ ಕರುಳ ಕೇಳುವ ಕಾಲ ಬಂತೆ ಈಗ! ಬೆರಳು-ಕರುಳುಗಳ ರಾಜಕೀಯದಲಿ ಬತ್ತಿಹೋಯಿತೆ ರಾಗ! ಆರ್‍ಜುನ ದೇವನ ಬಿಲ್ಲಿ...

(ಪುಷ್ಯ ಶುದ್ಧ ಅಷ್ಟಮೀ ರಾತ್ರಿ ೧೩-೧-೪೪) ಹರಿವ ಮುಗಿಲ ನೌಕೆಯೇರಿ ಬರುವ ಚಂದ್ರ ಗಗನ ಸಾರಿ ಅರ್ಧ ಮುಳುಗಿ ಅರ್ಧ ಬೆಳಗಿ ನಗುವ ರಜನಿಗೂಡೆಯನಾಗಿ ಕಳೆಯ ಕೊಟ್ಟು ಬೆಳಕನುಟ್ಟು ಉಡುಗಣಂಗಳೊಂದಿಗಿಟ್ಟು ಜಗವನಪ್ಪಿ ನಭವನೊಪ್ಪಿ ಜೀವಕೊಂದು ಕಳೆಯ ಕೊಟ್ಟು ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...