
ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ- ತಕ್ಕೊ! ಪದಗೊಳ್ ಬಾಣ! ೧ ಬಗವಂತ್ ಏನ ಬೂಮೀಗ್ ಇಳದು ನನ್ ತಾಕ್ ಬಂದಾಂತ್ ಅನ್ನು; ಪರ್ ಗಿರೀಕ್ಸೆ ಮಾಡ್ತಾನ್ ಔನು- ಬಕ್ತನ್ ಮೇಲ್ ಔನ್ ಕಣ್ಣು! ೨ ‘...
ಅಷ್ಟಷಟ್ಟದಿಯಲ್ಲಿ ಉಯ್ಯಾಲೆಯಾಡುತಿದೆ ಕೌತುಕದ ಬಗೆ; ಹಾಗೆ ಇದು, ಹೀಗೆ ಇದು, ಎನುತ ಜೀಕುಜೀಕಿನ ವಿಲಾಸದಲಿ ತನ್ಮಯವಾಗಿ, ಸಂಶಯವೆ ಸಿಂಗಾರವಡೆದು ಸ್ವಚ್ಛಂದದಲಿ ಬೀರಿದುದೆ ನೋಟ, ಹಾರಿದುದೆ ಹುಬ್ಬೆನುವಂತೆ ಕುಣಿಸುತಿದೆ ಅಂಗಾಂಗ; ಹೃದ್ಯ ಚಿತ್ತತರಂಗ...
ಎಲ್ಲಿ ನೋಡಿದರಲ್ಲಿ ರೈತ ಬವಣೆಗಳು ನೂರು ಬೆಳೆಯದಾವುದಾದರು ಈರುಳ್ಳಿ ಸುಲಿದ ನೀರು ಕೊಳತ ಟೊಮೇಟೋದೀಪರಿಗೆ ಬಂದೀತು ಕಾರು (ವಾಂತಿ) ಹೇಳಿ ಕೇಳಿ ಕಲ್ಪವೃಕ್ಷವೆಂದವರ ಆಸೆಗಳು ಚೂರು ಮೊಳೆತೆನ್ನಾರಂಭದಾಶಯಕೆಲ್ಲಿಹುದು ನೀರು – ವಿಜ್ಞಾನೇಶ್ವರಾ ...
ಕಟ್ಟಿದ ಕಾಲೀ ಆಣೀ ಪರದಾಣೀ ಕೋಲೇ ಕಟ್ಟಿದ ಕಾಲೀಯಾ ಪರದಾಣೀ ನನ್ನ ಒಡೆಯ ಕಂತೂಕೂ ಹೋಗೂವಾ ಶೂಲಮ್ಮ ಕೋಲೇ || ೧ || ಊರ ವಂದೇ ಹತ್ತು ಮಂದಿಗೆ ಹೇಳೂಕೆಯಾ ಕೊಡುವಾನೋ ಮೀರಾಶೀ ಮಗನೇ ಊರ ವಂದೇ ಹತ್ತು ಮಂದೀ ಶೈವಾಗೆ ಬರುವಾರೆ ಕೋಲೇ || ೨ || ಕೊಪ್ಪರದಾ ...
ಹಾರಿಬಂತೋಂದು ಹಕ್ಕಿ ಸಂಜೆಯಲಿ ಮೈದಪ್ಪಿ ಒಳಗೆ ಹಾರಿಬಂತೊಂದು ಹಕ್ಕಿ. ಹೊರ ಹೋಗಲರಿಯದೆ ತನ್ನವರ ಕಾಣದೆ ಬಂದ ಬಗಯರಿಯದೆ ಅತ್ತಿತ್ತ ನೋಡುತಿದೆ ಭಯದಿಂದ ನಡುಗುತಿದೆ. ಇವರಾರೊ ಹೊಸಬರು ತನ್ನನಿವರರಿಯರು ಮೊದಲಿವರು ಕಾಣರು ಬಂಧನದಿ ಬದುಕುವರು ತನ್ನ ಸೆ...
ಏಳೆನ್ನ ಮನದನ್ನೆ! ನೋಡು, ಪೊಳ್ತರೆ ಬಂದು ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸೆದು ತಾರೆಯರಳುಗಳನಲ್ಲಿಂದೆ ಚೆಲ್ಲಾಡಿಹನು; ನಿದ್ದೆ ಸಾಕಿನ್ನೀಗ ಮುದ್ದಣುಗಿ ಬಾರ. *****...
ಜಾಣ ಕುಂಬುರನ ಮನಿ ಯಾವ ಕಡಿಗಽದ ಕಪ್ಪುರದ ತಿಪ್ಪಿ ಎಡಽ ಬಲಽ| ಸೋ ||೧|| ಕಪ್ಪುರದ ತಿಪ್ಪಿ ಎಡ ಬಲ ಮಾಡಿಕೊಡು| ಜಾಣ ಕುಂಬಾರನಽ ಮನಿಽಗ್ವ್ಹಾದಽ| ಸೋ ||೨|| ಮುಂಜಾಳಿ ಕುಂಬಾರಣ್ಣಾ ಮಸರ ಬೋನುಂಡಾನ| ಹಾರ್‍ಯಾರಿ ಕೆಸರ ತುಳಽದಾನಽ| ಸೋ ||೩|| ಹಾರಿ ಹ...
ಹೊಲೆಯನಾರೂರ ಹೊರಗಿರುವವನೆ ಗೆಳೆಯ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ||ಪಲ್ಲ|| ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ| ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುನವ ಹೊಲೆಯ ||೧|| ...
(ವಿಸ್ತೃತ ಕವನ) ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು || ಆಕಾಶವು ಅತ್ತಿದೆ ಧರೆ ಧಗಧಗ ಉರಿದಿದೆ ಪಂಚಭೂತ ನಮ್ಮ ನೋಡಿ ನೇಣುಗಂಬ ಹುಡುಕಿದೆ ಉಳಿಯಲಿಲ್ಲಿ ಎಲ್ಲ ಎಲ್ಲ ಬದುಕಲಿ ನಮ್ಮ ಸಾವು ನೋಡಿ ...













