ಬಂದಾಗ ಯೌವ್ವನದ ಮತ್ತು
ಮುಗ್ಧತೆ ಸ್ವಾತಂತ್ರ್ಯಕ್ಕೆ ಕಲ್ಲು ಬಿತ್ತು
ನೋಡುವ ನೋಟಕೆ ಆಡುವ ಮಾತಿಗೆ ಅಂಕೆ
ಹೊಸ್ತಿಲು ದಾಟದಂತೆ ಸೀಮಾರೇಖೆ
ಹುಡುಗಾಟಕೆ ಹೊರನೋಟಕೆ
ಹಾಕಿದರು ದೊಡ್ಡ ಪರದೆ
ಪ್ರಾರಂಭ ತಪ್ಪು ಒಪ್ಪುಗಳ ತಗಾದೆ
ಅತ್ತ ಹೋಗದಿರು ಇತ್ತ ನಿಲ್ಲದಿರು
ಇರುಳು ಬರುವ ಮುನ್ನ ಮನೆಸೇರು
ಕಟ್ಟು ಕಟ್ಟಳೆಗಳ ಬಿಗಿ ಗಂಟು
ಕಾಲಿಗೆ ತೊಡಿಸಿದರು ಚಿನ್ನದ ಬೇಡಿ
ಶಾಸ್ತ್ರ ಸಂಪ್ರದಾಯಗಳ ಗಾರುಡಿ
ಎಲ್ಲಿಯ ಆಟ ಇನ್ನೆಲ್ಲಿಯ ನೋಟ
ಪಾತ್ರೆ ಪರಡಿಗಳೊಂದಿಗೆ ಕಾದಾಟ
ಪ್ರಾಯದ ಆದಿಯಲ್ಲೇ ಅಮ್ಮನ ಆದೇಶ
ಸೀತೆ ಸಾವಿತ್ರಿಯಂತಿರು ಒಣ ಉಪದೇಶ
ಬಾಲ್ಯದ ಕನಸುಗಳಿಗೆ ಬಿಟ್ಟು ಎಳ್ಳು ನೀರು
ಯೌವ್ವನ ಕಾಲಿಟ್ಟೊಡನೆ ಬದುಕು ಏರುಪೇರು.
*****